ನವದೆಹಲಿ:ಇನ್​ಸ್ಟಿಟ್ಯೂಟ್​ ಆಫ್​ ಚಾರ್ಟರ್ಡ್​ ಅಕೌಟೆಂಟ್ಸ್​ ಆಫ್​ ಇಂಡಿಯಾ ಸಂಸ್ಥೆ (ಐಸಿಎಐ) ಸಿಎ ಆಕಾಂಕ್ಷಿಗಳಿಗೆ ಪ್ರಾಯೋಗಿಕ ತರಬೇತಿ ಆರಂಭಕ್ಕೆ ಒಂದು ತಿಂಗಳ ವಿನಾಯ್ತಿ ನೀಡಿದೆ.
ಸಿಎ ಅಂತಿಮ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಏಪ್ರಿಲ್​ 30ರ ಒಳಗಾಗಿ ಪ್ರಾಯೋಗಿಕ ತರಬೇತಿಯನ್ನು ಆರಂಭಿಸಬೇಕಿತ್ತು. ಹಾಗಿದ್ದರೆ ಮಾತ್ರ 2020ರ ನವೆಂಬರ್​ನಲ್ಲಿ ನಡೆಸಲಾಗುವ ಅಂತಿಮ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ದೇಶಾದ್ಯಂತ ಲಾಕ್​ಡೌನ್​ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ತರಬೇತಿ ಆರಂಭಕ್ಕೆ ಅನುಕೂಲಕರ ವಾತಾವರಣವಿಲ್ಲ. ಹೀಗಾಗಿ ಒಂದು ಬಾರಿಯ ಕ್ರಮವಾಗಿ ಪ್ರಾಯೋಗಿಕ ತರಬೇತಿ ಆರಂಭಿಸಲು ಮೇ 31ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಐಸಿಎಐ, ಮೇ 31ರೊಳಗಾಗಿ ಪ್ರಾಯೋಗಿಕ ತರಬೇತಿ ಆರಂಭಿಸುವ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.
ಈ ಮೊದಲು ಮೇ ತಿಂಗಳಲ್ಲಿ ನಡೆಸಲಾಗುವ ಅಂತಿಮ ಪರೀಕ್ಷೆಯನ್ನು ಸಂಸ್ಥೆ ಮುಂದೂಡಿತ್ತು. ಮೇ ಬದಲಾಗಿ ಜೂನ್​ 19ರಿಂದ ಜುಲೈ 4ರವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿತ್ತು.
ವಿದ್ಯಾರ್ಥಿಗಳೇ ಒತ್ತಡಕ್ಕೊಳಗಾಗಬೇಡಿ… ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಇಲ್ಲಿವೆ ಯುಜಿಸಿ ಸಲಹೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 5 =
Remember me
