ಕೇಂದ್ರ ಸರ್ಕಾರ ನಿನ್ನೆ ಟಿಕ್​ಟಾಕ್​, ಕ್ಯಾಮ್​ಸ್ಕ್ಯಾನರ್​ ಸೇರಿ ಚೀನಾ ಮೂಲದ 59 ಆ್ಯಪ್​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಚೀನಾ ಮೂಲದ ಇನ್​ಸ್ಟಿಗ್​ ಕಂಪನಿಯ ಉತ್ಪನ್ನ ಕ್ಯಾಮ್​ಸ್ಕ್ಯಾನರ್​. ಜಾಗತಿಕವಾಗಿ 10 ಕೋಟಿ ಡೌನ್​ಲೋಡ್​ ಆಗಿರುವ ಈ ಆ್ಯಪ್​, 2020ರ ಏಪ್ರಿಲ್​ ಒಂದೇ ತಿಂಗಳಲ್ಲಿ 80 ಲಕ್ಷ ಡೌನ್​ಲೋಡ್ ಆಗಿತ್ತು. ನಿಷೇಧಕ್ಕೆ ಒಳಗಾಗಿರುವ ಈ ಜನಪ್ರಿಯ ಆ್ಯಪ್​ಗೆ ಪರ್ಯಾಯವಾಗಿ ನಾವು ಯಾವ್ಯಾವ ಆ್ಯಪ್​ಗಳನ್ನು ಬಳಸಬಹುದು. ಇಲ್ಲಿವೆ ಕೆಲವು ಆಯ್ದ ಆ್ಯಪ್​ಗಳು. ಕ್ಯಾಮ್​ಸ್ಕ್ಯಾನರ್ ರೀತಿಯಲ್ಲೇ ಈ ಆ್ಯಪ್​ಗಳಲ್ಲೂ ಪಿಡಿಎಫ್​ ಮತ್ತು ಇತರೆ ಫಾರ್ಮ್ಯಾಟ್​ಗಳಿಗೆ ಕನ್​ವರ್ಟ್​ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್​ ಸ್ಟೋರ್​ಗಳಲ್ಲಿ ಇವು ಲಭ್ಯ ಇವೆ.
1.ಅಡೋಬ್​ ಸ್ಕ್ಯಾನ್​ (ಅಡೋಬ್​)-ಅಮೆರಿಕ ಮೂಲದ ಅಡೋಬ್ ಕಂಪನಿಯ ಆ್ಯಪ್ ಇದು. ಫೋಟೊ ಎಡಿಟಿಂಗ್​, ವಿಡಿಯೋ ಎಡಿಟಿಂಗ್ ತಂತ್ರಾಂಶಗಳಿಗೆ ಫೇಮಸ್ ಆಗಿರುವ ಕಂಪನಿ ಇದು.ಆಂಡ್ರಾಯ್ಡ್​ ಬಳಕೆದಾರರಿಗೆ ಡೌನ್​ಲೋಡ್ ಲಿಂಕ್​|ಐಫೋನ್​, ಐಪ್ಯಾಡ್​ಗಳಿಗೆ ಡೌನ್​ಲೋಡ್ ಲಿಂಕ್2.ಮೈಕ್ರೋಸಾಫ್ಟ್​ ಆಫೀಸ್ ಲೆನ್ಸ್​-ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್​ನ ಪಿಡಿಎಫ್​ ಸ್ಕ್ಯಾನರ್ ಆ್ಯಪ್​ ಇದು. ಮೈಕ್ರೋಸಾಫ್ಟ್​ನ ಇತರೆ ಆ್ಯಪ್​ಗಳ ಜತೆಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ.ಆಂಡ್ರಾಯ್ಡ್​ ಬಳಕೆದಾರರಿಗೆ ಡೌನ್​ಲೋಡ್ ಲಿಂಕ್​|ಐಫೋನ್​, ಐಪ್ಯಾಡ್​ಗಳಿಗೆ ಡೌನ್​ಲೋಡ್ ಲಿಂಕ್3.