ನವದೆಹಲಿ:ಕೃಷಿ ಕಾಯ್ದೆ ವಿರೋಧಿಸಿ ರಸ್ತೆಗಳಿದಿರುವ ರೈತರು ಡಿಸೆಂಬರ್​ 8ರಂದು ಭಾರತ್​ ಬಂದ್​ಗೆ ಕರೆ ನೀಡಿದ್ದಾರೆ. ಅನೇಕ ರಾಜಕೀಯ ಪಕ್ಷಗಳು ಹಾಗೂ ಒಕ್ಕೂಟ, ಸಂಘಟನೆಗಳು ಈ ಬಂದ್​ಗೆ ಬೆಂಬಲ ಸೂಚಿಸಿವೆ. ಆದರೆ ನಾವು ಮಾತ್ರ ಬೆಂಬಲ ನೀಡುವುದಿಲ್ಲ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ಇದನ್ನೂ ಓದಿ:ಭಾರತ್​ ಬಂದ್​ಗೆ ರಾಜ್ಯದ ಕಾಂಗ್ರೆಸ್​-ಜೆಡಿಎಸ್​ ಬೆಂಬಲ ಇದ್ಯಾ?
ಭಾರತ್​ ಬಂದ್​ ವಿಚಾರದಲ್ಲಿ ಅಖಿಲ ಭಾರತ ಸಾರಿಗೆ ಕಲ್ಯಾಣ ಸಂಘ (ಎಟ್ವಾ) ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಚರ್ಚೆ ನಡೆಸಿದೆ. ಭಾರತ್​ ಬಂದ್​ನಲ್ಲಿ ಈ ಎರಡೂ ಒಕ್ಕೂಟಗಳು ಬೆಂಬಲ ಸೂಚಿಸುವುದಿಲ್ಲ. ಸಾರಿಗೆ ಮತ್ತು ವ್ಯಾಪಾರ ವಹಿವಾಟು ಎಂದಿನಂತೆ ನಾಳೆಯೂ ನಡೆಯಲಿದೆ ಎಂದು ತಿಳಿಸಲಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ ಭಾರ್ತಿಯ, ‘ರೈತ ಹೋರಾಟಕ್ಕೆ ಅಥವಾ ಭಾರತ್​ ಬಂದ್​ಗೆ ಬೆಂಬಲ ಸೂಚಿಸಿ ಎಂದು ಯಾವುದೇ ರೈತ ಸಂಘಟನೆಯಾಗಲೀ ಅಥವಾ ಮುಖಂಡರಾಗಲಿ ನಮ್ಮನ್ನು ಭೇಡಿ ಮಾಡಿಲ್ಲ. ಆದ್ದರಿಂದ ಬೆಂಬಲದ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮೊನ್ನೆ ಬರ್ತಡೇ ಗಿಫ್ಟ್​ ಪಡೆದಿದ್ದ ಬೈಕ್​ನಿಂದಲೇ ಹೊಯ್ತು ವಿದ್ಯಾರ್ಥಿಗಳಿಬ್ಬರ ಪ್ರಾಣ: ಪೊಲೀಸರಿಗೆ ಸಿಕ್ತು ರಹಸ್ಯ ವಸ್ತು!
ರೈತರು ಸರ್ಕಾರದ ಜತೆ ಮಾತುಕತೆಯಲ್ಲಿರುವಾಗ ಈ ಬಂದ್​ ಸರಿಯಲ್ಲ. ವ್ಯಾಪಾರಿಗಳು ಮತ್ತು ಸಾರಿಗೆ ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗಗಳು. ರೈತರ ಬೇಡಿಕೆಗಳನ್ನು ಸರ್ಕಾರ ಚರ್ಚೆ ನಡೆಸುತ್ತಿರುವುದರಿಂದಾಗಿ ಇವೆಲ್ಲವೂ ಒಂದು ಅಂತ್ಯಕ್ಕೆ ಬರುತ್ತದೆ ಎಂದು ನಂಬಿದ್ದೇವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − three =
Remember me
