ಮುಂಬೈ:ಶನಿವಾರದ ವಿಶೇಷ ವಹಿವಾಟಿನ ಅವಧಿಯಲ್ಲಿ ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಲಾಭ ಕಂಡವು. ಈ ಮೂಲಕ ಷೇರುಪೇಟೆಯಲ್ಲಿ ಸತತ ಮೂರನೇ ದಿನವೂ ರ್ಯಾಲಿ ಮುಂದುವರಿಯಿತು.
ಪ್ರಾಥಮಿಕ ಸೈಟ್‌ನಲ್ಲಿ ಪ್ರಮುಖ ಅಡೆತಡೆಗಳು ಅಥವಾ ವೈಫಲ್ಯಗಳನ್ನು ನಿಭಾಯಿಸಲು ತಮ್ಮ ಸಿದ್ಧತೆ ಪರಿಶೀಲಿಸುವುದಕ್ಕಾಗಿ ಶನಿವಾರದಂದು ಎನ್‌ಎಸ್‌ಇ ಮತ್ತು ಬಿಎಸ್‌ಇ ವಿಶೇಷ ವಹಿವಾಟು ನಡೆಸಿದವು. ಈ ವಿಶೇಷ ವಹಿವಾಟಿನಲ್ಲಿ, 30-ಷೇರುಗಳ ಬಿಎಸ್‌ಇ ಸೂಚ್ಯಂಕ 88.91 ಅಂಕಗಳು ಅಥವಾ ಶೇಕಡಾ 0.12ರಷ್ಟು ಏರಿಕೆಯಾಗಿ 74,005.94ಕ್ಕೆ ತಲುಪಿತು. ಎನ್​ಎಸ್​ಇ ನಿಫ್ಟಿ 50 ಸೂಚ್ಯಂಕ 35.90 ಅಂಕಗಳು ಅಥವಾ ಶೇಕಡಾ 0.16ರಷ್ಟು ಏರಿಕೆಯಾಗಿ 22,502 ಕ್ಕೆ ಮುಟ್ಟಿತು.
ಪ್ರಮುಖ ಷೇರುಗಳಾದ ನೆಸ್ಲೆ, ಪವರ್ ಗ್ರಿಡ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭ ಗಳಿಸಿದವು. ಜೆಎಸ್‌ಡಬ್ಲ್ಯೂ ಸ್ಟೀಲ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ಹಿನ್ನಡೆ ಕಂಡವು.
ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.77 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.48 ರಷ್ಟು ಏರಿತು. ಕೈಗಾರಿಕೆಗಳು, ಆರೋಗ್ಯ, ದೂರಸಂಪರ್ಕ, ಬಂಡವಾಳ ಸರಕುಗಳು ಮತ್ತು ರಿಯಾಲ್ಟಿ ವಲಯಗಳ ಷೇರುಗಳು ಲಾಭ ಗಳಿಸಿದವು.
ಕಳೆದ ಒಂದು ವಾರದ ವಹಿವಾಟಿನಲ್ಲಿ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 1,341.47 ಅಂಕಗಳು ಅಥವಾ ಶೇಕಡಾ 1.84 ಏರಿಕೆಯಾಯಿತು. ನಿಫ್ಟಿ 50 ಸೂಚ್ಯಂಕವು 446.8 ಅಂಕಗಳು ಅಥವಾ ಶೇಕಡಾ 2ರಷ್ಟು ಹೆಚ್ಚಳ ಕಂಡಿತು. ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಶುಕ್ರವಾರ 253.31 ಅಂಕಗಳಷ್ಟು ಏರಿಕೆಯಾಗಿ 73,917.03 ಕ್ಕೆ ತಲುಪಿತ್ತು. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 62.25 ಅಂಕಗಳಷ್ಟು ಏರಿಕೆಯಾಗಿ 22,466.10 ಕ್ಕೆ ಮುಟ್ಟಿತ್ತು.
ಶುಕ್ರವಾರದಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತೀಯ ಷೇರುಪೇಟೆಗೆ ವಾಪಸಾಗಿದ್ದು ವಿಶೇಷವಾಗಿತ್ತು. ಕಳೆದ ಕೆಲವು ದಿನಗಳಿಂದ ಎಫ್‌ಐಐಗಳ ಮಾರಾಟ ಪ್ರಮಾಣ ಜಾಸ್ತಿ ಇತ್ತು. ಆದರೆ, ಶುಕ್ರವಾರದಂದು 1,616.79 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಎಫ್‌ಐಐಗಳು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. “ಇದೀಗ ಗಮನಾರ್ಹ ಪ್ರವೃತ್ತಿಯೆಂದರೆ ಎಫ್‌ಐಐಗಳು ಶುಕ್ರವಾರ ಖರೀದಿಗೆ ವಾಪಸಾಗಿರುವುದು. ಇದು ಮಾರುಕಟ್ಟೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ” ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಸೋಮವಾರದಂದು ಷೇರು ಮಾರುಕಟ್ಟೆಯಲ್ಲಿ ನಡೆಯುವುದಿಲ್ಲ ವಹಿವಾಟು: ಮೇ 20ರಂದು ರಜೆ ಘೋಷಿಸಿರುವುದೇಕೆ?

ಎಲೆಕ್ಷನ್​ ರೆಸಿಸ್ಟಂಟ್​ ಸ್ಟಾಕ್​ಗಳು: ಚುನಾವಣೆ ಸಂದರ್ಭದಲ್ಲಿ ಈ ಷೇರುಗಳು ಹೆಚ್ಚು ಸುರಕ್ಷಿತ?

1 ಷೇರಿಗೆ 3 ಉಚಿತ ಷೇರುಗಳ ಉಡುಗೊರೆ; 2170% ಹೆಚ್ಚಳ ಕಂಡ ಸ್ಟಾಕ್​ನಿಂದ ಹೂಡಿಕೆದಾರರಿಗೆ ಮತ್ತೆ ಭರ್ಜರಿ ಲಾಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 10 =
Remember me
