ನವದೆಹಲಿ:ಕೋವಿಡ್-ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾಗಿರುವ ವಹಿವಾಟು ಕ್ಷೇತ್ರಗಳಿಗೆ ಕೇಂದ್ರ ಸರ್ಕಾರವು ಆರ್ಥಿಕ ಚೈತನ್ಯ ತುಂಬಲು ಮುಂದಾಗಿದ್ದು, ಆ ಕುರಿತು ಇಂದಿನ ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಈ ಸಭೆಯಲ್ಲಿ ಕೋವಿಡ್​ ಬಾಧಿತ ಕ್ಷೇತ್ರಗಳಿಗೆ ಖಚಿತವಾಗಿ ಸಾಲ ಒದಗಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ. ಲೋನ್​ ಗ್ಯಾರಂಟಿ ಸ್ಕೀಮ್ ಫಾರ್ ಕೋವಿಡ್ ಅಫೆಕ್ಟೆಡ್ ಸೆಕ್ಟರ್ಸ್​ (ಎಲ್​ಜಿಎಸ್​ಸಿಎಎಸ್​) ಎಂಬ ಶೀರ್ಷಿಕೆಯಲ್ಲಿ ಈ ಯೋಜನೆಯನ್ನು ಪ್ರಕಟಿಸಲಾಗಿದ್ದು, ಇದಕ್ಕೆಂದೇ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂಪಾಯಿ ಒದಗಿಸಲಿದೆ. ಇದು ಆರೋಗ್ಯ ಮತ್ತು ವೈದ್ಯಕೀಯ ಮೂಲಸೌಕರ್ಯ ಕ್ಷೇತ್ರಗಳಿಗೆ ಅನ್ವಯಿಸಲಿದೆ ಎನ್ನಲಾಗಿದೆ. ಇದು 2022ರ ಮಾರ್ಚ್ 31ರ ವರೆಗೆ ಮಂಜೂರಾಗುವ ಎಲ್ಲ ಅರ್ಹ ಸಾಲಗಳಿಗೆ ಅಥವಾ ಈ ಮೊತ್ತ 50 ಸಾವಿರ ಕೋಟಿ ರೂ. ತಲುಪುವವರೆಗೆ ಅನ್ವಯಿಸಲಿದೆ. ಇವೆರಡರಲ್ಲಿ ಯಾವುದು ಬೇಗ ಅನ್ವಯಿಸಲಿರುವುದೋ ಅದನ್ನು ಪರಿಗಣಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಇನ್ನು ಇತರ ಕ್ಷೇತ್ರಗಳಿಗೂ ಹೊಸ ನೀತಿ ಹೊರಡಿಸಲು ಸರ್ಕಾರ ಚಿಂತನೆ ಹೊಂದಿದ್ದು, ಬದಲಾಗುತ್ತಿರುವ ಪರಿಸ್ಥಿತಿಗಳನ್ನು ಅವಲೋಕಿಸಿ ಸ್ಪಷ್ಟತೆ ತಳೆದು ಪ್ರಕಟಿಸಲಿದೆ. ಜತೆಗೆ ಎಮರ್ಜೆನ್ಸಿ ಕ್ರೆಡಿಟ್​ ಲೈನ್​ ಗ್ಯಾರಂಟಿ ಸ್ಕೀಮ್​ (ಇಸಿಎಲ್​ಜಿಎಸ್​) ಅಡಇ 1.5 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರ ಒದಗಿಸಲಿದೆ. ಇದು ಗ್ಯಾರಂಟಿ ಎಮರ್ಜೆನ್ಸಿ ಕ್ರೆಡಿಟ್​ ಲೈನ್​ (ಜಿಇಸಿಎಲ್​) ಅಡಿ 2021ರ ಸೆ. 30ರ ವರೆಗೆ ನೀಡಲಾಗುವ ಎಲ್ಲ ಸಾಲ ಅಥವಾ 4.5 ಲಕ್ಷ ಕೋಟಿ ರೂ. ಸಾಲದ ಮೊತ್ತ, ಇವೆರಡರಲ್ಲಿ ಯಾವುದು ಬೇಗ ಅನ್ವಯಿಸಲಿದೆಯೋ ಅದನ್ನು ಪರಿಗಣಿಸಲಾಗುವುದು ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್​)
ನೀವು ಡುಮ್ಮಗಿದ್ದೀರಾ?; ಹಾಗಿದ್ದರೆ ಇದನ್ನು ಬಾಯಲ್ಲಿಟ್ಟುಕೊಂಡರೆ ಸಾಕು, ಸಣ್ಣಗಾಗುತ್ತೀರಿ..!

ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 19 =
Remember me
