ನವದೆಹಲಿ:ಆರು ರಾಜ್ಯಗಳ ಏಳು ವಿಧಾನಸಭೆ ಸ್ಥಾನಗಳಿಗೆ ಸೆ. 5ರಂದು ನಡೆದ ಉಪಚುನಾವಣೆಗಳಲ್ಲಿ ಪ್ರತಿಪಕ್ಷಗಳ ಕೂಟವಾದ ಇಂಡಿಯಾ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು ಮುಂಬರುವ ಲೋಕಸಭೆ ಚುನಾವಣೆ ವಿಚಾರದಲ್ಲಿ ಹುಮ್ಮಸ್ಸು ಪಡೆದುಕೊಂಡಿದೆ. ಇಂಡಿಯಾ ವರ್ಸಸ್ ಭಾರತ ವಿವಾದದ ನಡುವೆ ಆಳುವ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆದ್ದು ತೃಪ್ತಿಪಟ್ಟಿದೆ. ಭಾರತ ಚುನಾವಣಾ ಆಯೋಗ (ಇಸಿಐ) ಶುಕ್ರವಾರ ಫಲಿತಾಂಶಗಳನ್ನು ಪ್ರಕಟಿಸಿತು.
ಉತ್ತರ ಪ್ರದೇಶ, ಉತ್ತರಾಖಂಡ್, ಝಾರ್ಖಂಡ್, ಕೇರಳ, ಬಂಗಾಳ ಮತ್ತು ತ್ರಿಪುರಾದ ಏಳು ಕ್ಷೇತ್ರಗಳಲ್ಲಿ ವಿವಿಧ ಕಾರಣಗಳಿಗೆ ತೆರವಾದ ಸ್ಥಾನಗಳಿಗೆ ಜಿದ್ದಾಜಿದ್ದಿನ ಕಾಳಗ ನಡೆದಿತ್ತು. ಶುಕ್ರವಾರ ಪ್ರಕಟವಾದ ಫಲಿತಾಂಶ ಹಲವು ರಾಜ್ಯಗಳು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ವಿರುದ್ಧ ಇಂಡಿಯಾಕ್ಕೆ ಸತ್ವಪರೀಕ್ಷೆಯ ಸೂಚನೆಯಾಗಿದೆ. ಎನ್​ಡಿಎ ಕೂಟದ ಪರವಾಗಿ ಬಿಜೆಪಿಯೇ ಮೂರು ಸ್ಥಾನಗಳಲ್ಲಿ ಗೆದ್ದಿದೆ. ಇಂಡಿಯಾ ಕೂಟದ ನಾಲ್ಕು ವಿವಿಧ ಪಕ್ಷಗಳು ತಲಾ ಒಂದರಲ್ಲಿ ಜಯ ದಾಖಲಿಸಿವೆ.
ತ್ರಿಪುರಾದ ಬೋಕ್ಸಾನಗರ್ ಮತ್ತು ಧನ್​ಪುರ್ ಕ್ಷೇತ್ರಗಳಲ್ಲಿ ಭಾರಿ ಮತಗಳ ಅಂತರದಿಂದ ಜಯ ಸಾಧಿಸುವುದರೊಂದಿಗೆ ಬಿಜೆಪಿ ಉತ್ಸಾಹದಿಂದ ಬೀಗಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿಗಳು ಅನುಕ್ರಮವಾಗಿ 30,237 ಹಾಗೂ 18,871 ಮತಗಳಿಂದ ಗೆದ್ದಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್​ನ ಚಾಂಡಿ ಒಮನ್, ಪುತುಪ್ಪಲ್ಲಿ ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಟ್ಟಿದ್ದಾರೆ. ಅವರು ಸಿಪಿಐ (ಎಂ) ಹುರಿಯಾಳು ಜೈಕ್ ಸಿ ಥಾಮಸ್ ಅವರನ್ನು ಸೋಲಿಸಿದ್ದಾರೆ. 37 ವರ್ಷದ ಚಾಂಡಿ 36,000ಕ್ಕೂ ಹೆಚ್ಚು ಮತಗಳ ಅಂತರದಿಂದ ತಮ್ಮ ಕಟು ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾರೆ. ಚಾಂಡಿ ತಂದೆ, ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಒಮನ್ ಚಾಂಡಿ 50 ವರ್ಷಕ್ಕೂ ಹೆಚ್ಚು ವರ್ಷದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಉತ್ತರಾಖಂಡದ ಬಾಗೇಶ್ವರ ಕ್ಷೇತ್ರದಲ್ಲಿ ಬಿಜೆಪಿಯ ಪಾರ್ವತಿ ದಾಸ್ ಜಯಶಾಲಿಯಾಗಿದ್ದು ಪಕ್ಷ ಈ ಸ್ಥಾನವನ್ನು ಉಳಿಸಿಕೊಂಡಿದೆ. ಕಾಂಗ್ರೆಸ್​ನ ಬಸಂತ್ ಕುಮಾರ್ 2,400 ಮತಗಳಿಂದ ಪರಾಭವಗೊಂಡಿದ್ದಾರೆ.
ಇಂಡಿಯಾ ಕೂಟದ ಭಾಗವಾಗಿರುವ ಝಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಬೇಬಿ ದೇವಿ ಝಾರ್ಖಂಡ್​ನ ಡುಮ್ರಿ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಅವರು ಎಜೆಎಸ್​ಯುುನ ಯಶೋದಾ ದೇವಿಯನ್ನು ಸೋಲಿಸಿದ್ದಾರೆ. ಬಂಗಾಳದಲ್ಲಿ ಆಳುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಧೂಪ್​ಗುರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಥಾನವನ್ನು ಕಿತ್ತುಕೊಂಡಿದೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಮಾಂಗಲ್ಯ ಕಟ್ಟಿಸಿಕೊಂಡಿದ್ದ ಕೊರಳಿಗೇ ಬಿತ್ತು ಉರುಳು; ಮದುವೆಯಾದ ಮೂರೇ ತಿಂಗಳಲ್ಲಿ ಬದುಕೇ ಮುಕ್ತಾಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight + sixteen =
Remember me
