ನವದೆಹಲಿ:ಟ್ವಿಟ್ಟರ್​​ನಲ್ಲಿ ಖತಾರ್​ ವಿಮಾನ ಏರಬೇಡಿ ಎಂಬ ಅಭಿಯಾನ ಜೋರಾಗಿದೆ. ಭಾರತೀಯರು ಯಾರೂ ಈ ವಿಮಾನ ಹತ್ತಬೇಡಿ ಎಂಬ ಮನವಿ ಮಾಡಲಾಗುತ್ತಿದೆ. ಅರೆ.. ಏನಿದು..? ಈ ಅಭಿಯಾನ ಏಕೆ ಕೈಗೊಂಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.
ಪ್ರವಾದಿ ಮೊಹಮ್ಮದ್​ ಅವರ ವಿರುದ್ಧ ಬಿಜೆಪಿ ಮುಖಂಡರಿಬ್ಬರ ಹೇಳಿಕೆ ಗಲ್ಫ್​​ ದೇಶಗಳ ಮೇಲೆ ಪರಿಣಾಮ ಬೀರಿದ್ದು, ಖತಾರ್​​ ಕೈಗೊಂಡ ನಿರ್ಣಯಗಳ ವಿರುದ್ಧ ಈಗ ಭಾರತೀಯರು ಸೇರಿಗೆ ಸವಾ ಸೇರು ಎಂಬಂತೆ ಈ ಅಭಿಯಾನವನ್ನು ಶುರು ಮಾಡಿದ್ದಾರೆ.
https://twitter.com/Shyam_Vir_Singh/status/1533687002989637632?s=20&t=EdrOk9NghEEitthc5TnA1g
ಬಿಜೆಪಿ ಮುಖಂಡರಾದ ನೂಪರ್​ ಶರ್ಮಾ ಮತ್ತು ನವೀನ್​ ಕುಮಾರ್​ ಜಿಂದಾಲ್​ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಖತಾರ್​ ತನ್ನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಇದು ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧವನ್ನು ಹಾಳು ಮಾಡುವ ತಂತ್ರವಾಗಿದೆ ಎಂದು ಟ್ವಿಟಿಗರು ಖತಾರ್​ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಇದಕ್ಕೆ ಪ್ರತಿಯಾಗಿ ಕೆಲ ಟ್ವಿಟ್ಟಿಗರು, ಖತಾರ್​ವಿಮಾನಯಾನವನ್ನು ನಿರ್ಬಂಧಿಸಿ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಇದಕ್ಕೆ ಹಲವರು ಸಾಥ್​ ನೀಡಿದ್ದಾರೆ. ಇನ್ನು ಇದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ.(ಏಜೆನ್ಸೀಸ್​)
ಬಹು ನಿರೀಕ್ಷಿತ “ಕಬ್ಜ” ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಆರಂಭ

ವಾರದ ಬಳಿಕ ಸಿಸಿಟಿವಿಯಲ್ಲಿ ಬಯಲಾಯ್ತು ಬಾಲಕನ ಸಾವಿನ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
