ನವದೆಹಲಿ:ಯೂಟ್ಯೂಬ್​ ವ್ಲಾಗರ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಜನರು ಯೂಟ್ಯೂಬ್ ಅನ್ನು ಹಣ ಸಂಪಾದಿಸುವ ಉತ್ತಮ ವೇದಿಕೆಯನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಾವು ಹೋದ ಕಡೆಯಲ್ಲೆಲ್ಲ ಮೊಬೈಲ್ ಫೋನ್ ಅಥವಾ ಕ್ಯಾಮೆರಾವನ್ನು ತೆಗೆದುಕೊಂಡು ಹೋಗಿ ವಿಡಿಯೋ ಸೆರೆಹಿಡಿದು ತಮ್ಮ ಯೂಟ್ಯೂಬ್​ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ಕೆಲವೊಮ್ಮೆ ವ್ಲಾಗರ್​ಗಳ ವರ್ತನೆಯಿಂದ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಯುವಕನೊಬ್ಬ ವ್ಲಾಗ್ ಮಾಡಲು ಗ್ರಾಮವೊಂದಕ್ಕೆ ಬಂದಾಗ, ಆತನ ಬೆನ್ನ ಹಿಂದೆ ಇದ್ದ ಭಾರವಾದ ಬ್ಯಾಗ್​ ನೋಡಿ, ಆತ ಭಯೋತ್ಪಾದಕನೆಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು, ಹೆದರಿ ಪೊಲೀಸರಿಗೆ ಕರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೂರಜ್ ಶರ್ಮಾ ಎಂಬ ವ್ಲಾಗರ್ ಗ್ರಾಮವೊಂದಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಆತನ ಬೆನ್ನಿನಲ್ಲಿದ್ದ ಭಾರವಾದ ಬ್ಯಾಗ್​ ನೋಡಿ ಆತಂಕಗೊಂಡರು. ಬ್ಯಾಗ್​ನಲ್ಲಿ ಏನಿದೆ ತೋರಿಸು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಆದರೆ, ಯುವಕ ಬ್ಯಾಗ್​ ತೆರೆಯಲು ನಿರಾಕರಿಸಿದಾಗ ಆತನನ್ನು ಭಯೋತ್ಪಾದಕ ಎಂದು ಭಾವಿಸಿ, ಭಯದಿಂದ ಪೊಲೀಸರಿಗೆ ಕರೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಗ್ರಾಮಸ್ಥರು ಮತ್ತು ವ್ಲಾಗರ್ ನಡುವೆ ಮಾತಿನ ಚಕಮಕಿ ನಡೆಸುತ್ತಿರುವುದನ್ನು ಕಾಣಬಹುದು. ಬ್ಯಾಗ್​ ತೆರೆದು ನಿಮಗೆಲ್ಲರಿಗೂ ತೋರಿಸಿದರೆ, ಎಲ್ಲ ವಸ್ತುಗಳನ್ನು ಮತ್ತೆ ಬ್ಯಾಗ್ ಒಳಗಡೆ ಹಾಕಲು ಬಹಳ ಸಮಯ ಹಿಡಿಯುತ್ತದೆ ಬೇಕಾದರೆ, ಪೋಲೀಸರಿಗೆ ಕರೆ ಮಾಡಬಹುದು ಎಂದು ಯುವಕ ಹೇಳಿರುವುದು ವಿಡಿಯೋದಲ್ಲಿದೆ. ಅಲ್ಲದೆ, ಆ ಯುವಕ ತನ್ನ YouTube ಮತ್ತು Instagram ಖಾತೆಯನ್ನು ಸಹ ತೋರಿಸಿದ್ದಾನೆ. ಇದ್ಯಾವುದನ್ನು ನಂಬದ ಗ್ರಾಮಸ್ಥರು, ಪೊಲೀಸರಿಗೆ ಕರೆ ಮಾಡಿ ದೂರು ನೀಡಿದರು.
Vlogger confused as atankwadi in Villagepic.twitter.com/giACdgZOob
— Ghar Ke Kalesh (@gharkekalesh)September 7, 2024

ಸೆಪ್ಟೆಂಬರ್ 7ರಂದು ಶೇರ್ ಆಗಿರುವ ಈ ವಿಡಿಯೋ ಈವರೆಗೂ 1 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ನೂರಾರು ಕಾಮೆಂಟ್​ಗಳು ಬಂದಿವೆ. ನೀವು ಹಳ್ಳಿಯ ಜೀವನದ ಬಗ್ಗೆ ವ್ಲಾಗ್ ಮಾಡಲು ಬಯಸಿದ್ರಿ ಆದರೆ, ಈಗ ನೀವೀಗ ತುಂಬಾ ವೈರಲ್ ಆಗಿ ‘ಮೋಸ್ಟ್ ವಾಂಟೆಡ್’ ಲಿಸ್ಟ್‌ನಲ್ಲಿದ್ದೀರಿ ಎಂದು ನೆಟ್ಟಿಗನೊಬ್ಬ ನಗೆಚಟಾಕಿ ಹಾರಿಸಿದ್ದಾರೆ. ಪರಿಸ್ಥಿತಿಯನ್ನು ಯುವಕ ಚೆನ್ನಾಗಿ ನಿಭಾಯಿಸಿದನು ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​)
ಹುಟ್ಟುಹಬ್ಬದಂದು ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್​ವುಡ್​ ಕ್ವೀನ್​!? ರಮ್ಯಾ ಕೈಹಿಡಿಯುವ ವರನ್ಯಾರು ಗೊತ್ತೇ?

ಬುಕ್ಕಿಂಗ್​ ರದ್ದು ಮಾಡಿದ್ದಕ್ಕೆ ಯುವತಿ ಮೇಲೆ ಹಲ್ಲೆ: ಜಾಮೀನಿಗಾಗಿ ಹಣ ಹೊಂದಿಸಲು ಆಟೋ ಚಾಲಕನ ಪರದಾಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 4 =
Remember me
