ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ದೇಶದ ಆಂತರಿಕ ವಿಚಾರವಾಗಿದ್ದು, ಯಾವುದೇ ವಿದೇಶ ಅಥವಾ ಸಂಸ್ಥೆಗಳು ಭಾರತದ ಸಾರ್ವಭೌಮತ್ವದಲ್ಲಿ ಮೂಗುತೂರಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ಕಾಗಿ ಹೇಳಿದೆ. ಸಿಎಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ತನ್ನನ್ನೂ ಕಕ್ಷಿದಾರರನ್ನಾಗಿ ಮಾಡಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್​ಎಚ್​ಆರ್​ಸಿ) ಸುಪ್ರೀಂಕೋರ್ಟ್​ಗೆ ಮೊರೆಹೋಗಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ. ಯುಎನ್​ಎಚ್​ಆರ್​ಸಿ ಮಧ್ಯಪ್ರವೇಶದ ಈ ಅರ್ಜಿ ಸಲ್ಲಿಸಿರುವುದು ಭಾರತದ ಮೇಲೆ ಒತ್ತಡ ಹೆಚ್ಚುತ್ತಿರುವ ಸೂಚನೆಯಾಗಿದೆ ಎಂದು ಟೀಕಿಸಿದೆ.
ಸಿಎಎ ನಮ್ಮ ಸಂವಿಧಾನದ ಆಶಯಕ್ಕೆ ಅನುಗುಣವಾಗಿದೆ ಹಾಗೂ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದೆ.
ಮಂಡಳಿ ವಾದ:ಸಿಎಎ ವಿರುದ್ಧ ಈಗ ನಡೆಯುತ್ತಿರುವ ವ್ಯಾಜ್ಯಗಳಲ್ಲಿ ಭಾಗವಹಿಸಲು ತನಗೂ ಅವಕಾಶ ನೀಡುವಂತೆ ಭಾರತದಲ್ಲಿರುವ ಯುಎನ್​ಎಚ್​ಆರ್​ಸಿಯ ಹೈಕಮಿಷನರ್ ಕಚೇರಿ (ಒಎಚ್​ಸಿಎಚ್​ಆರ್) ಸುಪ್ರೀಂಕೋರ್ಟ್​ಗೆ ಈ ಅರ್ಜಿ ಸಲ್ಲಿಸಿದೆ. ಈಗ ನಡೆದಿರುವ ವಿಚಾರಣೆಯಲ್ಲಿ ‘ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ನಿಯಮಗಳು ಮತ್ತು ಗುಣಮಟ್ಟ’ವನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅಗತ್ಯ’ ಎಂದು ಒಎಚ್​ಸಿಎಚ್​ಆರ್ ಹೈಕಮಿಷನರ್ ಮಿಷೆಲ್ ಬಾಷೆಲೆಟ್ ಹೆಸರಿನಲ್ಲಿರುವ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಮಾನವ ಹಕ್ಕುಗಳ ರಕ್ಷಣೆಯ ಅಧಿಕಾರ ಹೊಂದಿರುವ ಕಾರಣ ಹಾಗೂ ಈ ವಿಚಾರದಲ್ಲಿ ಅಗತ್ಯಕಾನೂನು ಸಲಹೆ ನೀಡುವ ಉದ್ದೇಶದಿಂದ ತನ್ನನ್ನು ಅಮಿಕಸ್ ಕ್ಯೂರಿಯನ್ನಾಗಿಯೂ (ಕೋರ್ಟ್​ನ ಸಹಾಯಕ) ಮಾಡಬೇಕೆಂಬುದು ಮಂಡಳಿ ವಾದ.
ಸಿಎಎಗೆ ಸ್ವಾಗತ, ಆದರೆ…
‘ಧರ್ಮದ ಆಧಾರದಲ್ಲಿ ತೊಂದರೆಗೊಳಗಾಗಿರುವ ಕೆಲವು ವ್ಯಕ್ತಿಗಳನ್ನು ರಕ್ಷಿಸುವ ‘ಸಿಎಎ ಘೋಷಿತ ಉದ್ದೇಶ’ವನ್ನು ಒಎಚ್​ಸಿಎಚ್​ಆರ್ ಸ್ವಾಗತಿಸಿದೆ. ಆದರೆ, ತೊಂದರೆಗೊಳಗಾಗಿರುವ ಮುಸ್ಲಿಂ ಸಮುದಾಯದ ವಿವಿಧ ಪಂಗಡಗಳನ್ನು ಕಾನೂನಿನಲ್ಲಿ ಹೊರತುಪಡಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಅಹಮದೀಯ, ಹಜರಾ ಮತ್ತು ಷಿಯಾ ಪಂಗಡಗಳ ಮುಸ್ಲಿಮರಿದ್ದಾರೆ. ಈ ಜನರಿಗೆ ಕೂಡ ರಕ್ಷಣೆ ಒದಗಿಸುವುದು ಅಗತ್ಯ ಎಂಬುದನ್ನು ಒಎಚ್​ಸಿಎಚ್​ಆರ್ ಪ್ರತಿಪಾದಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
