ನವದೆಹಲಿ:ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಗಾಯಗೊಂಡ ಭಾರತೀಯ ಸೇನಾಪಡೆಯ ಮುಖ್ಯಸ್ಥ(ಸಿಡಿಎಸ್​) ಜನರಲ್​​ ಬಿಪಿನ್​ ರಾವತ್ ನಿಧನರಾಗಿದ್ದಾರೆ. ಈ ಆಘಾತಕಾರಿ ಘಟನೆಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಿಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿಯು ನವದೆಹಲಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಭಾರತದ ಭದ್ರತಾ ಪಡೆಗಳ ಉನ್ನತ ಮಟ್ಟದ ನೇಮಕಾತಿಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸರ್ಕಾರದ ಕ್ಯಾಬಿನೆಟ್​ ಕಮಿಟಿ ಆನ್​ ಸೆಕ್ಯುರಿಟಿ(ಸಿಸಿಎಸ್​​)ಯ ಸಭೆಯು ಇಂದು ಸಂಜೆ 6.30ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವುದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ಹೆಲಿಕಾಪ್ಟರ್​ ಪತನ: ಫಲಿಸಲಿಲ್ಲ ಭಾರತೀಯರ ಪ್ರಾರ್ಥನೆ, ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್​ ವಿಧಿವಶ
ಜನರಲ್​ ರಾವತ್​ರಂಥ ಸಮರ್ಥ ನಾಯಕರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೇ ಭಾರತೀಯ ಸೇನೆಗೆ ತಕ್ಷಣವೇ ಮತ್ತೊಬ್ಬ ಯೋಗ್ಯ ಅಧಿಕಾರಿಯನ್ನು ಸೇನಾ ಮುಖ್ಯಸ್ಥರಾಗಿ ನೇಮಿಸುವ ಸವಾಲು ಕೇಂದ್ರ ಸರ್ಕಾರದ ಮುಂದಿದೆ. ಈ ಹಿನ್ನೆಲೆಯಲ್ಲಿ ಈ ಸಂಪುಟ ಸಮಿತಿ ಸಭೆ ಮಹತ್ವ ಪಡೆದುಕೊಂಡಿದೆ.(ಏಜೆನ್ಸೀಸ್)
ಗೂಗಲ್​ ಸರ್ಚ್​​ನಲ್ಲಿ ಈ ವರ್ಷ ಮಿಂಚಿದ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ TOP 10

VIDEO| ಲೆಹಂಗಾ ಬದಲಿಗೆ ಜೀನ್ಸ್​​ ತೊಟ್ಟ ಮದುವೆ ಹೆಣ್ಣು! ವೈರಲ್​ ಆಗ್ತಿದೆ ಈ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
