ನವದೆಹಲಿ:ಉತ್ತರ ಪ್ರದೇಶ 8, ಹಿಮಾಚಲ ಪ್ರದೇಶ 1 ಮತ್ತು ಕರ್ನಾಟಕದಲ್ಲಿ 1 ಸೀಟನ್ನು ತನ್ನದಾಗಿಸಿಕೊಳ್ಳುವ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ಗಳಿಸಲು 4 ಸೀಟುಗಳಷ್ಟೇ ಬಾಕಿ ಇದೆ. 240 ಸದಸ್ಯರಿರುವ ರಾಜ್ಯಸಭೆಯಲ್ಲಿ ಎನ್​ಡಿಎ ಸಂಖ್ಯೆ 97ಕ್ಕೇರಿದೆ. ಮಂಗಳವಾರ ಬಿಜೆಪಿ 10 ರಾಜ್ಯಸಭಾ ಸ್ಥಾನಗಳನ್ನು ಗೆದ್ದುಕೊಂಡಿತು. ಇದಕ್ಕೂ ಮುನ್ನ 20 ಸೀಟುಗಳಿಗೆ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.
30 ಸೀಟುಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಎನ್​ಡಿಎ ಮೈತ್ರಿಕೂಟದ ಸಂಖ್ಯಾಬಲ 117ಕ್ಕೆ ತಲುಪಿದೆ. ಸದ್ಯ ರಾಜ್ಯಸಭೆಯಲ್ಲಿ ಬಿಜೆಪಿ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. 97 ಸದಸ್ಯರಲ್ಲಿ ನಾಮನಿರ್ದೇಶನ ಮೂಲಕ ಆಯ್ಕೆಯಾಗಿದ್ದ 5 ಸದಸ್ಯರು ಈಗಾಗಲೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 29.
ರಾಜ್ಯಸಭೆಯ ಒಟ್ಟು ಸದಸ್ಯರ 245 ಆಗಿದ್ದರೂ, ಜಮ್ಮು-ಕಾಶ್ಮೀರದ 4 ಸೀಟುಗಳನ್ನು ಇನ್ನೂ ಭರ್ತಿ ಮಾಡಲಾಗಿಲ್ಲ. ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗಳ ಬಳಿಕ ಈ ಸ್ಥಾನಗಳು ಭರ್ತಿಯಾಗಲಿವೆ. ನಾಮನಿರ್ದೇಶಿತ ವರ್ಗದ ಅಡಿಯಲ್ಲಿ ಖಾಲಿ ಉಳಿದಿರುವ ಆರು ಸ್ಥಾನಗಳನ್ನು ಭರ್ತಿ ಮಾಡಿದ ನಂತರ ಮತ್ತು ಹೊಸದಾಗಿ ಚುನಾಯಿತರಾದವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಆಡಳಿತಾರೂಢ ಎನ್​ಡಿಎ ಮೈತ್ರಿಕೂಡ ಮುಂಬರುವ ಏಪ್ರಿಲ್​ನಲ್ಲಿ ಬಹುಮತ ಪಡೆಯುವ ಸಾಧ್ಯತೆಯಿದೆ.
ಪ್ರತಿಪಕ್ಷಗಳ ಬಲ 100ಕ್ಕಿಂತ ಕಮ್ಮಿ 15 ರಾಜ್ಯಗಳಲ್ಲಿ 56 ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದ 30 ಸ್ಥಾನ ಹೊರತುಪಡಿಸಿ, ಕಾಂಗ್ರೆಸ್ 9, ಎಸ್​ಪಿ 2, ಟಿಎಂಸಿ 4, ವೈಎಸ್​ಆರ್​ಸಿಪಿ 3, ಆರ್​ಜೆಡಿ 2, ಬಿಜೆಡಿ 2 ಮತ್ತು ಎನ್​ಸಿಪಿ, ಶಿವಸೇನೆ, ಬಿಆರ್​ಎಸ್ ಮತ್ತು ಜೆಡಿ( ಯು) ತಲಾ ಒಂದು ಸೀಟುಗಳನ್ನು ಗೆದ್ದಿವೆ. ಕಾಂಗ್ರೆಸ್ ಸ್ಥಾನಕ್ಕೆ 30ಕ್ಕಿಂತ ಕಡಿಮೆಯಾಗಿರುವುದರಿಂದ ವಿಪಕ್ಷಗಳ ಒಟ್ಟು ಸಂಖ್ಯೆ 100ಕ್ಕಿಂತಲೂ ಕಡಿಮೆಯಿದೆ ಎನ್ನುವುದು ಗಮನಾರ್ಹ.
