ನವದೆಹಲಿ:ಕಳೆದ ಮಂಗಳವಾರ (ಸೆ.05) ನಡೆದ ಆರು ರಾಜ್ಯಗಳ 7 ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆಯ ಮತಎಣಿಕೆ ಇಂದು (ಸೆ.08) ಆರಂಭವಾಗಿದ್ದು, ಇಂದಿನ ಫಲಿತಾಂಶ ಆಡಳಿತರೂಢ ಬಿಜೆಪಿ ನೇತೃತ್ವದ ಎನ್​ಡಿಎ ವಿರುದ್ಧ ಇಂಡಿಯಾ ವಿಪಕ್ಷ ಒಕ್ಕೂಟದ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ.
ಈ ವರ್ಷದ ಕೊನೆಯಲ್ಲಿ ನಿಗದಿಯಾಗಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ ಎಂದೇ ಹೇಳಲಾಗಿದೆ.
ಉತ್ತರಾಖಂಡದ ಬಾಗೇಶ್ವರ್​, ಉತ್ತರ ಪ್ರದೇಶದ ಘೋಸಿ, ಕೇರಳದ ಪುಥುಪಲ್ಲಿ, ಪಶ್ಚಿಮ ಬಂಗಾಳದ ಧುಪ್ಗುರಿ, ಜಾರ್ಖಂಡ್​ನ ದುಮ್ರಿ ಮತ್ತು ತ್ರಿಪುರಾದ ಬೊಕ್ಸಾನಗರ ಮತ್ತು ಧನ್​ಪುರ್​ ಸೇರಿ ಒಟ್ಟು 7 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಘೋಸಿ ಕ್ಷೇತ್ರದಲ್ಲಿ 49.42 ರಷ್ಟು, ದುಮ್ರಿಯಲ್ಲಿ 64.84, ಬಾಗೇಶ್ವರದಲ್ಲಿ 55.35, ಬೊಕ್ಸಾನಗರ ಮತ್ತು ಧನ್ಪುರ್​ನಲ್ಲಿ 86.34 ಮತ್ತು 81.88 ಮತ್ತು ಧುಪ್ಗುರಿಯಲ್ಲಿ 74.35 ರಷ್ಟು ಮತದಾನವಾಗಿತ್ತು.
ಇಂದು ಬೆಳಗ್ಗೆ ಮತಎಣಿಕೆ ಆರಂಭವಾಗಿದ್ದು, ತ್ರಿಪುರಾದಲ್ಲಿ ಬಿಜೆಪಿ ಮುನ್ನೆಡೆ ಸಾಧಿಸಿದೆ. ಕೇರಳದ ಪುಥುಪಲ್ಲಿ ಮತ್ತು ಉತ್ತರಖಂಡದ ಬಾಗೇಶ್ವರದಲ್ಲಿ ಕಾಂಗ್ರೆಸ್​ ಮುನ್ನೆಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ ಘೋಸಿಯಲ್ಲಿ ಸಮಾಜವಾದಿ ಪಾರ್ಟಿ ಮುಂದಿದೆ.
ಇದನ್ನೂ ಓದಿ:ನಾಳೆಯಿಂದ 2 ದಿನ ಜಿ-20 ಶೃಂಗಸಭೆ: ಜಾಗತಿಕ ಸಮ್ಮೇಳನಕ್ಕೆ ಸಂಪೂರ್ಣ ಸಜ್ಜಾದ ರಾಷ್ಟ್ರ ರಾಜಧಾನಿ
ಏಳು ಸ್ಥಾನಗಳ ಪೈಕಿ ಧನಪುರ್, ಬಾಗೇಶ್ವರ್ ಮತ್ತು ಧೂಪಗುರಿ ಬಿಜೆಪಿ ಪಾಲಾಗಿದ್ದವು. ಯುಪಿ ಮತ್ತು ಜಾರ್ಖಂಡ್‌ನಲ್ಲಿ ಕ್ರಮವಾಗಿ ಸಮಾಜವಾದಿ ಪಕ್ಷ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಥಾನಗಳನ್ನು ಪಡೆದಿದ್ದವು. ತ್ರಿಪುರಾದ ಬೊಕ್ಸಾನಗರ್ ಕ್ಷೇತ್ರ ಮತ್ತು ಕೇರಳದ ಪುತ್ತುಪಲ್ಲಿ ಕ್ರಮವಾಗಿ ಸಿಪಿಎಂ ಮತ್ತು ಕಾಂಗ್ರೆಸ್ ಪಾಲಾಗಿತ್ತು. ಹಾಲಿ ಶಾಸಕ ಮತ್ತು ಒಬಿಸಿ ನಾಯಕ ದಾರಾ ಸಿಂಗ್ ಚೌಹಾಣ್ ಬಿಜೆಪಿಗೆ ಮರು ಸೇರ್ಪಡೆಗೊಂಡ ನಂತರ ಘೋಸಿ ಸ್ಥಾನ ತೆರವಾಗಿತ್ತು. ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಈಗ ಘೋಸಿ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ.
ಉತ್ತರಾಖಂಡದ ಬಾಗೇಶ್ವರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಚಂದನ್ ರಾಮ್ ದಾಸ್ ಅವರು ಏಪ್ರಿಲ್‌ನಲ್ಲಿ ನಿಧನರಾದ ನಂತರ ಉಪಚುನಾವಣೆ ನಡೆಯಿತು. ಕೇರಳದ ಪುತ್ತುಪಲ್ಲಿ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಉಮ್ಮನ್ ಚಾಂಡಿ ಅವರ ನಿಧನದಿಂದ ತೆರವಾಗಿತ್ತು.(ಏಜೆನ್ಸೀಸ್​)
ನಾಳೆಯಿಂದ 2 ದಿನ ಜಿ-20 ಶೃಂಗಸಭೆ: ಜಾಗತಿಕ ಸಮ್ಮೇಳನಕ್ಕೆ ಸಂಪೂರ್ಣ ಸಜ್ಜಾದ ರಾಷ್ಟ್ರ ರಾಜಧಾನಿ

ಪಿಒಕೆಯಲ್ಲಿ ಆಶ್ರಯ ಪಡೆದಿದ್ದ ಜಮ್ಮು-ಕಾಶ್ಮೀರದ ಸ್ಥಳೀಯ ಉಗ್ರರಿಗೆ ಬಿಗ್​ ಶಾಕ್: ಆಸ್ತಿಗಳ ಮುಟ್ಟುಗೋಲು​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + sixteen =
Remember me
