ಬೆಂಗಳೂರು:ಅಭಿವೃದ್ಧಿ ಹಾಗೂ ರಾಜಕೀಯ ಕಾರ್ಯಸೂಚಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಮಧ್ಯಾಹ್ನ ದೆಹಲಿಗೆ ತೆರಳುತ್ತಿದ್ದಾರೆ. ವಿಧಾನಮಂಡಲ ಬಜೆಟ್ ಅಧಿವೇಶನ ಮುಗಿದು, ಅಮಿತ್ ಷಾ ರಾಜ್ಯಕ್ಕೆ ಬಂದು ಹೋದ ಬೆನ್ನಲ್ಲೇ ಸಿಎಂ ದೆಹಲಿಗೆ ಹೊರಟಿದ್ದು, ಸಂಪುಟ ಸೇರ್ಪಡೆ ಆಕಾಂಕ್ಷಿಗಳ ಲೆಕ್ಕಾಚಾರದಂತೆ ಈ ಬೆಳವಣಿಗೆಯಾಗಿದೆ. ವರಿಷ್ಠರಿಂದ ಹೊತ್ತು ತರಲಿರುವ ಸಂದೇಶದತ್ತ ಕಾತರದ ದೃಷ್ಟಿ ನೆಟ್ಟಿದ್ದಾರೆ. ನಿಗಮ-ಮಂಡಳಿಗಳ ನೇಮಕದ ಪಟ್ಟಿಯೂ ಇದೇ ವೇಳೆ ಅಂತಿಮಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರವಾಸದ ವೇಳಾಪಟ್ಟಿ ಪ್ರಕಾರ, ಮಂಗಳವಾರ ಮಧ್ಯಾಹ್ನ 1.55ರ ವಿಮಾನದಲ್ಲಿ ದೆಹಲಿಗೆ ತೆರಳಿ ರಾತ್ರಿ 7ಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಲಿದ್ದಾರೆ. ಕರ್ನಾಟಕ ಭವನದಲ್ಲಿ ತಂಗುವರು. ಬುಧವಾರ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಸಂಬಂಧ ರ್ಚಚಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಕೆಲ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಬೆಂಗಳೂರಿಗೆ ವಾಪಸ್ಸಾಗುವ ದಿನಾಂಕ ಮುಕ್ತವಾಗಿರಿಸಿದ್ದಾರೆ.
ಕಾರಜೋಳ ಸಾಥ್:ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮಾತುಕತೆ ನಡೆಸಲಿರುವ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಬೊಮ್ಮಾಯಿ ತಮ್ಮೊಂದಿಗೆ ಕರೆದೊಯ್ಯಲಿದ್ದಾರೆ. ಮೇಕೆದಾಟು ಹಾಗೂ ಕಳಸಾ-ಬಂಡೂರಿ ನಾಲಾ ಯೋಜನೆಗೆ ಪರಿಸರ ಸಚಿವಾಲಯದ ಸಮ್ಮತಿ, ಕೃಷ್ಣಾ ಎರಡನೇ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಣೆ ಕುರಿತು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವಂತೆ ಕೋರಲಿದ್ದಾರೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಲಿಂದ ಮೇಲೆ ಸಭೆ ನಡೆಸಿದೆ. ಆದರೆ ಮೇಕೆದಾಟು ವಿಸõತ ಯೋಜನಾ ವರದಿಗೆ ಅನುಮೋದನೆ ನೀಡುವ ವಿಷಯದಲ್ಲಿ ತಟಸ್ಥ ನಿಲುವು ತಳೆದಿದೆ. ಕಳೆದ ತಿಂಗಳು ರಾಜ್ಯಕ್ಕೆ ಬಂದಿದ್ದ ಗಜೇಂದ್ರ ಶೇಖಾವತ್ ಅವರು ಕರ್ನಾಟಕ ಮತ್ತು ತಮಿಳುನಾಡು ಪರಸ್ಪರ ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ಸಲಹೆ ನೀಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಮೇಕೆದಾಟು ಯೋಜನೆಗೆ ಅನುಮತಿ ನೀಡಕೂಡದು ಎಂದು ವಿನಂತಿಸಿದ್ದಾರೆ. ಈ ಬೆಳವಣಿಗೆ ನಡುವೆ ಬೊಮ್ಮಾಯಿ ಅವರು ಶೇಖಾವತ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಮೇಕೆದಾಟು ರಾಜಕೀಯವಾಗಿ ಪ್ರತಿಷ್ಠೆ ಹಾಗೂ ಕುತೂಹಲದ ತಿರುವು ಪಡೆದಿದೆ.
