ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಪುನರ್​ ರಚನೆ ಆಗಿದ್ದು, 43 ಹೊಸ ಹಾಗೂ ಹಳೆಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದ 4 ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.
ಕೇಂದ್ರ ಸಚಿವರಾಗಿ ನಾರಾಯಣ ರಾಣೆ ಅವರು ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ನಾರಾಯಣ ರಾಣೆ ನಂತರ ಅಸ್ಸಾಂನ ಮಾಜಿ ಸಿಎಂ ಆದ ಸರ್ಬಾನಂದ ಸೋನಾವಾಲ್​, ಡಾ.ವಿರೇಂದ್ರ ಕುಮಾರ್, ಜ್ಯೋತಿರಾದಿತ್ಯ ಮಾಧವರಾವ್ ಸಿಂಧಿಯಾ, ಆರ್​.ಪಿ.ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ ಪಾರಸ್​, ಕಿರೆಣ್ ರಿಜಿಜು, ರಾಜಕುಮಾರ್ ಸಿಂಗ್, ಹರದೀಪ್​ಸಿಂಗ್ ಪುರಿ, ಪುರುಷೋತ್ತಮ್ ರೂಪಾಲಾ​ ಅವರು ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜಿ.ಕಿಶನ್ ರೆಡ್ಡಿ, ಈ ಹಿಂದೆ ಹಣಕಾಸು ಖಾತೆಯ ರಾಜ್ಯ ಸಚಿವರಾಗಿದ್ದ ಅನುರಾಗ್ ಠಾಕೂರ್​, ಪಶ್ಚಿಮ ಬಂಗಾಳ ಮೂಲದ ಅನುಪ್ರಿಯಾ ಸಿಂಗ್ ಪಟೇಲ್​, ಉತ್ತರ ಪ್ರದೇಶದ ಆಗ್ರಾದ ಸಂಸದರಾದ ಸತ್ಯಪಾಲ್ ಸಿಂಗ್ ಬಘೇಲ್ ಪ್ರಮಾಣ ವಚನ ಸ್ವೀಕರಿಸಿದರು.
ಆಂಗ್ಲಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರಕರ್ನಾಟಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್, ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ. ಚಿತ್ರದುರ್ಗದ ಸಂಸದರಾಗಿರುವ ಎ.ನಾರಾಯಣಸ್ವಾಮಿ ಆಂಗ್ಲಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಬೀದರ್​ ಸಂಸದ ಭಗವಂತ ಖೂಬಾ ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
