ಬೆಂಗಳೂರು: ಅಪ್ರತಿಮ ಗಾಯಕ, ಗಾನ ಗಾರುಡಿಗ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯ ಬೆನ್ನಿಗೇ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿ ಗೌರವಿಸಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ. ಆ ನಿಟ್ಟಿನಲ್ಲಿ ಅಭಿಯಾನವೊಂದು ಸೋಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.
#bharatratnaforspb ಎಂಬ ಹ್ಯಾಷ್​​ಟ್ಯಾಗ್​ನಲ್ಲಿ ಶನಿವಾರವೇ ಅಭಿಯಾನ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ನೆಟ್ಟಿಗರು ಹಾಗೂ ಎಸ್​ಪಿಬಿ ಅವರ ಅಭಿಮಾನಿಗಳು ಅವರಿಗೆ ಭಾರತ ರತ್ನ ಸಿಗಲೇಬೇಕು ಎಂದು ವಿಧವಿಧವಾಗಿ ಆಗ್ರಹಿಸಿದ್ದಾರೆ. ಒಬ್ಬ ನೆಟ್ಟಿಗರಂತೂ “35 ಸಾವಿರ ರನ್​ಗಳಿಗೆ ಭಾರತ ರತ್ನ ಸಿಕ್ಕಿದ್ದರೆ 45 ಸಾವಿರ ಹಾಡುಗಳಿಗೆ ಏಕೆ ಸಿಗಬಾರದು?” ಎನ್ನುವ ಮೂಲಕ ಎಸ್​​ಪಿಬಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ.
If 35k runs deserved Bharat Ratna why not 45k song?#bharatratnaforspb
— Jaya Sekhar (@jayysss_05)September 26, 2020

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬುದಾಗಿ ಪುದುಚೆರಿಯ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಆಗ್ರಹಿಸಿದ್ದಾರೆ. ಮತ್ತೊಂದೆಡೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಕೂಡ ಎಸ್​ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ಲಭಿಸಬೇಕು ಎಂದು ಆಗ್ರಹಿಸಿದ್ದಾರೆ.
Singer SP Balasubrahmanyam's demise is a great disaster for the art world. I appeal to Prime Minister Narendra Modi to award him the Bharat Ratna: Puducherry Chief Minister V Narayanasamy (file pic) (26.09.20)pic.twitter.com/uDgRqKtR0W
— ANI (@ANI)September 26, 2020

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 4 =
Remember me
