ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಕೂಗು ಈ ಹಿಂದೆಯೂ ಎದ್ದಿತ್ತು. ಆದರೆ, ಲಡಾಖ್ ಘಟನೆಯ ನಂತರ ಈ ಆಗ್ರಹ ಜೋರು ಪಡೆದಿದ್ದು, ಡ್ರ್ಯಾಗನ್ ರಾಷ್ಟ್ರವನ್ನು ಆರ್ಥಿಕವಾಗಿ ಮಣಿಸುವುದೇ ಉತ್ತಮ ಪರಿಹಾರ ಎಂದು ಜನಸಾಮಾನ್ಯರೂ ಗಟ್ಟಿದನಿಯಲ್ಲಿ ಹೇಳುತ್ತಿದ್ದಾರೆ. ‘ಚೀನಾ ಉತ್ಪನ್ನ ನಿಷೇಧಿಸಿ’ ಎಂದು 2017ರಲ್ಲೇ ರಾಷ್ಟ್ರೀಯ ಮಟ್ಟದ ಆಂದೋಲನ ಆರಂಭಿಸಿದ ಸ್ವದೇಶಿ ಜಾಗರಣ ಮಂಚ್, ಈ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಮುಂದಾಗಿದೆ. ಸರ್ಕಾರಿ ಟೆಂಡರ್​ನಲ್ಲಿ ಪಾಲ್ಗೊಂಡಿರುವ ಚೀನಾದ ಎಲ್ಲ ಕಂಪನಿಗಳನ್ನೂ ನಿಷೇಧಿಸಬೇಕು ಮತ್ತು ಜನರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಬೇಕು ಎಂದು ಸ್ವದೇಶಿ ಜಾಗರಣ ಮಂಚ್​ನ ಸಹ ಸಂಚಾಲಕ ಅಶ್ವಿನಿ ಮಹಾಜನ್ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಐಎಟಿ) ಚೀನಾದ ಸರಕುಗಳನ್ನು ಬಹಿಷ್ಕರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ 450 ವಸ್ತುಗಳನ್ನು ಅದು ಪಟ್ಟಿ ಮಾಡಿದೆ.
ವ್ಯಾಪಾರ ವಹಿವಾಟು
ಭಾರತದಿಂದ ಚೀನಾಕ್ಕೆ ರಫ್ತು14.42 ಬಿಲಿಯನ್ ಡಾಲರ್ಚೀನಾದಿಂದ ಭಾರತಕ್ಕೆ ಆಮದು57.93 ಬಿಲಿಯನ್ ಡಾಲರ್(2019 ಏಪ್ರಿಲ್​ನಿಂದ 2020 ಜನವರಿವರೆಗೆ)
ಪ್ರಸಕ್ತ ಭಾರತ ಚೀನಾದಿಂದ ವಾರ್ಷಿಕವಾಗಿ 5.25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಮೊದಲ ಹಂತವಾಗಿ 2021 ಡಿಸೆಂಬರ್ ಅಂತ್ಯದ ವೇಳೆಗೆ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಇದಕ್ಕಾಗಿ ಜನಸಾಮಾನ್ಯರಲ್ಲೂ ಜಾಗೃತಿ ಮೂಡಿಸಲು ಮುಂದಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಬಳಸಬೇಕಾದ ಸ್ವದೇಶಿ ಉತ್ಪನ್ನಗಳ ಪಟ್ಟಿ ಮತ್ತು ಭಾರತದಲ್ಲಿ ಬಳಸಲಾಗುತ್ತಿರುವ ಚೀನಾ ಉತ್ಪನ್ನಗಳ ಪಟ್ಟಿ ಹಂಚಿಕೊಳ್ಳುತ್ತಿದ್ದಾರೆ. ಹಲವು ವಲಯದ ಗಣ್ಯರು, ಸಾಮಾಜಿಕ ಮುಖಂಡರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಮತ್ತೆ ಎದ್ದ ಜನದನಿ
ಈ ಹಿಂದೆ ಉರಿ ಭಯೋತ್ಪಾದನಾ ದಾಳಿ ನಡೆದಾಗ ಮತ್ತು ಸೈಯದ್ ಮಸೂದ್ ಅಜರ್​ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕ್ರಮಕ್ಕೆ ಚೀನಾ ಅಡ್ಡಗಾಲು ಹಾಕಿದಾಗ ಭಾರತದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ವ್ಯಾಪಕವಾಗಿ ಎದ್ದಿತ್ತು. ಅಷ್ಟು ಮಾತ್ರವಲ್ಲ, ಲಕ್ಷಾಂತರ ಜನರು ಪ್ರಮಾಣ ಮಾಡಿ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದು ವಿಶೇಷವಾಗಿತ್ತು.
