ಬ್ರೆಜಿಲ್:ಮದ್ಯದಂಗಡಿಗಳಿಗೆ ದೇವರ ಹೆಸರು ಇಟ್ಟಿರುವುದನ್ನು ಅನೇಕ ಕಡೆಗಳಲ್ಲಿ ನೋಡಬಹುದಾಗಿದೆ. ಅದರಲ್ಲಿಯೂ ಭಾರತದಲ್ಲಿನ ಅನೇಕ ಬಾರ್‌ಗಳಿಗೆ ದೇವರ ಹೆಸರೇ ಇರುತ್ತದೆ.
ಇದು ಭಕ್ತರಿಗೆ ನೋವು ಉಂಟುಮಾಡುವ ವಿಷಯವಾಗಿದ್ದರೂ, ಏನೂ ಮಾಡಲಾಗದೇ ಸುಮ್ಮನೇ ಇರಬೇಕಾದ ಪರಿಸ್ಥಿತಿ ಇದೆ. ಆದರೆ ಬಿಯರ್‌ ಒಂದಕ್ಕೆ ಬ್ರಹ್ಮ ಎಂದು ಹೆಸರು ಇಟ್ಟಿರುವುದು ಮಾತ್ರ ಇದೀಗ ಅನೇಕ ಸಮುದಾಯಗಳ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿರುದ್ಧ ಬ್ರೆಜಿಲ್‌ನಲ್ಲಿ ಭಾರಿ ಪ್ರತಿಭಟನೆಯೂ ಶುರುವಾಗಿದೆ.
ಅಷ್ಟಕ್ಕೂ ಬ್ರಹ್ಮ ಬಿಯರ್‌ ಹೊಸ ಕಂಪನಿಯೇನಲ್ಲ. 1800ರಿಂದಲೂ ಇದು ಲಭ್ಯವಿದೆ. ಇಷ್ಟು ವರ್ಷಗಳು ಬ್ರಹ್ಮ ಬಿಯರ್‌ ಹೆಸರಿನಲ್ಲಿಯೇ ತನ್ನ ವ್ಯವಹಾರ ನಡೆಸುತ್ತಿದೆ. ಇದೀಗ ವಿಶ್ವದ ಅತೀ ದೊಡ್ಡ ಬಿಯರ್ ಉತ್ಪಾದನಾ ಕಂಪನಿ ಎಂದೂ ಹೆಸರು ಪಡೆದಿದೆ.
ಇದನ್ನೂ ಓದಿ:ವಿಕಾಸ್‌ ಎಂದು ಮದ್ವೆ ಆದ್ಳು: ಗಂಡ ನೋಡಿದ್ರೆ ಜೇಮ್ಸ್‌ಬಾಂಡ್‌ ಆದ!
ಆದರೆ ಇದೀಗ ಬ್ರಹ್ಮ ಹೆಸರಿನ ವಿರುದ್ಧ ಕ್ರೈಸ್ತ, ಯೆಹೂದಿ, ಬೌದ್ಧ, ಹಿಂದೂ ಮತ್ತು ಜೈನ ಧರ್ಮದ ಪ್ರತಿನಿಧಿಗಳು ದೊಡ್ಡ ಹೋರಾಟ ಶುರುಮಾಡಿದ್ದಾರೆ. ಇವರೆಲ್ಲವೂ ಬ್ರಹ್ಮ ಬಿಯರ್‌ ತಯಾರಿಸುತ್ತಿರುವ ಬೆಲ್ಜಿಯಂ ಮೂಲದ ಅನ್‌ಹೆಸರ್- ಬುಷ್ ಇನ್ ಬಿವ್ ಕಂಪನಿಗೆ ಭಾರಿ ಒತ್ತಡ ಹೇರಿದ್ದು, ಇದರ ಹೆಸರನ್ನು ತೆಗೆಯಬೇಕು. ಇದರಿಂದ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎನ್ನುತ್ತಿದ್ದಾರೆ.
1888ರಲ್ಲಿ ಬ್ರೆಜಿಲ್‌ನ ಬಿಯರ್ ತಯಾರಿಕೆ ಕಂಪನಿಯಾಗಿದ್ದ ಕಂಪಾನಿಯ ಸೆರ್ವೆಜರಿಯಾ ಬ್ರಹ್ಮ, ಬ್ರಹ್ಮ ಬಿಯರ್ ತಯಾರಿಸಿತ್ತು. ಅದೇ ಕಂಪನಿಯನ್ನು ಎಬಿ ಇನ್‌ಬೆವ್ ಖರೀದಿಸಿತ್ತು. ಅತೀ ದೊಡ್ಡ ಮದ್ಯ ತಯಾರಿಕಾ ಕಂಪನಿಯಾದ ಎಬಿ ಇನ್‌ಬಿವ್, ಬಡ್ವೈಸರ್, ಬಡ್ ಲೈಟ್, ಕರೊನಾ ಮತ್ತು ಸ್ಟೆಲ್ಲಾ ಅರ್ಟೊಯಿಸ್ ಹೆಸರೂ ಸೇರಿದಂತೆ 500ಕ್ಕೂ ಅಧಿಕ ಬ್ರ್ಯಂಡ್‌ ಹೊಂದಿದೆ.
ಬ್ರಹ್ಮ ಹೆಸರಲ್ಲಿ ಲಾರ್ಜರ್, ಡಬಲ್ ಮಾಲ್ಟ್, ನೈಂಟಿ ಬಿಯರ್‌, ವೀಟ್ ಬಿಯರ್ ಮತ್ತು ಚಾಕಲೇಟ್ ಸ್ಟಾಟ್ ಮೊದಲಾದ ವಿವಿಧ ರೀತಿಯ ಬಿಯರ್‌ಗಳು ಲಭ್ಯ ಇವೆ. ಬ್ರಹ್ಮನ ಹೆಸರಿನಲ್ಲಿ ಈ ರೀತಿಯ ವ್ಯವಹಾರ ಸರಿಯಲ್ಲ ಎನ್ನುವುದು ಇವರ ವಾದ. ಶತಮಾನಗಳವರೆಗೆ ಹಿಂದೂ ಸಹೋದರ – ಸಹೋದರಿಯರ ನಂಬಿಕೆಯನ್ನು ಇದು ಘಾಸಿಗೊಳಿಸಿದೆ ಎಂದು ಧಾರ್ಮಿಕ ಒಕ್ಕೂಟದ ವಕ್ತಾರ ರಾಜನ್ ಝಡ್ ಹೇಳಿದ್ದಾರೆ.(ಏಜೆನ್ಸೀಸ್‌)
ಹಿಂದೂ ಯುವಕನ ಗಂಟಲು ಸೀಳಿ ನದಿಗೆ ಎಸೆದ ಪಾಕ್‌ ಪಾಪಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 2 =
Remember me
