ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಯಲ್ಲಿ ಮಾದರಿ ಬಾಡಿಗೆ ಕಾಯ್ದೆಗೆ ಒಪ್ಪಿಗೆ ನೀಡಲಾಗಿದೆ. ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಗೆ ಉದ್ಯಮ ಸ್ವರೂಪ ನೀಡಿ, ಇದರಲ್ಲಿ ಪಾಲ್ಗೊಳ್ಳಲು ಖಾಸಗಿ ವಲಯಕ್ಕೆ ಪೋತ್ಸಾಹ ನೀಡುವುದು ಕೇಂದ್ರದ ಉದ್ದೇಶ. ಇದರಿಂದ ವಸತಿ ೇತ್ರ ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಸಾಧ್ಯವಿದೆ ಎಂದು ವಿವರಿಸಲಾಗಿದೆ. 2022ರ ವೇಳೆಗೆ ಎಲ್ಲರಿಗೂ ವಸತಿ ಎನ್ನುವುದು ಪ್ರಧಾನಿ ಮೋದಿ ಅವರ ಕಲ್ಪನೆ. ಈ ಮಾದರಿ ಸಂಹಿತೆಯ ಮೂಲ ಉದ್ದೇಶ ಏನೆಂದರೆ ದೀರ್ಕಾಲದ ಸಮಸ್ಯೆಗಳನ್ನು ಪರಿಹರಿಸಲು ವ್ಯವಸ್ಥೆ ರೂಪಿಸುವುದು ಮತ್ತು ಮಾಲೀಕರು ತಮ್ಮ ಆಸ್ತಿ ಗಳನ್ನು (ಮನೆ) ಬಾಡಿಗೆ ನೀಡಲು ಪೋತ್ಸಾಹಿಸುವುದಾಗಿದೆ.ಬದಲಾವಣೆ ಏಕೆ?:ಸಚಿವಾಲಯದ ಟಿಪ್ಪಣಿ ಪ್ರಕಾರ, ಅಸ್ತಿತ್ವದಲ್ಲಿರುವ ರಾಜ್ಯ ಬಾಡಿಗೆ ಕಾನೂನುಗಳಿಂದ ವಿವಾದಗಳು ತ್ವರಿತಗತಿಯಲ್ಲಿ ಇತ್ಯರ್ಥಗೊಳ್ಳುತ್ತಿಲ್ಲ. ಮಾದರಿ ಕಾಯಿದೆಯ ಪ್ರಕಾರ ರಾಜ್ಯವು ಬಾಡಿಗೆ ಪ್ರಾಧಿಕಾರವನ್ನು ಸ್ಥಾಪಿಸಬೇಕು ಮತ್ತು ಅದು ಎಲ್ಲಾ ಬಾಡಿಗೆ ಒಪ್ಪಂದಗಳನ್ನು ನೋಂದಾಯಿಸುವ ಜವಾಬ್ದಾರಿ ಹೊಂದಿರಲಿದೆ. ಪ್ರಾಧಿಕಾರವು ಅದರ ಅಡಿಯಲ್ಲಿರುವ ಎಲ್ಲಾ ಬಾಡಿಗೆ ಒಪ್ಪಂದಗಳ ದಾಖಲೆಗಳನ್ನು ನಿರ್ವಹಿಸಲಿದೆ ಮತ್ತು ಮಾಹಿತಿ ಟ್ರಾ$್ಯಕಿಂಗ್​ಗಾಗಿ ವೆಬ್​ಸೈಟ್​ ಹೊಂದಲಿದೆ. ವಿವಾದಗಳ ಬಗೆಹರಿಸಲು ತ್ವರಿತ ಅರೆನ್ಯಾಯಾಂಗ ಕಾರ್ಯವಿಧಾನವನ್ನು ಕೂಡ ಇದು ಒದಗಿಸಲಿದೆ. ಬಾಡಿಗೆ ಪ್ರಾಧಿಕಾರ, ಬಾಡಿಗೆ ನ್ಯಾಯಾಲಯ ಮತ್ತು ಬಾಡಿಗೆ ನ್ಯಾಯಮಂಡಳಿಯನ್ನು ಒಳಗೊಂಡಿರುವ ತ್ವರಿತಗತಿಯ ವಿವಾದ ಪರಿಹಾರದ ವ್ಯವಸ್ಥೆಯನ್ನು ಇದು ಹೊಂದಲಿದೆ. ಈ ಕಾಯ್ದೆ ಜಾರಿಯಾದ ರಾಜ್ಯಗಳಲ್ಲಿ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಲು ಬಾಡಿಗೆ ನ್ಯಾಯಾಲಯಕ್ಕಷ್ಟೇ ಅಧಿಕಾರವಿರುತ್ತದೆ. ಇದು ಸಿವಿಲ್​ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ.ಹೇಗೆ ಅನುಕೂಲ?ಭದ್ರತಾ ಠೇವಣಿ 2 ತಿಂಗಳ ಬಾಡಿಗೆ ಮೀರ ಬಾರದು ಎಂದು ಮಾದರಿ ಕಾಯ್ದೆ ಹೇಳುತ್ತದೆ. ಅಲ್ಲದೆ, ಮನೆಯನ್ನು ಖಾಲಿ ಮಾಡಲು ಬಾಡಿಗೆದಾರ ಹಿಂದೇಟು ಹಾಕಿದಲ್ಲಿ, ಮಾಲೀಕರು ಎರಡು ತಿಂಗಳ ಮಾಸಿಕ ಬಾಡಿಗೆ ಯನ್ನು ದ್ವಿಗುಣಗೊಳಿಸಲು ಮತ್ತು ನಂತರದ ಮಾಸಿಕ ಬಾಡಿಗೆಗಳನ್ನು ನಾಲ್ಕು ಪಟ್ಟು ಹೆಚ್ಚಿಸಲು ಅವಕಾಶವಿದೆ.ಮಾದರಿ ಕಾಯ್ದೆ ಎಂದರೆ?ಮಾದರಿ ಕಾಯ್ದೆಯನ್ನು ರಾಜ್ಯದ ಮೇಲೆ ಹೇರಲಾಗುವುದಿಲ್ಲ. ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಜಾರಿಗೊಳಿಸಬೇಕು. ಈ ಮಾದರಿ ಕಾಯಿದೆಯನ್ನು ರಾಜ್ಯಗಳು ಅನುಸರಿಸಬಹುದು ಅಥವಾ ತಮ್ಮದೇ ಕಾನೂನುಗಳನ್ನು ಮಾಡಿಕೊಳ್ಳಬಹುದು. ಏಕೆಂದರೆ ಭೂಮಿ ರಾಜ್ಯ ವಿಷಯವಾಗಿದ್ದು, ವಸತಿ ಮಾರುಕಟ್ಟೆಗಳನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರಗಳ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಹೊಸ ಕಾಯ್ದೆ ಮಾದರಿ ಸಂಹಿತೆಯು ವಲಸಿಗರು, ಸಂಟಿತ ಮತ್ತು ಅಸಂಟಿತ ವಲಯದ ಕಾರ್ಮಿಕರು, ವೃತ್ತಿಪರರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ವಿವಿಧ ಆದಾಯ ವರ್ಗದ ಜನರಿಗೆ ನೆರವಾಗಲು ಸಾಕಷ್ಟು ಬಾಡಿಗೆ ವಸತಿಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