ವಾಂಗ್​ಚುಕ್ ಬೆಂಬಲ:ಚೀನಾವನ್ನು ಆರ್ಥಿಕವಾಗಿ ಮಣಿಸುವ ಶಕ್ತಿ ಭಾರತಕ್ಕೆ ಇದೆ. ವಾಣಿಜ್ಯ-ವ್ಯಾಪಾರ ವಿಷಯದಲ್ಲಿ ಸರ್ಕಾರಕ್ಕೆ ಅದರದ್ದೇ ಆದ ಶಿಷ್ಟಾಚಾರಗಳು ಇರುತ್ತವೆ, ಹಲವು ಒಪ್ಪಂದಗಳನ್ನು ಬೇಗನೆ ಮುರಿಯಲು ಸಾಧ್ಯವಿಲ್ಲ ಎಂಬುದೇನೋ ನಿಜವೇ. ಆದರೆ, ಜನರೇ ಮುಂದೆ ಬಂದು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿದರೆ, ಸರ್ಕಾರ ಅನಿವಾರ್ಯವಾಗಿ ತನ್ನ ನೀತಿಗಳನ್ನು ಬದಲಿಸಬೇಕಾಗುತ್ತದೆ. ಭಾರತವು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದರೆ ಆ ರಾಷ್ಟ್ರ ಸಂಕಷ್ಟಕ್ಕೆ ಈಡಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಲಡಾಖ್ ಮೂಲದ ಇಂಜಿನಿಯರ್, ಸಂಶೋಧಕ ಹಾಗೂ ಶಿಕ್ಷಣ ತಜ್ಞರೂ ಆಗಿರುವ ಸೋನಂ ವಾಂಗ್​ಚುಕ್.
ಮೊಬೈಲ್ ಮಾರುಕಟ್ಟೆ ಹಿಡಿತ:ಮೊಬೈಲ್ ಫೋನುಗಳ ಭಾರತದ ಮಾರುಕಟ್ಟೆ ಮೇಲೆ ಚೀನಾ ಹಿಡಿತ ಸಾಧಿಸಿದೆ. ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇಕಡ 65ಕ್ಕಿಂತ ಹೆಚ್ಚು ಪಾಲು ಚೀನಾದ್ದು. ಹೆಚ್ಚು ಮಾರಾಟವಾಗುವ ಮೊಬೈಲ್ ಫೋನ್​ಗಳ ಐದು ಕಂಪನಿಗಳ ಪೈಕಿ ನಾಲ್ಕು ಚೀನಾದ್ದು. 2019ರಲ್ಲಿ ಚೀನಾ ಕಂಪನಿ ಷಿಯೋಮಿಯ ಮಾರುಕಟ್ಟೆ ಪಾಲು ಶೇಕಡ 28.6. ಉಳಿದಂತೆ, ವಿವೋ ಶೇ.15.6, ಒಪ್ಪೋ ಶೇ.10.7 ಮತ್ತು ರಿಯಲ್ ಮೀ ಶೇ.10.6 ಪಾಲು ಹೊಂದಿವೆ.
