ನವದೆಹಲಿ:ಕೋಟ್ಯತರ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಗೆ ಕೇಂದ್ರ ಹಸಿರು ನಿಶಾನೆ ತೋರಿದೆ.
ಒಟ್ಟು 75,021 ಕೋಟಿ ರೂ.ವೆಚ್ಚದಲ್ಲಿ ಕೋಟ್ಯಾಂತರ ಮನೆಗಳಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಸಲು ಪ್ರಧಾನಮಂತ್ರಿ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಗುರುವಾರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 13 ರಂದು ಈ ಯೋಜನೆಯನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ:ಸೈಕ್ಲಿಂಗ್​ ಮಾಡುವಾಗ ಕ್ಯಾಬ್​ ಡಿಕ್ಕಿ: ಇಂಟೆಲ್ ಇಂಡಿಯಾ ಮಾಜಿ ಮುಖ್ಯಸ್ಥ ಅವತಾರ್ ಸೈನಿ ಮೃತ್ಯು
ಜನರಿಗೆ ವಿದ್ಯುತ್ ಬಿಲ್ ಹೊರೆಯಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ನೀಡುತ್ತಿದೆ. ಇದರ ಭಾಗವಾಗಿ ಹೊಸ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಯಲ್ಲಿ, ಸೋಲಾರ್ ಪ್ಯಾನಲ್ ಅಳವಡಿಸುವವರಿಗೆ ದೊಡ್ಡ ಮಟ್ಟದ ಸಬ್ಸಿಡಿ ಘೋಷಿಸಲಾಗಿದೆ.
ಇದರ ಜತೆಗೆ ಬ್ಯಾಂಕ್‌ ಸಾಲವನ್ನೂ ನೀಡಲಾಗುತ್ತದೆ. ಈ ಯೋಜನೆಯು 1 ಕಿವ್ಯಾ ವಿದ್ಯುತ್ ಉತ್ಪಾದಿಸುವ ಸೌರ ವ್ಯವಸ್ಥೆಗೆ 30,000ರೂ., 2 ಕಿವ್ಯಾ ವ್ಯವಸ್ಥೆಗೆ 60,000ರೂ., ಮತ್ತು 3ಕಿವ್ಯಾ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಸೌರ ವ್ಯವಸ್ಥೆಗೆ 78,000ರೂ. ಸಬ್ಸಿಡಿ ನೀಡುತ್ತದೆ.
ಸಮಯಕ್ಕೆ ಬಾರದ ವರ..ಭಾವನ ಜೊತೆ ಮದುವೆಗೆ ಸಜ್ಜಾದ ವಧು..! ಮುಂದೆ ನಡೆದಿದ್ದೇ ಬೇರೆ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
