ಮುಂಬೈ:ಸೂಚ್ಯಂಕದ ಪ್ರಮುಖ ಸ್ಟಾಕ್​ ಆಗಿರುವ ರಿಲಯನ್ಸ್ ಇಂಡಸ್ಟ್ರೀಸ್​ ಲಾಭ ಮತ್ತು ದೇಶದಲ್ಲಿ ಸಕಾರಾತ್ಮಕ ಹಣದುಬ್ಬರ ಅಂಕಿಅಂಶಗಳ ಹಿನ್ನೆಲೆಯಲ್ಲಿ ಷೇರುಪೇಟೆ ಸತತ ಮೂರನೇ ದಿನವೂ ಗೆಲುವಿನ ಮೆರವಣಿಗೆಯನ್ನು ಮುಂದುವರಿಸಿತು. ಮಂಗಳವಾರ ಬೆಂಚ್‌ಮಾರ್ಕ್ ಬಿಎಸ್​ಇ ಸೂಚ್ಯಂಕ 328 ಅಂಕಗಳಷ್ಟು ಏರಿದರೆ, ನಿಫ್ಟಿ ಸೂಚ್ಯಂಕ 22,200 ಮಟ್ಟವನ್ನು ದಾಟಿತು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 328.48 ಅಂಕಗಳು ಅಥವಾ ಶೇಕಡಾ 0.45 ರಷ್ಟು ಏರಿಕೆಯಾಗಿ 73,104.61 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಈ ಸೂಚ್ಯಂಕವು 510.13 ಅಂಕಗಳು ಅಥವಾ ಶೇಕಡಾ 0.70 ರಷ್ಟು ಏರಿಕೆ ಕಂಡು 73,286.26ಕ್ಕೆ ತಲುಪಿತ್ತು. ಈ ಸೂಚ್ಯಂಕದಲ್ಲಿನ 20 ಷೇರುಗಳು ಲಾಭ ಕಂಡರೆ, 10 ಸ್ಟಾಕ್​ಗಳು ಕುಸಿತ ಅನುಭವಿಸಿದವು.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 113.80 ಅಂಕಗಳು ಅಥವಾ ಶೇಕಡಾ 0.51 ರಷ್ಟು ಏರಿಕೆಯಾಗಿ 22,217.85 ಕ್ಕೆ ಸ್ಥಿರವಾಯಿತು. ಇದರಲ್ಲಿನ 36 ಷೇರುಗಳ ಲಾಭ ಕಂಡರೆ, 14 ಸ್ಟಾಕ್​​ಗಳು ನಷ್ಟ ಅನುಭವಿಸಿದವು.
ಲೋಹ ಮತ್ತು ಆಟೋ ಷೇರುಗಳು ಲಾಭದಲ್ಲಿ ಮುನ್ನಡೆದರೆ, ಎಫ್‌ಎಂಸಿಜಿ ಮತ್ತು ಫಾರ್ಮಾ ಷೇರುಗಳು ಕುಸಿತ ಕಂಡವು.
ಮಹೀಂದ್ರಾ ಆ್ಯಂಡ್​ ಮಹೀಂದ್ರಾ, ಲಾರ್ಸನ್ ಆ್ಯಂಡ್​ ಟೂಬ್ರೊ, ಜೆಎಸ್‌ಡಬ್ಲ್ಯೂ ಸ್ಟೀಲ್, ಎನ್‌ಟಿಪಿಸಿ, ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮಾರುತಿ ಕಂಪನಿಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ನೆಸ್ಲೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಐಟಿಸಿ ಮತ್ತು ಏಷ್ಯನ್ ಪೇಂಟ್ಸ್ ಕಂಪನಿಗಳ ಷೇರುಗಳು ನಷ್ಟ ಕಂಡವು.
ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ 11 ತಿಂಗಳ ಕನಿಷ್ಠ ಮಟ್ಟವಾದ ಶೇಕಡಾ 4.83 ಇಳಿಕೆಯಾಗಿದೆ. ಏಕೆಂದರೆ ಕೆಲವು ಅಡುಗೆ ವಸ್ತುಗಳ ಬೆಲೆಗಳು ಇಳಿಮುಖವಾಗಿವೆ. ಒಟ್ಟಾರೆ ಆಹಾರ ವಸ್ತುಗಳ ಬೆಲೆ ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದೆ ಎಂದು ಸರ್ಕಾರದ ಅಂಕಿಅಂಶಗಳು ಸೂಚಿಸಿವೆ.
ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್, “ಭಾರತದ ಚಿಲ್ಲರೆ ಹಣದುಬ್ಬರ ಮಿತಗೊಳಿಸುವಿಕೆ ಮತ್ತು ಏಷ್ಯಾ ರಾಷ್ಟ್ರಗಳ ಅನುಕೂಲಕರ ಸಂಕೇತಗಳ ನೆರವಿನಿಂದ ದೇಶೀಯ ಮಾರುಕಟ್ಟೆಯು ಇತ್ತೀಚಿನ ಕನಿಷ್ಠ ಮಟ್ಟದಿಂದ ತನ್ನ ಚೇತರಿಕೆಯ ಹಾದಿಯನ್ನು ಉಳಿಸಿಕೊಂಡಿದೆ” ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನದ ಸುತ್ತ ನಡೆಯುತ್ತಿರುವ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು, ಷೇರು ಮಾರುಕಟ್ಟೆಯಲ್ಲಿ ಚಂಚಲತೆಯ ವ್ಯಾಪಾರವು ಸಮೀಪದ ಅವಧಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ ಎಂದು ನಾಯರ್ ಹೇಳಿದರು.
ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್‌ಇ ಸ್ಮಾಲ್‌ಕ್ಯಾಪ್ ಗೇಜ್ ಶೇಕಡಾ 1.79 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 1.14 ರಷ್ಟು ಏರಿಕೆಯಾಗಿದ್ದು ಮಂಗಳವಾರದ ವಿಶೇಷತೆಯಾಗಿದೆ.
ಯುಟಿಲಿಟೀಸ್​ ಶೇಕಡಾ 2.80, ವಿದ್ಯುತ್ (ಶೇ 2.51), ಕೈಗಾರಿಕೆಗಳು (ಶೇ 2.40), ದೂರಸಂಪರ್ಕ (ಶೇ 2.27), ಬಂಡವಾಳ ಸರಕುಗಳು (ಶೇ 2.11), ಸರಕುಗಳು (ಶೇ 1.87), ಸೇವೆಗಳು (ಶೇ 1.78), ಶೇ.), ಇಂಧನ (ಶೇ. 1.52) ಮತ್ತು ರಿಯಾಲ್ಟಿ (ಶೇ. 1.03) ವಲಯಗಳ ಸೂಚ್ಯಂಕಗಳು ಏರಿಕೆ ಕಂಡಿವೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಟೋಕಿಯೊ ಲಾಭ ಕಂಡರೆ, ಶಾಂಘೈ ಮತ್ತು ಹಾಂಗ್ ಕಾಂಗ್​ ಕುಸಿತ ದಾಖಲಿಸಿದವು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ಕಂಡುಬಂದಿತು. ಅಮೆರಿಕದ ವಾಲ್ ಸ್ಟ್ರೀಟ್​ನಲ್ಲಿ ಕೂಡ ಸೋಮವಾರ ಮಿಶ್ರ ವಹಿವಾಟು ಇತ್ತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 4,498.92 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.

ಜಿಎಸ್​ಟಿ ವಿವಾದ ಪ್ರಕರಣ ಇತ್ಯರ್ಥ ಇನ್ನು ಸುಲಭ: ವರ್ಷಾಂತ್ಯದಲ್ಲಿ ಮೇಲ್ಮನವಿ ನ್ಯಾಯಮಂಡಳಿ ಅಸ್ತಿತ್ವಕ್ಕೆ

ಇಪಿಎಫ್​ಒ ಹಣ ವಾಪಸು ಪಡೆಯಲು ಸ್ವಯಂಚಾಲಿತ ವ್ಯವಸ್ಥೆ ಶುರು

ರಜನೀಕಾಂತ್ ಮಗಳು- ಅಳಿಯ ಇಬ್ಬರೂ ಬೇರೆಯವರ ಜತೆ ಡೇಟಿಂಗ್​ ಮಾಡಿ ಪರಸ್ಪರರಿಗೆ ಮೋಸ ಮಾಡಿದ್ದಾರೆ: ಗಾಯಕಿಯ ಆಘಾತಕಾರಿ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