ಫೋಟೋಸ್ಕ್ಯಾನ್– ಇದು ಗೂಗಲ್​​ನ ಆ್ಯಪ್. ಗೂಗಲ್ ಡ್ರೈವ್​ ಮತ್ತು ಆಂಡ್ರಾಯ್ಡ್ ಫೋನ್​ಗಳಲ್ಲಿ ಇದು ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಗೂಗಲ್​ ಫೋಟೋಸ್​ ಜತೆಗೆ ಚೆನ್ನಾಗಿ ಹೊಂದಿಕೊಳ್ಳುವ ಕಾರಣ, ಅಲ್ಲಿಂದ ನಿಮ್ಮ ಡಾಕ್ಯುಮೆಂಟ್​ನ ಇಮೇಜ್​ಗಳನ್ನ ಯಾವುದೇ ಸಮಯದಲ್ಲೂ ಪಡೆಯಬಹುದಾಗಿದೆ.ಆಂಡ್ರಾಯ್ಡ್​ ಬಳಕೆದಾರರಿಗೆ ಡೌನ್​ಲೋಡ್ ಲಿಂಕ್​|ಐಫೋನ್​, ಐಪ್ಯಾಡ್​ಗಳಿಗೆ ಡೌನ್​ಲೋಡ್ ಲಿಂಕ್4.ಸ್ಕ್ಯಾನರ್​ ಆ್ಯಪ್​– ಅಮೆರಿಕದ ಬಿಪಿಮೊಬೈಲ್ ಕಂಪನಿಯ ಉತ್ಪನ್ನ ಇದು. ಈ ಕಂಪನಿಯೇನೂ ಜನಪ್ರಿಯವಾದುದಲ್ಲ. ಈ ಆ್ಯಪ್​ನಲ್ಲಿ ಇಲೆಕ್ಟ್ರಾನಿಕ್ ಸಿಗ್ನೇಚರ್ ಫೀಚರ್​, ಪಿನ್ ಪ್ರೊಟೆಕ್ಷನ್ ಫೀಚರ್​ ಗಮನಸೆಳೆಯುವಂತಿದೆ. ಇದು ಬೇಸಿಕ್ ಡಾಕ್ಯುಮೆಂಟ್ ಎಡಿಟರ್ ಆಗಿ ಉತ್ತಮ ಫಲಿತಾಂಶ ನೀಡುತ್ತದೆ.ಆಂಡ್ರಾಯ್ಡ್​ ಬಳಕೆದಾರರಿಗೆ ಡೌನ್​ಲೋಡ್ ಲಿಂಕ್​|ಐಫೋನ್​, ಐಪ್ಯಾಡ್​ಗಳಿಗೆ ಡೌನ್​ಲೋಡ್ ಲಿಂಕ್5.ಟ್ಯಾಪ್​ಸ್ಕ್ಯಾನರ್​– ಇಸ್ರೇಲ್​ನ ಸ್ಮಾರ್ಟ್ ಮಾರ್ಕೆಟಿಂಗ್ ಪ್ರೈವೇಟ್​ ಲಿಮಿಟೆಡ್​ನ ಉತ್ಪನ್ನ ಇದು. ಗೂಗಲ್ ಡ್ರೈವ್​, ಡ್ರಾಪ್​ಬಾಕ್ಸ್​ ಮತ್ತು ಇತರೆ ಕ್ಲೌಡ್ ಸೇವೆಗಳ ಜತೆಗೆ ಹೊಂದಿಕೊಳ್ಳುತ್ತದೆ. ಎಲ್ಲದಕ್ಕೂ ಹೆಚ್ಚಾಗಿ ಇದರಲ್ಲಿ ಕ್ಯೂಆರ್ ಸ್ಕ್ಯಾನರ್​ ಫೀಚರ್​ ಸೇರಿಕೊಂಡಿದೆ.ಆಂಡ್ರಾಯ್ಡ್​ ಬಳಕೆದಾರರಿಗೆ ಡೌನ್​ಲೋಡ್ ಲಿಂಕ್​|ಐಫೋನ್​, ಐಪ್ಯಾಡ್​ಗಳಿಗೆ ಡೌನ್​ಲೋಡ್ ಲಿಂಕ್
ಪೆಟ್ರೋಲ್​, ಡೀಸೆಲ್ ಬೆಲೆ ಜನಸಾಮಾನ್ಯರ ಮೇಲೇನೂ ಪರಿಣಾಮ ಬೀರಿಲ್ಲ: ಪೆಟ್ರೋಲಿಯಂ ಸಚಿವರ ವಿವರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