ಅಮಿತ್ ಷಾ ರಾಜ್ಯಕ್ಕೆ ಬಂದು ಹೋಗಿದ್ದು, ರಾಜ್ಯದ ರಾಜಕೀಯದಲ್ಲಿ ಬದಲಾವಣೆ ಉಂಟಾಗಲಿದೆ. ಯಾವುದಕ್ಕೂ ಕಾದು ನೋಡಿ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಲಿಟ್ಟಲ್ಲೆಲ್ಲ ಆ ಪಕ್ಷ ಸರ್ವನಾಶವಾಗಿದೆ. ರಾಜ್ಯಕ್ಕೆ ಕಾಲಿಟ್ಟರೂ ಅದೇ ಪರಿಸ್ಥಿತಿಯಾಗಲಿದೆ. ರಾಹುಲ್ ರಾಜ್ಯಕ್ಕೆ ಬರುವುದಾದರೆ ಅವರ ಪ್ರವಾಸದ ಖರ್ಚನ್ನು ನಾನೇ ವಹಿಸಿಕೊಳ್ಳಲು ಸಿದ್ಧ.
|ಕೆ.ಎಸ್. ಈಶ್ವರಪ್ಪಗ್ರಾಮೀಣಾಭಿವೃದ್ಧಿ ಸಚಿವ
ಚುನಾವಣಾ ಸಂಪುಟ ಚರ್ಚೆ:ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ವರಿಷ್ಠರು ಗಮನದಲ್ಲಿಟ್ಟುಕೊಂಡು ರಾಜಕೀಯ ತೀರ್ವನಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ರ್ತಸಿವೆ. ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬಿ ಸಂಪುಟ ವಿಸ್ತರಿಸುವ ವಿಚಾರ ನೇಪಥ್ಯಕ್ಕೆ ಸರಿದಿದ್ದು, ‘ಚುನಾವಣಾ ಸಂಪುಟ’ ಚರ್ಚೆ ಮುನ್ನೆಲೆಗೆ ಬಂದಿದೆ. ಒಟ್ಟಾರೆ ಮಂತ್ರಿ ಮಂಡಲಕ್ಕೆ ಹೊಸ ಸ್ವರೂಪ, ಚೈತನ್ಯದ ಸ್ಪರ್ಶ ಸಿಗುವ ಸಾಧ್ಯತೆಗಳಿವೆ. ಪ್ರದೇಶ, ಜಿಲ್ಲೆ, ಜಾತಿ, ಸಾಮಾಜಿಕ ಸಮೀಕರಣದ ನೆಲೆಯಲ್ಲಿ ಆದ್ಯತೆಗೆ ಚಿಂತನೆ ನಡೆದಿವೆ. ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ ಎಂಬ ಉಮೇದಿಗಿಂತ ಕರ್ನಾಟಕದ ರಾಜಕೀಯ ಸ್ಥಿತಿಗತಿ, ವಸ್ತುಸ್ಥಿತಿ ಆಧಾರಿತ ನಡೆ ಅನುಸರಿಸಲು ಯೋಚಿಸುತ್ತಿದ್ದಾರೆ. ಹೀಗಾಗಿ, ‘ಗಮನಾರ್ಹ ಬದಲಾವಣೆ’ಗಳಾಗುವ ಸಂಭವವಿದೆ. ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ, ಸಮತೋಲನವೇ ಪ್ರಧಾನ ಆದ್ಯತೆಯಾಗಿರಲಿದೆ ಎಂದು ಮೂಲಗಳು ಹೇಳಿವೆ.