ಅಡ್ಡಮತದಾನ ಪರಿಣಾಮ:ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನಗಳ ಪರಿಣಾಮವಾಗಿ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ತೀವ್ರ ಮುಖಭಂಗ ಅನುಭವಿಸಿವೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈ ಗೆಲುವುಗಳು ಬಿಜೆಪಿಯನ್ನು ರಾಜಕೀಯವಾಗಿ ಬಲಿಷ್ಠಗೊಳಿಸಿರುವುದಲ್ಲದೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಪತನಗೊಳ್ಳುವ ಸಾಧ್ಯತೆಯಿದೆ. ಅಲ್ಲಿ 6 ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಸುಲಭವಾಗಿ ಗೆಲ್ಲಬೇಕಿದ್ದ ಏಕೈಕ ರಾಜ್ಯಸಭೆ ಸೀಟನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಹೀಗಾಗಿ, ಹಿರಿಯ ಕಾಂಗ್ರೆಸ್ ನಾಯಕ, ಸುಪ್ರೀಂಕೋರ್ಟ್ ವಕೀಲ ಅಭಿಷೇಕ್ ಮನುಸಿಂಘಿ ಕೂಡ ಮುಜುಗರಕ್ಕೀಡಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯ ಮುಖ್ಯ ಸಚೇತಕ, ಶಾಸಕ ಮನೋಜ್ ಕುಮಾರ್ ಪಾಂಡೆ ಅಡ್ಡ ಮತದಾನ ಮಾಡಿದ್ದರು.
ಕೆಲ ವರ್ಷಗಳ ನಿರೀಕ್ಷೆ:ಮೇಲ್ಮನೆಯಲ್ಲಿ ಬಹುಮತ ಸಾಧಿಸು ವುದನ್ನೇ ಬಿಜೆಪಿ ಹಲವು ವರ್ಷದಿಂದ ಕಾಯುತ್ತಿದೆ. ಇದು ಸಾಧ್ಯವಾದಲ್ಲಿ ಬಹು ಮತವಿಲ್ಲದ ಕಾರಣ ಬಾಕಿ ಉಳಿದುಕೊಂಡಿ ರುವ ಹಲವು ವಿಧೇಯಕಗಳಿಗೆ ಅನು ಮೋದನೆ ಪಡೆದುಕೊಳ್ಳಲು ನೆರವಾಗಲಿದೆ. ಈ ಹಿಂದೆ ಮೇಲ್ಮನೆಯಲ್ಲಿ ಪ್ರಮುಖ ಶಾಸನಗಳನ್ನು ಅಂಗೀಕರಿಸಲು ಆಡಳಿತಾರೂಢ ಬಿಜೆಪಿಯು ಬಿಜೆಡಿ, ವೈಎಸ್​ಆರ್​ಸಿಪಿಯಂತಹ ಪಕ್ಷಗಳ ಬೆಂಬಲ ಕೋರಿತ್ತು. ಒಡಿಶಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಡಿ ಮತ್ತು ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ವೈಎಸ್​ಆರ್​ಸಿಪಿ, ರಾಜ್ಯಸಭೆಯಲ್ಲಿ ತಲಾ 9 ಸಂಸದರನ್ನು ಹೊಂದಿದೆ. ಬಿಆರ್​ಎಸ್ 7, ಬಿಎಸ್​ಪಿ, ಐಯುಎಂಎಲ್ ಮತ್ತು ಟಿಡಿಪಿ ಬಳಿ ತಲಾ ಒಬ್ಬ ಸಂಸದರಿದ್ದಾರೆ.
IPL​ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಬಿಗ್ ಶಾಕ್! ಸ್ಟಾರ್​ ಆಟಗಾರನಿಗೆ ಗಾಯ! ತಂಡದಿಂದ ಹೊರಕ್ಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
