ನವದೆಹಲಿ:ಕರೊನಾ ವೈರಸ್​ನಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಚೀನಾ ಇದೀಗ ತನ್ನ ಕುತಂತ್ರ ಬುದ್ಧಿಯಿಂದ ಭಾರತದ ಮೇಲೆ ಆಕ್ರಮಣ ಮಾಡಿದೆ.
ಈ ಆಕ್ರಮಣವನ್ನು ಖಂಡಿಸಿ ಇದೀಗ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು (ಸಿಎಐಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸಲು ಸಿದ್ಧತೆ ನಡೆಸಿದ್ದು, ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 450 ವಸ್ತುಗಳನ್ನು ಪಟ್ಟಿ ಮಾಡಿದೆ.
ಮೊದಲ ಹಂತವಾಗಿ 2021ರ ಡಿಸೆಂಬರ್​ ಅಂತ್ಯದ ವೇಳೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಸರಕುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದ್ದು, ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಸಿಎಐಟಿ ಕರೆಕೊಟ್ಟಿದೆ.
ಪ್ರಸ್ತುತ, ಭಾರತವು ಚೀನಾದಿಂದ ವಾರ್ಷಿಕವಾಗಿ ಸುಮಾರು 5.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮೌಲ್ಯವನ್ನು ಕ್ರಮಕ್ರಮವಾಗಿ ಕಡಿಮೆ ಮಾಡುತ್ತಾ ಬರಬೇಕಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ:ಪ್ರೀತಿಯೇ ಮುಳುವಾಯ್ತು: ಮೂತ್ರ ಕುಡಿಸಿ ಹಲ್ಲೆ- ವಿಡಿಯೋ ವೈರಲ್​
“ಮೊದಲ ಹಂತದಲ್ಲಿ, ಸಿಎಐಟಿ 500ಕ್ಕೂ ಹೆಚ್ಚು ವಸ್ತುಗಳ ಪಟ್ಟಿ ಮಾಡಿದೆ. ಇದರಲ್ಲಿ ಅನೇಕ ವಸ್ತುಗಳು ಭಾರತದಲ್ಲಿಯೂ ತಯಾರು ಆಗುತ್ತಿದ್ದರೂ ವಿದೇಶದ ಪ್ರಲೋಭನೆಗೆ ಬಿದ್ದು ಚೀನಾದಿಂದ ನಾವು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಭಾರತಕ್ಕಿಂತ ಅಗ್ಗದ ವಸ್ತು ಅದಾಗಿದ್ದರೂ, ಅಷ್ಟೇ ಕಳಪೆ ಗುಣಮಟ್ಟವನ್ನೂ ಹೊಂದಿರುತ್ತದೆ. ಆದರೆ ಅಗ್ಗದ ಆಸೆಗೆ ನಾವು ಬೀಳುತ್ತಿದ್ದೇವೆ. ಇದನ್ನು ನಾವು ನಿಧಾನವಾಗಿ ಕಡಿಮೆ ಮಾಡಿದರೆ, ಭಾರತದಲ್ಲಿಯೇ ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡುವ ಅಗತ್ಯವಿದೆ ಎಂದು ಒಕ್ಕೂಟ ಹೇಳಿದೆ.
ನಾವು ಈಗಾಗಲೇ ಆಮದು ಮಾಡಿಕೊಳ್ಳುತ್ತಿರುವ ಅನೇಕ ವಸ್ತುಗಳ ತಯಾರಿಕೆಗೆ ಯಾವುದೇ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿಲ್ಲ. ಅವುಗಳನ್ನು ಸುಲಭದಲ್ಲಿ ಭಾರತದಲ್ಲಿಯೇ ತಯಾರು ಮಾಡಬಹುದಾಗಿದ್ದು, ಅದಕ್ಕೆ ಭಾರತ ಕೂಡ ಸಿದ್ಧವಾಗಿದೆ. ನಾವು ನಮ್ಮ ಮನಸ್ಥಿತಿಯನ್ನು ಬದಲಿಸಿ, ಭಾರತದ ಸರಕುಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಈ ಮೂಲಕ ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡಿ ಚೀನಾಕ್ಕೆ ಬುದ್ಧಿ ಕಲಿಸಬೇಕಿದೆ ಎಂದಿದೆ.(ಏಜೆನ್ಸೀಸ್​)
ಕರೊನಾಕ್ಕೆ ಬಲಿಯಾದ ಲೆಫ್ಟಿನೆಂಟ್‌ ಜನರಲ್ ವೋಹ್ರಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × four =
Remember me
