ರಾಂಪುರ:ಕರೊನಾ ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಲಾಕ್​​ಡೌನ್​ ಮಾಡಲಾಗಿದೆ. ಈ ಸಂದರ್ಭದಲ್ಲಿ ಆಯಾ ರಾಜ್ಯಸರ್ಕಾರಗಳು ಲಾಕ್​ಡೌನ್​ ನಿಯಮಗಳನ್ನು ಜನರು ಉಲ್ಲಂಘಿಸದಂತೆ ಮುತುವರ್ಜಿ ವಹಿಸುತ್ತಿವೆ. ಹಾಗೇ ಜನರಿಗೂ ಯಾವುದೇ ತೊಂದರೆಯಾಗಬಾರದು ಎಂದು ಕಾಳಜಿವಹಿಸುತ್ತಿವೆ.
ಹಾಗೇ ಉತ್ತರ ಪ್ರದೇಶ ಸರ್ಕಾರ ಕೂಡ ಸಹಾಯವಾಣಿಗಳನ್ನು ತೆರೆಯುವ ಮೂಲಕ ಯಾರಿಗಾದರೂ ತುರ್ತು ನೆರವು ಅಗತ್ಯವಿದ್ದರೆ ಕರೆ ಮಾಡಿ ಎಂದು ರಾಜ್ಯದ ಜನರಿಗೆ ತಿಳಿಸಿದೆ. ಯಾರಿಗಾದರೂ ಅತ್ಯಗತ್ಯವಾಗಿ ಏನಾದರೂ ಸಹಾಯ ಬೇಕಿದ್ದರೆ ಈ ನಂಬರ್​ಗಳಿಗೆ ಕರೆ ಮಾಡಿ ಕೇಳಬಹುದು. ಆಯಾ ಪ್ರದೇಶದ ಜಿಲ್ಲಾಡಳಿತ ಸ್ಪಂದಿಸುತ್ತದೆ.
ಆದರೆ ಈ ಸಹಾಯವಾಣಿ ನಂಬರ್​​ಗಳಿಗೆ ಹಲವು ವಿಚಿತ್ರ ಬೇಡಿಕೆಗಳುಳ್ಳ ಕರೆಗಳು ಬರುತ್ತಿವೆ. ಅದರಲ್ಲಿ ರಾಂಪುರ ಜಿಲ್ಲಾಡಳಿತ ಕಚೇರಿಗೆ ಬಂದ ಫೋನ್​ ಕರೆಯೊಂದು ಸುದ್ದಿ ಮಾಡಿದೆ.
ರಾಂಪುರ ಜಿಲ್ಲಾಡಳಿತದಲ್ಲಿರುವ ಸಹಾಯವಾಣಿ ನಂಬರ್​ಗೆ ಓರ್ವ ಕರೆ ಮಾಡಿ, ಮನೆಗೆ ಪಿಜ್ಜಾ ಕಳಿಸಿ ಎಂದು ಹೇಳಿದ. ಆ ಕರೆಯನ್ನು ಕಟ್​ ಮಾಡಿ ನಿರ್ಲಕ್ಷಿಸಲಾಗಿತ್ತು. ಆದರೆ ಮರುದಿನ ಫೋನ್​ ಮಾಡಿದ ಮತ್ತೋರ್ವ ಯುವಕ, ನಾಲ್ಕು ಬಿಸಿಬಿಸಿ ಸಮೋಸಾ ಮತ್ತು ಚಟ್ನಿ ಬೇಕು. ಮನೆಗೆ ಕಳಿಸಿ ಎಂದು ಬೇಡಿಕೆಯಿಟ್ಟ. ಕಂಟ್ರೋಲ್​ ರೂಂನಲ್ಲಿ ಕರೆ ಸ್ವೀಕರಿಸಿದವರು ಏನೂ ಉತ್ತರಿಸದೆ ಕಟ್​ ಮಾಡಿದರು. ಆದರೆ ಯುವಕ ಬಿಡದೆ ಪದೇಪದೆ ಕರೆ ಮಾಡುತ್ತಿದ್ದ. ನನಗೆ ಸ್ನ್ಯಾಕ್ಸ್​ ತಿನ್ನಬೇಕು ಎಂದು ತುಂಬ ಆಸೆಯಾಗಿದೆ. ದಯವಿಟ್ಟು ನಾಲ್ಕು ಸಮೋಸಾ ಕಳಿಸಿ ಎಂದ ಒಂದೇ ಸಮನೆ ಪೀಡಿಸುತ್ತಿದ್ದ.
ಈತನ ಕರೆಯಿಂದ ಕಿರಿಕಿರಿಗೆ ಒಳಗಾದ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅಲ್ಲಿನ ಸಿಬ್ಬಂದಿಯನ್ನು ಕರೆದು, ಯುವಕನಿಗೆ ನಾಲ್ಕು ಸಮೋಸಾಗಳನ್ನು ಕಳಿಸಲು ಹೇಳಿದರು. ಹಾಗೇ, ಜಿಲ್ಲಾ ಆಡಳಿತದ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಯುವಕನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆಯನ್ನೂ ನೀಡಿದರು.
ಯುವಕನಿದ್ದಲ್ಲಿಗೆ ಸಮೋಸಾ ತೆಗೆದುಕೊಂಡು ಹೋದ ಅಧಿಕಾರಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶವನ್ನೂ ತಿಳಿಸಿದ್ದಾರೆ. ಅದರಂತೆ ಆತ ಮೋರಿಯನ್ನು ಸ್ವಚ್ಛಗೊಳಿಸಿದ್ದಾನೆ.
ಈ ಫೋಟೋವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ತಮಾಷೆ ಮಾಡುವವರಿಗೆ, ಅನಗತ್ಯ ಕರೆ ಮಾಡುವವರಿಗೆ ಇದೇ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)
4 समोसा भिजवा दो… चेतावनी के बाद आखिर भिजवाना ही पड़ा।अनावश्यक मांग कर कंट्रोल रूम को परेशान करने वाले व्यक्ति से सामाजिक कार्य के तहत् नाली सफाई का कार्य कराया गया।pic.twitter.com/88aFRxZpt2
— DM Rampur (@DeoRampur)March 29, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 11 =
Remember me