ಚೀನಾದೊಂದಿಗಿನ ನಮ್ಮ ಸಂಬಂಧಗಳು ಉಗ್ವಿಗ್ನವಾಗಿವೆ. ಆರ್ಥಿಕ ಹಾಗೂ ಭೌಗೋಳಿಕ ರೂಪದಲ್ಲಿ ಚೀನಾದಿಂದ ಭಾರತ ನಿರಂತರ ಅಪಾಯ ಎದುರಿಸುತ್ತಿದೆ. ಅಂದರೆ, ಭಾರತ ಯಾವ ರಾಷ್ಟ್ರದಿಂದ ಹೆಚ್ಚು ಅಪಾಯ ಎದುರಿಸುತ್ತಿದೆಯೋ ಅದೇ ರಾಷ್ಟ್ರದೊಂದಿಗೆ ಹೆಚ್ಚು ವ್ಯಾಪಾರ ಸಂಬಂಧ ಹೊಂದಿದೆ. ಇದರ ಅಗತ್ಯವೇನಿದೆ? ಆ ದೇಶದೊಂದಿಗೆ ಈ ಪರಿಯ ವ್ಯಾಪಾರ ಸಂಬಂಧಗಳು ಏಕೆ ಬೇಕು? ಭಾರತ ತನ್ನ ಅವಶ್ಯಕತೆಯ ಕಚ್ಚಾತೈಲದ ಪೈಕಿ ಶೇಕಡ 26ರಷ್ಟನ್ನು ಬೇರೆ-ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ, ಚೀನಾ ನಮಗೆ ಕಚ್ಚಾತೈಲ ಪೂರೈಕೆ ಮಾಡುವುದಿಲ್ಲ. ಏಕೆಂದರೆ, ಸ್ವತಃ ಚೀನಾ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಿರುವಾಗ ಕಚ್ಚಾತೈಲವನ್ನು ಹೊರತುಪಡಿಸಿದರೆ ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಶೇ.60ರಷ್ಟು ನಷ್ಟ ಚೀನಾವೊಂದರಿಂದಲೇ ಆಗುತ್ತಿದೆ. ಇದನ್ನು ತಡೆಯಬೇಕು. ಹಾಗಾಗಿಯೇ, ನಾವು ಚೀನಾ ಉತ್ಪನ್ನಗಳ ನಿಷೇಧಕ್ಕೆ ಆಗ್ರಹಿಸುತ್ತಿದ್ದೇವೆ.| ಸತೀಶ್
ಸ್ವದೇಶಿ ಜಾಗರಣ ಮಂಚ್ ರಾಷ್ಟ್ರೀಯ ಮುಖಂಡ(2017 ಏಪ್ರಿಲ್​ನಲ್ಲಿ ವಿಜಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದು)
ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಬಹುದೇ?:ಈ ಪ್ರಶ್ನೆಗೆ ತಜ್ಞರು ಸಕಾರಾತ್ಮಕ ಉತ್ತರ ನೀಡಿದ್ದಾರೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳು ಭಾರತದಲ್ಲಿಯೂ ತಯಾರಾಗುತ್ತವೆ. ಅಂಥ ಉತ್ಪನ್ನಗಳಿಗೆ ಚೀನಾವನ್ನೇ ಅವಲಂಬಿಸಬೇಕೆಂಬ ಅನಿವಾರ್ಯತೆ ಇಲ್ಲ. ವಿಶ್ವದಲ್ಲೇ ಅತ್ಯಂತ ಅಗ್ಗದ ದರದಲ್ಲಿ ಮಂಗಳಯಾನ ನಡೆಸಿರುವ ದೇಶ ಭಾರತ. ಅಂತರಿಕ್ಷಕ್ಕೆ ಒಮ್ಮೆಲೆ ಭಾರತ 104 ಉಪಗ್ರಹಗಳನ್ನು ಉಡಾವಣೆ ಮಾಡಿದೆ. ರಷ್ಯಾಕ್ಕೂ ಈ ಸಾಧನೆ ಸಾಧ್ಯವಾಗಿಲ್ಲ. ಚೀನಾ ಅಗ್ಗದ ದರದ ಆಮಿಷ ತೋರಿಸಿ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆದರೆ, ಕಡಿಮೆ ಬೆಲೆಯ ಹಾಗೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲು ಸಾಧ್ಯವಿದೆ. ಇದಕ್ಕಾಗಿ ಉದ್ಯಮಗಳಿಗೆ, ವ್ಯಾಪಾರಿಗಳಿಗೆ ‘ಯೂ ಡು ಮೋರ್’ ಎಂದು ಪ್ರೋತ್ಸಾಹಿಸಬೇಕಿದೆ.