ಎಚ್ಚರಿಕೆಯ ಹೆಜ್ಜೆ:ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಯಾವುದಾದರೊಂದು ಸ್ಪಷ್ಟ ನಿರ್ಣಯಕ್ಕೆ ಬರಬೇಕಾದ ಅನಿವಾರ್ಯತೆ ತಲೆದೋರಿದೆ. ಕ್ರಿಯಾಶೀಲರಿಗೆ ಮಣೆ, ಸವಾಲು ಸಮರ್ಥವಾಗಿ ನಿಭಾಯಿಸುವವರಿಗೆ ಹೊಣೆ ಒಪ್ಪಿಸಬೇಕೆಂಬ ಒತ್ತಡ ಹೆಚ್ಚುತ್ತಿದ್ದು, ವಿಳಂಬ ಮಾಡಿದಷ್ಟು ತಪು್ಪ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ನಿಗಮ- ಮಂಡಳಿಗಳನ್ನು ಪುನಾರಚಿಸಬೇಕೆಂಬ ಕೂಗು ಇನ್ನಷ್ಟು ಗಟ್ಟಿಯಾಗಿದೆ. ಶಾಸಕರ ಜತೆಗೆ ಮುಖಂಡರು, ಕಾರ್ಯಕರ್ತರಿಗೂ ಅಧಿಕಾರ ಹಂಚಿಕೆಯಾಗಬೇಕು ಎನ್ನುವುದು ಈ ಕೂಗಿನ ತಾತ್ಪರ್ಯವಾಗಿದ್ದು, ವರಿಷ್ಠರ ಮುಂದಿನ ನಡೆಯನ್ನು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.
ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ:ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮತ್ತು ನೀರಾವರಿ ನಿಗಮದ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಸೋಮವಾರ ಸಭೆ ನಡೆಸಿ ಮಾಹಿತಿ ಪಡೆದರು. ಮೇಕೆದಾಟು ಯೋಜನೆಗೆ ಸಂಬಂದಿಸಿದಂತೆ ಕೇಂದ್ರಕ್ಕೆ ಸಲ್ಲಿಸಬೇಕಾಗಿರುವ ಮಾಹಿತಿಯನ್ನು ಸಿಎಂ ಕೇಳಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪ್ರತ್ಯೇಕವಾದ ಪತ್ರಗಳನ್ನು ಅವರು ಸಿದ್ಧಪಡಿಸಿಕೊಂಡಿದ್ದಾರೆ.
ಬೆಂಗಳೂರು:ಕೇಂದ್ರ, ರಾಜ್ಯ ಸರ್ಕಾರದ ನೀತಿ-ನಿರ್ಧಾರ, ಯೋಜನೆ/ ಕಾರ್ಯಕ್ರಮಗಳನ್ನು ತಿಳಿಸಲೆಂದು ಜನರ ಬಳಿಗೆ ತೆರಳಲು ರಾಜ್ಯ ಬಿಜೆಪಿ ತಾಲೀಮು ಮಹತ್ವದ ಘಟ್ಟಕ್ಕೆ ತಲುಪಿದೆ. ಜಿಲ್ಲಾಮಟ್ಟದ ಪದಾಧಿಕಾರಿಗಳು, ಪ್ರಮುಖರಿಗೆ ಅಭ್ಯಾಸ ವರ್ಗ ನಡೆಸುವ ಮೂಲಕ ಪಕ್ಷದ ನಿಲುವು, ವಿಚಾರಧಾರೆ ಕುರಿತು ಮನವರಿಕೆ ಮಾಡಿಕೊಟ್ಟು, ಮಾನಸಿಕವಾಗಿ ಸನ್ನದ್ಧಗೊಳಿಸಲಾಗಿದೆ. ಬೂತ್ ಹಾಗೂ ಮಂಡಲಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ತಳಸ್ತರದ ಕಾರ್ಯಕರ್ತರ ಜತೆಗೆ ನಿಕಟತೆ, ಒಡನಾಟ ಹೆಚ್ಚಿಸಿಕೊಳ್ಳುವುದಕ್ಕೆ ಒತ್ತು ನೀಡಲಾಗಿದೆ.
ಸಂಘಟನಾ ಬಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವೇದಿಕೆ ಸಜ್ಜಾಗುತ್ತಿದೆ. ರಾಜ್ಯ ನಾಯಕರು ಬಿಡುವಿಲ್ಲದೆ ಯಾತ್ರೆ ಕೈಗೊಂಡು ಹುರಿದುಂಬಿಸಲು ಉತ್ಸುಕರಾಗಿದ್ದಾರೆ. ಪ್ರತಿಪಕ್ಷಗಳ ತಕ್ಕ ಉತ್ತರ ನೀಡುವ ಜತೆಗೆ ಸರ್ಕಾರ ಮತ್ತು ಪಕ್ಷದ ಪರ ಜನಾಭಿಪ್ರಾಯ ರೂಪಿಸುವ ಉದ್ದೇಶದಿಂದ ಕ್ರಿಯಾಶೀಲ ಕಾರ್ಯಕರ್ತರ ಪಡೆಗಳನ್ನು ಅಣಿಗೊಳಿಸಲಾಗುತ್ತಿದೆ.
