ಈಜಿಪ್ಟ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜಧಾನಿ ಕೈರೋದಲ್ಲಿನ ಹೆಲಿಯೊಪೊಲೀಸ್ ಯುದ್ಧ ಸಮಾಧಿ ಸ್ಮಶಾನ ಸ್ಮಾರಕಕ್ಕೆ (ಹೆಲಿಯೊಪೊಲೀಸ್ ಕಾಮನ್​ವೆಲ್ತ್ ವಾರ್ ಗ್ರೇವ್ ಸಿಮೆಟ್ರಿ) ಭೇಟಿ ನೀಡಿದರು. ಪ್ರಥಮ ವಿಶ್ವ ಯುದ್ಧದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸೆôನ್​ನಲ್ಲಿ ಹೋರಾಡಿದ ಭಾರತೀಯ ಸೈನಿಕರ ಸ್ಮರಣಾರ್ಥ ಈ ಸ್ಮಾರಕ ನಿರ್ವಿುಸಲಾಗಿದೆ. ಎರಡನೇ ವಿಶ್ವ ಯುದ್ಧದಲ್ಲಿ ಮಡಿದ 1,700 ಕಾಮನ್​ವೆಲ್ತ್ ಸೈನಿಕರ ಸ್ಮಾರಕವೂ ಇದಾಗಿದೆ.
ಹೆಲಿಯೊಪೊಲೀಸ್ (ಪೋರ್ಟ್ ಟ್ಯೂಫಿಕ್) ಸ್ಮಾರಕವು ಬೃಹತ್ ಹೆಲಿಯೊಪೊಲೀಸ್ ಕಾಮನ್​ವೆಲ್ತ್ ಯುದ್ಧ ಸಮಾಧಿ ಸ್ಮಶಾನ ಸ್ಮಾರಕದ ಒಂದು ಭಾಗವಾಗಿದೆ. ಮೊದಲ ವಿಶ್ವ ಯುದ್ಧದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸೆôನ್​ನಲ್ಲಿ ಕೈಗೊಳ್ಳಲಾದ ವಿವಿಧ ಕಾರ್ಯಾಚರಣೆಗಳಲ್ಲಿ ಹೋರಾಡಿ ಮಡಿದ 3,727 ಭಾರತೀಯ ಸೈನಿಕರ ಸ್ಮರಣಾರ್ಥ ಇದನ್ನು ನಿರ್ವಿುಸಲಾಗಿದೆ.
ಮೂಲ ಪೋರ್ಟ್ ಟ್ಯೂಫಿಕ್ ಸ್ಮಾರಕವನ್ನು ಸೂಯೆಜ್ ಕಾಲುವೆಯ ಪ್ರವೇಶದ್ವಾರದಲ್ಲಿ 1926ರಲ್ಲಿ ನಿರ್ವಿುಸಲಾಗಿತ್ತು. 1967ರಲ್ಲಿ ಇಸ್ರೇಲ್-ಈಜಿಪ್ಟ್ ಯುದ್ಧದಲ್ಲಿ ಈಜಿಪ್ಟ್ ಸೈನಿಕರನ್ನು ಹಿಮ್ಮೆಟ್ಟಿಸುವ ಮೂಲಕ ಸ್ಮಾರಕವನ್ನು ನಾಶಪಡಿಸಲಾಯಿತು. ಈಜಿಪ್ಟ್ ಮತ್ತು ಪ್ಯಾಲೆಸೆôನ್​ನಲ್ಲಿ ಮೊದಲ ವಿಶ್ವ ಯುದ್ಧದ ಅಭಿಯಾನದಲ್ಲಿ ಮಡಿದ ಭಾರತೀಯ ಸೈನಿಕರ ಹೆಸರನ್ನು ಹೊಂದಿರುವ ನೂತನ ಸ್ಮಾರಕವನ್ನು 1980ರಲ್ಲಿ ಹೆಲಿಯೊಪೊಲೀಸ್ ಕಾಮನ್​ವೆಲ್ತ್ ವಾರ್ ಗ್ರೇವ್ ಸಿಮೆಟ್ರಿಯಲ್ಲಿ ನಿರ್ವಿುಸಲಾಯಿತು.
ಮೂಲ ಸ್ಮಾರಕವು ಕೇಂದ್ರ ಸ್ತಂಭ ಮತ್ತು ಎರಡು ಘರ್ಜಿಸುವ ಸಿಂಹಗಳು ದಾಳಿ ಮಾಡಲು ಅಣಿಯಾಗಿರುವುದನ್ನು ಒಳಗೊಂಡಿತ್ತು. ಆದರೆ, ಇದರಲ್ಲಿ ಯುದ್ಧದಲ್ಲಿ ಸಾವು-ನೋವು ಕಂಡ ಭಾರತೀಯ ಸೈನಿಕರ ಹೆಸರುಗಳು ಇರಲಿಲ್ಲ. ಹೆಲಿಯೊಪೊಲೀಸ್​ನಲ್ಲಿರುವ ನೂತನ ಸ್ಮಾರಕದಲ್ಲಿ ಭಾರತೀಯ ಸೈನಿಕರ ಹೆಸರುಗಳನ್ನು ದಾಖಲಿಸಲಾಗಿದೆ.