ನವೋದ್ಯಮಗಳಲ್ಲಿ ಹೂಡಿಕೆ: ಕಳೆದ ಐದಾರು ವರ್ಷಗಳಲ್ಲಿ ಚೀನಾ ಭಾರತದ ಪ್ರಮುಖ ಸ್ಟಾರ್ಟಪ್​ಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿ, ಮಾರುಕಟ್ಟೆ ಮೇಲೆ ಹಿಡಿತವನ್ನು ಬಲಪಡಿಸಿಕೊಂಡಿದೆ. ಭಾರತದಲ್ಲಿ -ಠಿ; 7,600 ಕೋಟಿಗೂ ಅಧಿಕ ಮೌಲ್ಯ ಹೊಂದಿರುವ ಪ್ರಮುಖ 30 ಸ್ಟಾರ್ಟಪ್​ಗಳ ಪೈಕಿ 18ರಲ್ಲಿ ಚೀನಾ ಪ್ರಮುಖ ಪಾಲು ಹೊಂದಿದೆ. ಮೂಲಗಳ ಪ್ರಕಾರ, ಚೀನಾದ ಕಂಪನಿಗಳು 2014ರಲ್ಲಿ ಭಾರತದ ಸ್ಟಾರ್ಟಪ್​ಗಳಲ್ಲಿ 51 ಮಿಲಿಯನ್ ಡಾಲರ್​ನಷ್ಟು ಹೂಡಿಕೆ ಮಾಡಿದ್ದವು. 2019ರಲ್ಲಿ ಈ ಪ್ರಮಾಣ 1,230 ಮಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಅಂದರೆ ಕಳೆದ 2014 ರಿಂದ 2019ರ ಮಧ್ಯೆ ಚೀನಾ ಭಾರತದಲ್ಲಿ ಒಟ್ಟು 5.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಭಾರತದಲ್ಲಿ ಹೂಡಿಕೆ ಮಾಡಿದ ಚೀನಿ ಕಂಪನಿಗಳಲ್ಲಿ ಅಲಿಬಾಬಾ, ಟೆನ್​ಶೆಟ್ ಮತ್ತು ಟಿಆರ್ ಕ್ಯಾಪಿಟಲ್ ಸೇರಿ ದೊಡ್ಡ ಕಂಪನಿಗಳು ಸೇರಿವೆ.
ಬುಧವಾರ ಟ್ರೇಂಡ್ ಆದ ಹ್ಯಾಷ್​ಟ್ಯಾಗ್​ಗಳು:#Boycott ChineseProducts #BoycottChinese #Boycott China #ChinaGetOut campaign trend again #IndiaChinaFaceOff #IndiaChinaBorder #WorldWar3
ಹೆಚ್ಚುತ್ತಿದೆ ಸ್ವದೇಶಿ ಬದ್ಧತೆ
ಸ್ವದೇಶಿ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟಕ್ಕೆ ದೇಶದಲ್ಲಿ ಮುಂಚೆಗಿಂತಲೂ ಹೆಚ್ಚು ಪ್ರೋತ್ಸಾಹ ಸಿಗುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಸ್ವದೇಶಿ ಜಾಗರಣ ಮಂಚ್ ಸ್ವದೇಶಿ ವಸ್ತು ಭಂಡಾರಗಳನ್ನು ತೆರೆದಿದೆ. ಹಿಂದೆಲ್ಲ, ಸ್ವದೇಶಿ ವಸ್ತುಗಳು ಗುಣಮಟ್ಟದ್ದಲ್ಲ ಎಂಬ ಭ್ರಮೆ ಇತ್ತು. ಆದರೀಗ, ಬಹುರಾಷ್ಟ್ರೀಯ ಕಂಪನಿಗಳಿಗೂ ಸೆಡ್ಡು ಹೊಡೆದು ಸ್ವದೇಶಿ ಕಂಪನಿಗಳು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿವೆ. ಜನರು ಮತ್ತೆ ಸ್ವದೇಶಿ ವಸ್ತುಗಳೆಡೆ ಆಕರ್ಷಿತರಾಗಿದ್ದಾರೆ.
