ಜೈಪುರ :ರಾಜಸ್ತಾನದ ಕಾಂಗ್ರೆಸ್​ ಸರ್ಕಾರದ ಸಂಭಾವ್ಯ ಸಂಪುಟ ವಿಸ್ತರಣೆಯು ಜುಲೈ 28 ರಂದು ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವು ದಿನಗಳು ಜೈಪುರದಲ್ಲೇ ಇರಬೇಕಾಗಿ ಪಕ್ಷದ ಶಾಸಕರಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್​ ಜನರಲ್​ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜಸ್ತಾನ ಘಟಕದ ಉಸ್ತುವಾರಿ ಅಜಯ್​ ಮಕೇನ್ ಇಂದು ಪಕ್ಷದ ಶಾಸಕರು ಮತ್ತು ಪ್ರದೇಶ ಕಾಂಗ್ರೆಸ್​ ಕಮಿಟಿಯ ಸದಸ್ಯರನ್ನು ಭೇಟಿ ಮಾಡಿದರು. ಸಿಎಂ ಅಶೋಕ್​ ಗೆಹ್ಲೋತ್​ ಅವರನ್ನೂ ಭೇಟಿ ಮಾಡಲಿರುವ ಈ ನಾಯಕರು, ನಂತರ ದೆಹಲಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪಂಜಾಬ್​ ಸಿಎಂ ಮತ್ತು ಸಿಧು ನಡುವೆ ಶಾಂತಿ ಘೋಷಣೆ?!
ಸಂಪುಟ ವಿಸ್ತರಣೆಗಾಗಿ ಇಂದೇ ಶಾಸಕರ ಸಭೆ ನಡೆಯುವುದೆಂಬ ಊಹೆಗಳಿದ್ದವು. ಅದಕ್ಕಾಗಿ ಮಾಜಿ ಡೆಪ್ಯುಟಿ ಸಿಎಂ ಸಚಿನ್ ಪೈಲಟ್​ರನ್ನು ಆಹ್ವಾನಿಸಿಲ್ಲ ಎಂದು ಮುಖಂಡರಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು ಎನ್ನಲಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್​ ದೊತಸರ ಅವರು, ಶಾಸಕರ ಸಭೆ ನಿಗದಿಯಾಗಿರಲಿಲ್ಲ. ದೆಹಲಿಯ ನಾಯಕರ ಸ್ವಾಗತ ಕಾರ್ಯಕ್ರಮಕ್ಕಾಗಿ ಶಾಸಕರನ್ನು ಕರೆಯಲಾಗಿತ್ತು ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಚಿನ್ ಪೈಲಟ್ ನೇತೃತ್ವದ ಕಾಂಗ್ರೆಸ್ ಬಣವು ಸಚಿವ ಸಂಪುಟ ವಿಸ್ತರಣೆಯಲ್ಲಾಗುತ್ತಿರುವ ವಿಳಂಬದ ಬಗ್ಗೆ ಅಸಮಾಧಾನ ಹೊಂದಿದ್ದು, ಈ ಬಗ್ಗೆ ಸಿಎಂ ಗೆಹ್ಲೋತ್​ ಬಣದೊಂದಿಗೆ ವಾಕ್ಸಮರದಲ್ಲಿ ತೊಡಗಿದೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್)
ಸಿಎಂ ಬಿಎಸ್​ವೈ ಸ್ಥಾನ ವಹಿಸುವ ಬಗ್ಗೆ ಪ್ರಹ್ಲಾದ್​ ಜೋಶಿ ಹೇಳಿದ್ದೇನು?

ದೇಶದ ಅತಿದೊಡ್ಡ ಗನ್​ ಲೈಸೆನ್ಸ್​ ಹಗರಣ ಬೆಳಕಿಗೆ! ಭರದಿಂದ ಸಾಗಿದೆ, ಸಿಬಿಐ ಕಾರ್ಯಾಚರಣೆ!

VIDEO | ವರ್ಕ್​ ಫ್ರಂ ಹೋಂ ಅಲ್ಲ… ವರ್ಕ್​ ಫ್ರಂ ವೆಡ್ಡಿಂಗ್?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