ಬಹು ಉದ್ದೇಶಿತ ಸಂಪರ್ಕ:ಕೇಂದ್ರ-ರಾಜ್ಯ ಸರ್ಕಾರದ ಕಾರ್ಯಕ್ರಮಗಳ ವ್ಯಾಪಕ ಪ್ರಚಾರದಿಂದ ಅರ್ಹರಿಗೆ ಯೋಜನೆಗಳ ಲಾಭ ದೊರೆಯಲಿದ್ದು, ಉಭಯ ಸರ್ಕಾರದ ಪ್ರಯತ್ನ ಫಲಿಸಲಿದೆ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಅನುದಾನ ಸದ್ಬಳಕೆ ಜತೆಗೆ ಜನರ ವಿಶ್ವಾಸ ಗಳಿಸಲು ಹಾಗೂ ಇನ್ನಷ್ಟು ಹತ್ತಿರವಾಗಲು ಆಸರೆಯಾಗಲಿದೆ. ಅಲ್ಲದೆ, ಸರ್ಕಾರ ಮತ್ತು ಪಕ್ಷದ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ ಸಾಧ್ಯವಾಗಲಿದೆ. ರಾಜ್ಯ ಸರ್ಕಾರ, ಪಕ್ಷದ ರಾಜ್ಯ ನಾಯಕರಿಗೆ ಹಿಮ್ಮಾಹಿತಿ ಒದಗಿಸಲು ಅನುಕೂಲವಾಗುತ್ತದೆ. ಇದರಿಂದ ‘ಆಡಳಿತ ವಿರೋಧಿ ಅಲೆ’ ಹೋಗಲಾಡಿಸುವ ಕಾರ್ಯತಂತ್ರ ಹೆಣೆಯಬಹುದಾಗಿದ್ದು, ತುರ್ತು ಅಗತ್ಯತೆ, ಅಭಿವೃದ್ಧಿ ವೈಖರಿ ತಿಳಿದುಕೊಂಡು ತಿದ್ದಿಕೊಳ್ಳುವುದಕ್ಕೆ ನೆರವಾಗಲಿದೆ. ಜನಸಂಪರ್ಕ ಅಭಿಯಾನವು ಬಹು ಉದ್ದೇಶಿತ ಲಾಭ ತರಲಿದೆ. ಆ ಮೂಲಕ ಅಪನಂಬಿಕೆ, ಅತೃಪ್ತಿ ದೂರವಾಗಿ ಸರ್ಕಾರ, ಪಕ್ಷದ ವರ್ಚಸ್ಸು ವೃದ್ಧಿಯಾಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
12ರಿಂದ 24ರವರೆಗೆ ಯಾತ್ರೆ:ರಾಜ್ಯ ನಾಯಕರನ್ನು ಒಳಗೊಂಡ ಮೂರು ತಂಡಗಳ ಸಂಘಟನಾ ಯಾತ್ರೆ ಏ.12ರಿಂದ 24ರವರೆಗೆ ನಡೆಯುವುದು ಬಹುತೇಕ ಅಂತಿಮವಾಗಲಿದೆ. ಬಿ.ಎಸ್. ಯಡಿಯೂರಪ್ಪ, ಕೇಂದ್ರ-ರಾಜ್ಯ ಸಚಿವರು, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಪದಾಧಿಕಾರಿ ಗಳನ್ನು 3 ತಂಡಗಳಲ್ಲಿ ವಿಭಜಿಸಿ ಜವಾಬ್ದಾರಿ ಹಂಚಲಾಗುತ್ತದೆ. ಅಚ್ಚುಕಟ್ಟಾಗಿ ನಿರ್ವಹಿಸ ಬೇಕು ಎಂದು ಪಕ್ಷದ ವರಿಷ್ಠರು ಸೂಚನೆ ನೀಡಿದ್ದು, ಪೂರಕವಾಗಿ ಪ್ರವಾಸದ ನೀಲಿನಕ್ಷೆ ಸಿದ್ಧಗೊಳುತ್ತಿದೆ. ಮೊದಲ ಹಂತದಲ್ಲಿ ವಿಭಾಗಮಟ್ಟದಲ್ಲಿ ತಲಾ 2 ಸಮಾವೇಶಗಳು ನಡೆಯಲಿವೆ. ನಂತರ 38 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಜಿಲ್ಲಾವಾರು ಕಾರ್ಯಕರ್ತರ ಸಮ್ಮೇಳನ ಆಯೋಜನೆ ಚರ್ಚೆ ಹಂತದಲ್ಲಿದೆ. ಹೊಸಪೇಟೆಯಲ್ಲಿ ಏ.16, 17ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ರಾಜ್ಯ ತಂಡಗಳ ಒಂದು ಸುತ್ತಿನ ಪ್ರವಾಸದಿಂದ ಸಂಗ್ರಹಿಸಿದ ಅಭಿಪ್ರಾಯಗಳ ಅವಲೋಕನವಾಗಲಿದೆ.