ಇದನ್ನೂ ಓದಿ:1,000 ರೂಪಾಯಿ ಬಾಡಿಗೆಗೆ ಬಡವರಿಗೆ ಮನೆ – ಮೋದಿ ಸರ್ಕಾರದ ಯೋಜನೆ
ಮಹಾನಗರಗಳಲ್ಲಿ ಪ್ರತಿಭಟನೆ:ಲಡಾಖ್​ನಲ್ಲಿ ಚೀನಾ ನಡೆಸಿದ ಅಪ್ರಚೋದಿತ ದಾಳಿಯನ್ನು ಖಂಡಿಸಿ ಮತ್ತು ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಆಗ್ರಹಿಸಿ ಬುಧವಾರ ದೇಶದ ಹಲವು ಮಹಾನಗರಗಳಲ್ಲಿ ಪ್ರತಿಭಟನೆ ನಡೆಯಿತು. ದೆಹಲಿ, ಮುಂಬೈ, ಬೆಂಗಳೂರು, ಕಾನ್ಪುರ, ಇಂದೋರ್ ಸೇರಿ ಹಲವೆಡೆ ಜನರು ವೈಯಕ್ತಿಕ ಅಂತರವನ್ನು ಕಾಯ್ದುಕೊಂಡೇ ಚೀನಾದ ವಿರುದ್ಧ ಪ್ರತಿಭಟನೆ ನಡೆಸಿದರು. ಷಿ ಜಿನ್​ಪಿಂಗ್ ಪ್ರತಿಕೃತಿ ಮತ್ತು ಚೀನಾ ಉತ್ಪನ್ನಗಳನ್ನು ದಹಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಪಾಠ ಕಲಿಯದ ಡ್ರ್ಯಾಗನ್:ಲಡಾಖ್ ಗಡಿಯಲ್ಲಿ ಉದ್ವಿಗ್ನತೆ ತಲೆದೋರುತ್ತಿದ್ದಂತೆ ಭಾರತೀಯರು ಡ್ರಾ್ಯಗನ್ ರಾಷ್ಟ್ರದ ವಿರುದ್ಧ ಆಕ್ರೋಶ ತೋರಿದರು. ‘ರಿಮೂವ್ ಚೀನಾ ಆಪ್ಸ್’ ಮೂಲಕ ಚೀನಾದ ಆಪ್​ಗಳನ್ನು ಅನ್ ಇನ್​ಸ್ಟಾಲ್ ಮಾಡಿದರು. ಎರಡೇ ದಿನದಲ್ಲಿ ಟಿಕ್​ಟಾಕ್ ಆಪ್​ನ ರೇಂಟಿಂಗ್ ತಗ್ಗಿಸಿದರು. ಇಷ್ಟೆಲ್ಲ ಆದರೂ ಎಚ್ಚೆತ್ತುಕೊಳ್ಳದ ಚೀನಾ, ಪ್ರಸಕ್ತ ಭಾರತದ ವಿರುದ್ಧ ದಾಳಿ ನಡೆಸುವ ಮೂಲಕ ಭಾರಿ ಪ್ರಮಾದವನ್ನು ಎಸಗಿದೆ.
ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲೆ ಬಡ್ಡಿ ವಿಧಿಸಿದರೆ ಉದ್ದೇಶ ಈಡೇರುತ್ತದೆಯೇ?: ಸುಪ್ರೀಂ ಕೋರ್ಟ್​ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
