ಉತ್ತರಪ್ರದೇಶ: ಐಎಎಸ್, ಐಪಿಎಸ್ ಅಧಿಕಾರಿಯಾಗಬೇಕಾದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಆದರೆ, ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ. ಆದರೆ ಒಂದು ಗ್ರಾಮದಲ್ಲಿ  51ಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.
ಉತ್ತರ ಪ್ರದೇಶದ ಮಾಧೋಪಟ್ಟಿ ಎಂಬ ಹಳ್ಳಿಯು ಇಲ್ಲಿಯವರೆಗೆ ಸುಮಾರು 51 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಏಕಾಂಗಿಯಾಗಿ ನಿರ್ಮಿಸಿದೆ. ಕೇವಲ 75 ಮನೆಗಳಿರುವ ಈ ಗ್ರಾಮದಲ್ಲಿ 51ಕ್ಕೂ ಹೆಚ್ಚು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿದ್ದಾರೆ.
ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯ ಮಾಧೋಪಟ್ಟಿ ಎಂಬ ಗ್ರಾಮವು ಇದುವರೆಗೆ ಸುಮಾರು 51 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಇದ್ದಾರೆ. ಯುಪಿ ರಾಜಧಾನಿ ಲಕ್ನೋದಿಂದ 300 ಕಿಮೀ ದೂರದಲ್ಲಿರುವ ಮಾಧೋಪಟ್ಟಿ ಗ್ರಾಮವು ದೇಶದಲ್ಲಿ ಅತಿ ಹೆಚ್ಚು ಐಎಎಸ್ ಮತ್ತು ಐಪಿಎಸ್‌ಗಳನ್ನು ಹೊಂದಿರುವ ಪ್ರದೇಶವಾಗಿದೆ. ಇಷ್ಟೆಲ್ಲಾ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಹುಟ್ಟು ಹಾಕಿರುವ ಈ ಪುಟ್ಟ ಗ್ರಾಮ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.  ಇದನ್ನು ಐಎಎಸ್ ಫ್ಯಾಕ್ಟರಿ ಎನ್ನುತ್ತಾರೆ.
ಜೌನ್‌ಪುರ ಜಿಲ್ಲೆಯ ಈ ಗ್ರಾಮದಲ್ಲಿ ಯಾವುದೇ ತರಬೇತಿ ಕೇಂದ್ರಗಳಿಲ್ಲ. ಅದರೂ ಈ ಸಾಧನೆ ಇನ್ನಷ್ಟು ಶ್ಲಾಘನೀಯವಾಗಿದೆ. ಮಧೋಪಟ್ಟಿ ಗ್ರಾಮ ಶಿಕ್ಷಣ ಕೇಂದ್ರವಾಗಿದೆ. ಈ ಗ್ರಾಮದ ಅನೇಕ ಅಧಿಕಾರಿಗಳು ಬಾಹ್ಯಾಕಾಶ, ಪರಮಾಣು ಸಂಶೋಧನೆ, ಕಾನೂನು ಸೇವೆಗಳು ಮತ್ತು ಬ್ಯಾಂಕಿಂಗ್‌ನಲ್ಲಿ ಉನ್ನತ ವೃತ್ತಿಜೀವನದಲ್ಲಿ ನೆಲೆಸಿದ್ದಾರೆ.
ಈ ಗ್ರಾಮವು ನಾಲ್ವರು ಐಎಎಸ್ ಸಹೋದರರಾದ ವಿನಯ್ ಕುಮಾರ್ ಸಿಂಗ್, ಛತ್ರಪಾಲ್ ಸಿಂಗ್, ಅಜಯ್ ಕುಮಾರ್ ಸಿಂಗ್ ಮತ್ತು ಶಶಿಕಾಂತ್ ಸಿಂಗ್ ಅವರಿಗೆ ಹೆಸರುವಾಸಿಯಾಗಿದೆ. ಇತಿಹಾಸದತ್ತ ಹಿಂತಿರುಗಿ ನೋಡಿದಾಗ ಸ್ವಾತಂತ್ರ್ಯ ಹೋರಾಟಗಾರ ಠಾಕೂರ್ ಭಗವತಿ ದಿನ್ ಸಿಂಗ್ ಮತ್ತು ಅವರ ಪತ್ನಿ ಶ್ಯಾಮರತಿ ಸಿಂಗ್ ಅವರು 1917 ರಲ್ಲಿ ಗ್ರಾಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ಶ್ಯಾಮರತಿ ಹೆಣ್ಣು ಮಕ್ಕಳಿಗೆ ಪಾಠ ಹೇಳತೊಡಗಿದರು. ಶೀಘ್ರದಲ್ಲೇ ಅವಳು ಹುಡುಗರಿಗೂ ಕಲಿಸಲು ಪ್ರಾರಂಭಿಸಿದಳು. ವರ್ಷಗಳ ಹಿಂದೆ ಹುಟ್ಟುಹಾಕಿದ ಕಲಿಕೆಯ ಮನೋಭಾವ ಈ ಗ್ರಾಮದ ಜನರ ಜೀವನಶೈಲಿಯಲ್ಲಿ ಸೇರಿಕೊಂಡು ಇಂದಿಗೂ ಮುಂದುವರೆದಿದೆ ಎನ್ನುತ್ತಾರೆ ಗ್ರಾಮಸ್ಥರು.
ಗಬ್ಬು ನಾರುತ್ತಿದ್ದ ಕಸದಲ್ಲಿ ಸಿಕ್ಕ ಮಗು ಈಗ ನಟಿ; ಈಕೆ ಜೀವನವನ್ನೇ ಬದಲಿಸಿದ ಸ್ಟಾರ್​ ನಟ

“ಕಾಟೇರ” ನಿರ್ಮಾಪಕ ರಾಕ್​ಲೈನ್ ಒಡೆತನದ​ ಮಾಲ್​​ಗೆ ಬೀಗ ಜಡಿದ ಬಿಬಿಎಂಪಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:20 − 17 =
Remember me