ಬೆಂಗಳೂರು:ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪಕ್ಷ ಸೇರ್ಪಡೆಗೆ ರಾಜ್ಯ ಬಿಜೆಪಿಯಲ್ಲಿ ಅಪಸ್ವರ ಕೇಳಿ ಬಂದಿದೆ. ಹೊರಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಆಸಕ್ತರಾಗಿದ್ದಾರೆ. ಆದರೆ, ವರಿಷ್ಠರಿಗೆ ಹತ್ತಿರವಿರುವ ಕೆಲ ಮುಖಂಡರು ಹೊರಟ್ಟಿ ಸೇರ್ಪಡೆ ಅಗತ್ಯ ಏಕಿಲ್ಲ ಎಂಬ ಬಗ್ಗೆ ವರದಿಯನ್ನು ರವಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಹೊರಟ್ಟಿ ಅವರು ಪರಿಷತ್ ಸದಸ್ಯ ಸ್ಥಾನ ಸೇರಿ ಎರಡು ಕಡೆ ಸಂಬಳ ಪಡೆದಿದ್ದಾರೆ ಎಂಬುದು ವಿವಾದಕ್ಕೆ ಒಳಗಾಗಿತ್ತು. ಟ್ರಸ್ಟ್ ಒಂದರ ಅಧ್ಯಕ್ಷ ಸ್ಥಾನವೂ ವಿವಾದವಾಗಿದೆ. ಹೊರಟ್ಟಿಗೆ ಈಗಾಗಲೆ 76 ವರ್ಷ ವಯಸ್ಸಾಗಿದೆ. 42 ವರ್ಷ ಪರಿಷತ್ ಸದಸ್ಯರಾಗಿಯೇ ಕಳೆದಿದ್ದಾರೆ. ಮೊದಲು ಬಿಜೆಪಿ ವಿರೋಧಿ ಮನಸ್ಥಿತಿ ಹೊಂದಿದ್ದರು ಎಂಬುದು ಸೇರಿ ಎಂಟು ಅಂಶಗಳ ವರದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ರವಾನಿಸಲಾಗಿದೆ. ಉತ್ತರ ಕರ್ನಾಟಕ ಬಿಜೆಪಿ ಭದ್ರ ನೆಲೆ ಇರುವ ಪ್ರದೇಶವಾಗಿದೆ. ಅಲ್ಲಿ ಇನ್ನೊಂದು ಪಕ್ಷದವರನ್ನು ಕರೆತಂದು ಅಭ್ಯರ್ಥಿ ಮಾಡುವ ಅಗತ್ಯವಿಲ್ಲ. ಪಕ್ಷದ ಕಾರ್ಯಕರ್ತರೊಬ್ಬರಿಗೆ ಅವಕಾಶ ಕಲ್ಪಿಸಬಹುದು ಎಂಬ ಅಂಶವನ್ನು ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವರದಿ ಆಧಾರದ ಮೇಲೆ ವರಿಷ್ಠರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

ಮಸೀದಿಗಳಲ್ಲಿನ ಮೈಕ್​ ವಿರುದ್ಧ ಶ್ರೀರಾಮಸೇನೆ ಗುಡುಗು; ನಿರ್ಬಂಧಿಸದಿದ್ದರೆ ದೇವಸ್ಥಾನಗಳಲ್ಲಿ ಮೈಕ್​ ಹಾಕಿ ಭಜನೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
