ನವದೆಹಲಿ:26 ವಿಪಕ್ಷಗಳ ಮಹಾಮೈತ್ರಿಕೂಟ I.N.D.I.Aವನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದು, ನೀವು ನಮ್ಮನ್ನು ಏನು ಬೇಕಾದರೂ ಕರೆಯಿರಿ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಾವು INDIA ನೀವು ನಮ್ಮನ್ನು ಏನು ಬೇಕಾದರು ಕರೆಯಿರಿ ಮಿಸ್ಟರ್​ ಮೋದಿ. ನಾವು ಮಣಿಪುರದಲ್ಲಿ ಆಗಿರುವ ಗಲಭೆಯನ್ನು ಸರಿಪಡಿಸಿ ಅಲ್ಲಿನ ಜನತೆಯ ಕಣ್ಣಿರನ್ನು ಒರಸುತ್ತೇವೆ. ನಾವು ಅಲ್ಲಿನ ಜನತೆಗೆ ಪ್ರೀತಿ ಮತ್ತು ಶಾಂತಿಯನ್ನು ಮರಳಿ ತರುತ್ತೇವೆ ಎಂದಿದ್ದಾರೆ.
Call us whatever you want, Mr. Modi.We are INDIA.We will help heal Manipur and wipe the tears of every woman and child. We will bring back love and peace for all her people.We will rebuild the idea of India in Manipur.
ಇದನ್ನೂ ಓದಿ:ಶಾಸಕ ಮುನಿರತ್ನಗೆ ಶಾಕ್​ ನೀಡಿದ ಡಿಕೆ ಬ್ರದರ್ಸ್​​; RRನಗರ ಕ್ಷೇತ್ರದಲ್ಲಿ ಆಪರೇಷನ್​ ಹಸ್ತ
ಇತ್ತ ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅನೇಕ ನಾಯಕರು ನಿಯಮ 267ರ ಅಡಿಯಲ್ಲಿ ನೋಟಿಸ್​ ನೀಡುತ್ತಿದ್ದಾರೆ. ನಾವು ಮಣಿಪುರದ ಬಗ್ಗೆ ಚರ್ಚಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಈಸ್ಟ್​ ಇಂಡಿಯಾ ಕಂಪನಿ ಕುರಿತು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಣಿಪುರ ಹಿಂಸಾಚಾರ ಸಂಬಂಧ ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿರುವ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದು, ಇಂಡಿಯಾ ಹೆಸರನ್ನು ಬಳಸಿದ ಮಾತ್ರಕ್ಕೆ ಕೆಲಸ ಆಗುವುದಿಲ್ಲ. ಈಸ್ಟ್​ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನು ಬಳಸಿತ್ತು ಮತ್ತು ಇಂಡಿಯನ್​ ಮುಜಾಹಿದ್ದೀನ್​​​ (ಉಗ್ರ ಸಂಘಟನೆ)ನಲ್ಲೂ ಇಂಡಿಯಾ ಇದೆ ಎಂದು ವಾಗ್ದಾಳಿ ನಡೆಸಿದರು.
#WATCH| LoP Rajya Sabha & Congress President Mallikarjun Kharge in Parliament, says, "So many representatives are giving notices under 267 in Parliament. We are talking about Manipur, but the Prime Minister is talking about East India Company"pic.twitter.com/rCpfn8JHPO
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 12 =
Remember me
