ಪ್ರತಾಪ್​ಗಢ:ಉತ್ತರ ಪ್ರದೇಶದ ಪ್ರತಾಪ್​ಗಢ ಜಿಲ್ಲೆಯ ನಿವಾಸಿಯೊಬ್ಬ ಕೋವಿಡ್​ ಪೆರೊಲ್​ ಮೇಲೆ ಜೈಲಿನಿಂದ ಹೊರಬಂದು, ಜೀವಂತವಾಗಿ ಸುಟ್ಟು ಕರಕಲಾಗಿದ್ದಾನೆ.
ಅಂಬಿಕಾ ಪ್ರಸಾದ್​ ಪಟೇಲ್ (22)​ ಮೃತಪಟ್ಟವ. ಸೋಮವಾರ ರಾತ್ರಿ ಈತನ ಮನೆಗೆ ನುಗ್ಗಿದ ನೆರೆಹೊರೆಯವರು ಈತನನ್ನು ಹೊರಗೆ ಎಳತಂದು, ಮರಕ್ಕೆ ಕಟ್ಟಿಹಾಕಿದ್ದರು. ಬಳಿಕ ಮನಸೋಇಚ್ಛೆ ಥಳಿಸಿ, ಈತನಿಗೆ ಬೆಂಕಿ ಹಚ್ಚಿದರು ಎಂದು ಪೊಲೀಸರು ತಿಳಿಸಿದ್ದಾರೆ.ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರ ಎರಡು ವಾಹನಗಳು ಮತ್ತು ಒಂದು ಬೈಕ್​ಗೂ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು ಎನ್ನಲಾಗಿದೆ.
ತನ್ನ ಮನೆಯ ಪಕ್ಕದಲ್ಲಿದ್ದ ಯುವತಿಯನ್ನು ಅಂಬಿಕಾ ಪ್ರಸಾದ್​ ಪಟೇಲ್​ ಪ್ರೀತಿಸುತ್ತಿದ್ದ. ಇದಕ್ಕೆ ಯುವತಿಯ ಮನೆಯವರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಯುವತಿ ಕೆಲತಿಂಗಳ ಹಿಂದೆ ಉತ್ತರ ಪ್ರದೇಶ ಪೊಲೀಸ್​ ಪಡೆಯಲ್ಲಿ ಪೇದೆಯಾಗಿ ನೇಮಕಗೊಂಡಿದ್ದಳು. ತರಬೇತಿ ಬಳಿಕ ಈಕೆ ಕಾನ್ಪುರದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದಳು. ವಿಷಯ ತಿಳಿದ ಅಂಬಿಕಾ ಪ್ರಸಾದ್​ ಪಟೇಲ್​ ಕಾನ್ಪುರಕ್ಕೆ ತೆರಳಿದ್ದ. ಯುವತಿಯೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಬುದ್ಧಿವಾದ ಹೇಳಿದ್ದಕ್ಕೆ ಹೆತ್ತವರನ್ನೇ ಕೊಂದ ಮಗ
ಇವರಿಬ್ಬರೂ ಅನೋನ್ಯವಾಗಿರುವ ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಇದನ್ನು ಅಂಬಿಕಾ ಪ್ರಸಾದ್​ ಪಟೇಲ್​ ಉದ್ದೇಶಪೂರ್ವಕವಾಗಿ ಹರಿಬಿಟ್ಟು, ತಮ್ಮ ಮನೆತನದ ಗೌರವಕ್ಕೆ ಧಕ್ಕೆ ತಂದಿರುವುದಾಗಿ ಯುವತಿಯ ಮನೆಯವರು ಆಕ್ರೋಶಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುವತಿ, ಅಶ್ಲೀಲವಾದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ತನ್ನ ಗೌರವಕ್ಕೆ ಮತ್ತು ಖಾಸಗಿತನಕ್ಕೆ ಧಕ್ಕೆಯನ್ನುಂಟು ಮಾಡಿರುವುದಾಗಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಅಂಬಿಕಾ ಪ್ರಸಾದ್​ ಪಟೇಲ್​ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಆದರೆ, ದೇಶಾದ್ಯಂತ ಕೋವಿಡ್​-19 ಪಿಡುಗು ಹೆಚ್ಚಾದ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಪೆರೊಲ್​ ಮೇಲೆ ಬಿಡುಗಡೆ ಮಾಡುವಂತೆ ಉತ್ತರ ಪ್ರದೇಶ ಸರ್ಕಾರದ ಆದೇಶದ ಮೇರೆಗೆ ಅಂಬಿಕಾ ಪ್ರಸಾದ್​ ಪಟೇಲ್​ ಮೇ 1ರಂದು ಬಿಡುಗಡೆಯಾಗಿದ್ದ.
ಗ್ರಾಮಕ್ಕೆ ಮರಳಿದ್ದ ಈತ ತನ್ನ ಮನೆಯಲ್ಲೇ ಇರುತ್ತಿದ್ದ. ಆದರೆ ಆತನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ ಯುವತಿಯ ಮನೆಯವರು ಸೋಮವಾರ ರಾತ್ರಿ ಈತನನ್ನು ಮನೆಯಿಂದ ಹೊರಗೆಳೆದು ತಂದು ಬೆಂಕಿ ಹಚ್ಚಿ ಸಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ಇದರಲ್ಲಿ ಯುವತಿಯ ತಂದೆ ಕೂಡ ಸೇರಿದ್ದಾರೆ. ಸದ್ಯ ಅಂಬಿಕಾ ಪ್ರಸಾದ್​ ಯಾದವನ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇದಾದ ಬಳಿಕ ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಟೆಲ್​ ಮಾಲೀಕನ ಮಗನೇ ಎಂಜಲು ಮಾಡ್ತಾನೆ.. ಇಲ್ಲಿ ಊಟ ಮಾಡೋಕು ಮುನ್ನ ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