ಬ್ರಿಟಿಷ್ ಯುದ್ಧಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವಿಕ್ಟೋರಿಯಾ ಕ್ರಾಸ್ ಅನ್ನು ಮರಣೋತ್ತರವಾಗಿ ಪಡೆದ ರಿಸಲ್ದಾರ್ ಬದ್ಲು ಸಿಂಗ್ ಅವರನ್ನು ಈ ಯುದ್ಧ ಸ್ಮಾರಕದಲ್ಲಿ ಹೆಸರಿಸಲಾಗಿದೆ. ಯುದ್ಧದಲ್ಲಿ ಮರಣ ಹೊಂದಿದ ಅವರನ್ನು ರಣರಂಗದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿತ್ತು. ರಿಸಲ್ದಾರ್ ಬದ್ಲು ಸಿಂಗ್ ಅವರು 14ನೇ (ಮುರ್ರೆಸ್) ಜಾಟ್ ಲ್ಯಾನ್ಸರ್ಸ್​ಗೆ ಸೇರಿದವರಾಗಿದ್ದು, 29ನೇ ಲ್ಯಾನ್ಸರ್​ಗಳೊಂದಿಗೆ (ಡೆಕ್ಕನ್ ಹಾರ್ಸ್) ಜತೆಗೂಡಿದ್ದರು. 1918ರ ಸೆಪ್ಟೆಂಬರ್ 13ರಂದು ಹೋರಾಡಿ ವೀರ ಮರಣ ಹೊಂದಿದರು. ಇವರು ಪಂಜಾಬ್​ನ ರೊಹ್ಟಕ್​ನ ಢಕ್ಲಾದ ಲಾಲ್ ಸಿಂಗ್ ಅವರ ಪುತ್ರ ಎಂದು ಸ್ಮಾರಕದಲ್ಲಿ ದಾಖಲಿಸಲಾಗಿದೆ. 1918ರ ಸೆಪ್ಟೆಂಬರ್ 23ರ ಬೆಳಗ್ಗೆ ಜೋರ್ಡಾನ್​ನ ಪಶ್ಚಿಮ ದಂಡೆಯಲ್ಲಿ ನದಿ ಮತ್ತು ಖೇಸ್ ಸಮರಿವೇ ಗ್ರಾಮದ ನಡುವೆ ಶತ್ರುಗಳು ಪ್ರಬಲವಾಗಿ ಆಕ್ರಮಣ ಮಾಡಿದ ಸಂದರ್ಭದಲ್ಲಿ ಬದ್ಲು ಸಿಂಗ್ ಅವರು ಅತ್ಯಂತ ಶೌರ್ಯದಿಂದ ಹೋರಾಡಿದರು. ಸಣ್ಣ ಬೆಟ್ಟದಲ್ಲಿನ ಮೆಷಿನ್ ಗನ್ ಮತ್ತು 200 ಪದಾತಿ ದಳದ ದಾಳಿಯಿಂದಾಗಿ ತಮ್ಮ ಸೇನಾಪಡೆಯು ಹೆಚ್ಚಿನ ಸಾವು-ನೋವು ಅನುಭವಿಸುತ್ತಿದೆ ಎಂಬುದನ್ನು ಅರಿತುಕೊಂಡರು. ಸ್ವಲ್ಪವೂ ಹಿಂಜರಿಕೆಯಿಲ್ಲದೆ, ಅಪಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಹೋರಾಡುವ ಮೂಲಕ ವೈರಿ ಪಡೆಯನ್ನು ಹಿಮ್ಮೆಟ್ಟಿಸಿದರು. ಇದರಿಂದಾಗಿ ಬದ್ಲು ಸಿಂಗ್ ಅವರ ಸೇನಾ ಪಡೆಯಲ್ಲಿ ಭಾರೀ ಸಾವು-ನೋವು ಉಂಟಾಗುವುದು ತಪ್ಪಿತು. ಒಬ್ಬರೇ ಹೋರಾಡಿ ಮಷಿನ್ ಗನ್ ವಶಪಡಿಸಿಕೊಳ್ಳುವಾಗ ಅವರು ಬೆಟ್ಟದ ತುದಿಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡರು. ಆದರೆ, ಅವರು ಸಾಯುವ ಮೊದಲು ವೈರಿ ಪಡೆಯ ಬಂದೂಕು ಮತ್ತು ಪದಾತಿ ದಳಗಳು ಶರಣಾದವು. ಅವರು ತೋರಿದ ಶೌರ್ಯವು ಅತ್ಯುನ್ನತವಾಗಿತ್ತು ಎಂದು ಸ್ಮಾರಕದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಸೇನೆಗೆ ಸೇರಿದ ಅನೇಕ ಭಾರತೀಯ ರೆಜಿಮೆಂಟ್​ಗಳು ಮತ್ತು ರಾಜಪ್ರಭುತ್ವದ ಸೇನಾಪಡೆಗಳನ್ನು ಈ ಸ್ಮಾರಕದಲ್ಲಿ ಹೆಸರಿಸಲಾಗಿದೆ. ಮೊದಲನೆಯ ಮಹಾಯುದ್ಧದಲ್ಲಿ ರಾಜಪ್ರಭುತ್ವದ ಪಡೆಗಳು ಪ್ರಮುಖ ಪಾತ್ರ ವಹಿಸಿದವು. ಸರ್ಕಾರಿ ಸೇನಾಪಡೆಗಳು ಬಹುತೇಕ ಎಲ್ಲ ಯುದ್ಧಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾದವು. ಹೆಲಿಯೊಪೊಲೀಸ್ ಸ್ಮಾರಕದಲ್ಲಿ ಪಟ್ಟಿ ಮಾಡಲಾದ ರೆಜಿಮೆಂಟ್​ಗಳಲ್ಲಿ 42ನೇ ಡಿಯೋಲಿ ರೆಜಿಮೆಂಟ್, 58ನೇ ವಾನ್ ರೈಫಲ್ಸ್ (ಫ್ರಾಂಟಿಯರ್ ಫೋರ್ಸ್), 2ನೇ ಬೆಟಾಲಿಯನ್, 3ನೇ ಕ್ವೀನ್ ಅಲೆಕ್ಸಾಂಡ್ರಾ ಅವರ ಸ್ವಂತ ಗೂರ್ಖಾ ರೈಫಲ್ಸ್, 51ನೇ ಸಿಖ್ (ಫ್ರಾಂಟಿಯರ್ ಫೋರ್ಸ್), 1ನೇ ಬಟಾಲಿಯನ್ 50ನೇ ಕುಮಾವೊ ರೈಫಲ್ಸ್, ಜೋಧಪುರ (ಇಂಪಿರಿಯಲ್ ಸರ್ವೀಸ್) ಲ್ಯಾನ್ಸರ್ಸ್, 3ನೇ ಸ್ಯಾಪರ್ಸ್ ಮತ್ತು ಮೈನರ್ಸ್ ಸೇರಿದಂತೆ ಇನ್ನೂ ಅನೇಕ ಹೆಸರುಗಳಿವೆ.
ಭಾರತದಿಂದ ಕಳುಹಿಸಲಾದ ಭಾರತೀಯ ಪಡೆಗಳು ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಪಶ್ಚಿಮ ಏಷ್ಯಾದಲ್ಲಿ ಪ್ರಮುಖ ಪಾತ್ರ ವಹಿಸಿದವು. ಪ್ರಥಮ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಕುರಿತು ಪುಸ್ತಕವನ್ನು ಬರೆದಿರುವ ಸಂಶೋಧಕ ವೇದಿಕಾ ಕಾಂತ್ ಅವರ ಪ್ರಕಾರ, ಈಜಿಪ್ಟ್ ಮತ್ತು ಪ್ಯಾಲೆಸೆôನ್​ನಲ್ಲಿ ಸೂಯೆಜ್ ಕಾಲುವೆಗೆ ಭದ್ರತೆ ಒದಗಿಸುವಲ್ಲಿ ಭಾರತೀಯ ಪಡೆಗಳು ಪ್ರಮುಖ ಪಾತ್ರ ವಹಿಸಿದವು. ಇಲ್ಲಿ ಭಾರತೀಯ ಅಶ್ವಸೈನ್ಯವು ಹೈಫಾ ಕದನದಲ್ಲಿ ಭಾಗವಹಿಸಿತು. ನದದೆಹಲಿ ಯುದ್ಧ ಸ್ಮಾರಕದಲ್ಲಿ ಈ ಸಂಗತಿಯನ್ನು ದಾಖಲಿಸಲಾಗಿದೆ. ಮೊದಲ ಮಹಾಯುದ್ಧದಲ್ಲಿ ಮೆಸೊಪೊಟಮಿಯಾದಲ್ಲಿಯೂ ಭಾರತೀಯ ಸೈನಿಕರು ಪ್ರಮುಖ ಪಾತ್ರ ವಹಿಸಿದ್ದರು.
ಆ ‘ಜ್ಯೋತಿ’ ಇದೆ ಎಂದು ಗೃಹಜ್ಯೋತಿ ನೋಂದಣಿ ಕಡೆಗಣಿಸಬೇಡಿ!; ಇಲ್ಲಿದೆ ವಿವರ ಗಮನಿಸಿ..

ಅಯೋಧ್ಯಾ ರಾಮಮಂದಿರ ಸಂಕ್ರಾಂತಿ ಬಳಿಕ ಲೋಕಾರ್ಪಣೆ, ಅಲ್ಲಿ ಯಾವುದೇ ಸೇವೆಗಳಿರಲ್ಲ: ಪೇಜಾವರಶ್ರೀ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + ten =
Remember me
