ಅಹಮದಾಬಾದ್​​:ಮಿತ್ರಪಕ್ಷಗಳ ಓಲೈಕೆ ನೀತಿಯಿಂದಾಗಿ ಕಾಂಗ್ರೆಸ್​ ಪಕ್ಷವು 1947 ರಿಂದ 2014ರವರೆಗೆ ನಿರಾಶ್ರಿತರ ಹಕ್ಕುಗಳನ್ನು ಕಸಿದುಕೊಂಡಿತು. ಆ ಅವಧಿಯಲ್ಲಿ ದೇಶದಲ್ಲಿ ಆಶ್ರಯ ಪಡೆದಿರುವವರಿಗೆ ನ್ಯಾಯವನ್ನು ನೀಡಲಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಆರೋಪಿಸಿದರು.
ಇದನ್ನು ಓದಿ:ಪೊಲೀಸರು ಲಂಚ ಹಂಚಿಕೊಳ್ಳುತ್ತಿರುವ ವಿಡಿಯೋ ವೈರಲ್; ಲೆಫ್ಟಿನೆಂಟ್ ಗವರ್ನರ್ ರಿಯಾಕ್ಷನ್​​ ಹೀಗಿತ್ತು..
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರವನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಹಿಂದುಗಳು, ಜೈನರು, ಬೌದ್ಧರು ಮತ್ತು ಸಿಖ್ಖರು ಎಂಬ ಕಾರಣಕ್ಕಾಗಿ ನೆರೆಯ ದೇಶಗಳಲ್ಲಿ ಅವರನ್ನು ಹಿಂಸಿಸಲಾಯಿತು, ಆದರೆ ಭಾರತದಲ್ಲೂ ಅವರನ್ನು ಹಿಂಸಿಸಲಾಗಿದೆ. I.N.D.I.A ಮೈತ್ರಿಕೂಟದ ತುಷ್ಟೀಕರಣ ರಾಜಕೀಯವು ಅವರಿಗೆ ನ್ಯಾಯವನ್ನು ನೀಡಲಿಲ್ಲ. ಮೂರು ತಲೆಮಾರುಗಳ ನಂತರವು ಲಕ್ಷಾಂತರ ಜನರು ನ್ಯಾಯಕ್ಕಾಗಿ ಕಾಯುತ್ತಿದ್ದರು. ಪ್ರಧಾನಿ ಮೋದಿ ಅವರಿಗೆ ನ್ಯಾಯ ಒದಗಿಸಿದರು ಎಂದು ಹೇಳಿದರು.
ಸಿಎಎಗೆ ಸಂಬಂಧಿಸಿದಂತೆ ದೇಶದ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ. ತಪ್ಪು ಮಾಹಿತಿ ನೀಡುವ ಮೂಲಕ ಅವರನ್ನು ದಾರಿತಪ್ಪಿಸಲಾಗುತ್ತಿದೆ. ಸಿಎಎ ಕಾನೂನು ದೇಶದ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಸಿಎಎ ಪೌರತ್ವವನ್ನು ನೀಡುವುದು ಅದನ್ನು ಕಸಿದುಕೊಳ್ಳುವುದಲ್ಲ. ಪೌರತ್ವವು ಹಿಂದು, ಬೌದ್ಧ, ಸಿಖ್, ಜೈನ ನಿರಾಶ್ರಿತರಿಗೆ ಹಕ್ಕುಗಳನ್ನು ನೀಡುವುದಾಗಿದೆಎಂದು ನನ್ನ ಮುಸ್ಲಿಂ ಸಹೋದರ-ಸಹೋದರಿಯರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ತಿಳಿಸಿದರು.

ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಶೇ.27ರಷ್ಟು ಹಿಂದುಗಳಿದ್ದರು, ಆದರೆ ಅವರನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವುದರಿಂದ ಈಗ ಕೇವಲ ಶೇ.9ಕ್ಕೆ ಇಳಿದಿದ್ದಾರೆ ಎಂದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ 188 ಹಿಂದು ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರವನ್ನು ಅಮಿತ್​ ಷಾ ಹಸ್ತಾಂತರಿಸಿದರು. (ಏಜೆನ್ಸೀಸ್​)
ಏರ್​ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಅಪರಿಚಿತನಿಂದ ಹಲ್ಲೆ; ಏರ್​ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದಿಷ್ಟು..​​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × three =
Remember me
