ವಾಷಿಂಗ್ಟನ್:ಭಾರತದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾರತ ಸರ್ಕಾರ ಎಷ್ಟೇ ಮುಂಜಾಗರೂಕತೆ ತೆಗೆದುಕೊಂಡೂ ಸೋಂಕು ಹರಡುತ್ತಲೇ ಇದೆ.
ಈ ರೀತಿ ಸೋಂಕು ಹರಡಲು ಈಗಾಗಲೇ ಕೆಲವು ಕಾರಣಗಳನ್ನು ಪತ್ತೆ ಮಾಡಲಾಗಿದೆ. ಆದರೆ ಸದ್ಯ ನಡೆಯುತ್ತಿರುವ ಘಟನೆಗಳಿಂದ ಖುದ್ದು ಆರೋಗ್ಯ ಸಿಬ್ಬಂದಿಯೇ ಬೇಸ್ತು ಬಿದ್ದಿದ್ದು, ವೈರಸ್​ ನಿಯಂತ್ರಣ ಮಾಡಲಾಗದೇ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ತಲೆದೋರಿದೆ.
ಆದರೆ ಅದೇ ಇನ್ನೊಂದೆಡೆ, ಭಾರತದಲ್ಲಿ ವೈರಸ್​ ಈ ಪರಿ ಹರಡಲು ಇನ್ನೊಂದು ಕಾರಣವನ್ನು ಕಂಡು ಹಿಡಿದಿದ್ದಾರೆ ಅಮೆರಿಕದ ಯಾಲೆ ವೈದ್ಯಕೀಯ ಕಾಲೇಜಿನ ಸಂಶೋಧಕರು. ಅದೇ ಕೆಂಪು ದೀಪದ ಪ್ರದೇಶ (ರೆಡ್​ ಲೈಟ್​ ಏರಿಯಾ)
ಇದನ್ನೂ ಓದಿ:ಮೈಮೇಲೆ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ತಲೆಗೊಂದು ನೂಡಲ್​ ಕಟ್ಟಿಕೊಳ್ಳಿ ಎಂದಿದೆ ಹೋಟೆಲ್​ಗಳು!
ಹೌದು. ವೇಶ್ಯಾವಾಟಿಕೆ ಅಧಿಕವಾಗಿರುವ ಕೆಲವೊಂದು ಪ್ರದೇಶಗಳಿಂದಲೇ ಶೇ. 72ರಷ್ಟು ಸೋಂಕು ಹರಡುತ್ತಿದೆ ಎನ್ನುವುದು ಇವರ ಅಭಿಮತ. ಇದನ್ನು ಸಂಪೂರ್ಣವಾಗಿ ಮುಚ್ಚಿದರೆ ಶೇ.72ರಷ್ಟು ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ, ದೆಹಲಿ, ಪುಣೆ ಮತ್ತು ನಾಗ್ಪುರದಲ್ಲಿನ ರೆಡ್​ಲೈಟ್​ ಏರಿಯಾದಿಂದಲೇ ಅತಿ ಹೆಚ್ಚು ಸೋಂಕು ಹರಡುತ್ತಿದೆ. ಇವುಗಳನ್ನು ಮುಚ್ಚಿದರೆ ಒಂದು ದಿನದಲ್ಲಿ ಹರಡುವಷ್ಟು ಸೋಂಕನ್ನು ಕನಿಷ್ಠ 17 ದಿನಗಳವರೆಗೆ ಮುಂದೂಡಲು ಸಾಧ್ಯವಾಗಿದೆ ಎಂದಿದ್ದಾರೆ ಅವರು.
ರೆಡ್ ಲೈಟ್ ಏರಿಯಾಗಳಿಗೆ ಜನ ಸಂಪರ್ಕವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಅಗತ್ಯವಿದೆ. ಜಪಾನ್‌ನಲ್ಲಿ ಇಂತಹ ಪ್ರದೇಶದ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಲಿಲ್ಲ. ಹೀಗಾಗಿ ಅಂತಹ ಪ್ರದೇಶಗಳಿರುವ ನಗರಗಳಲ್ಲಿ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದವು.
ಇದೇ ಕಾರಣಕ್ಕಾಗಿ ಆಸ್ಟ್ರೇಲಿಯಾದಲ್ಲಿ ವೇಶ್ಯಾಗೃಹಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿ ಆದೇಶ ಹೊರಡಿಸಲಾಗಿದೆ. ಜರ್ಮನಿ, ನೆದರ್ಲೆಂಡ್​ಗಳಲ್ಲಿಯೂ ವೇಶ್ಯಾಗೃಹಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಹೇಳಿವೆ. ಭಾರತದಲ್ಲಿಯೂ ಈ ರೀತಿ ಸಂಪೂರ್ಣವಾಗಿ ಬಂದ್​ ಮಾಡುವತ್ತ ಕ್ರಮ ತೆಗೆದುಕೊಂಡರೆ ಖಂಡಿತವಾಗಿಯೂ ವೈರಸ್​ ತಗ್ಗಿಸಬಹುದು ಎಂದಿದ್ದಾರೆ ಯಾಲೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಜೆಫೆರಿ ಟೌನ್ಸೆಂಡ್.
ಇದನ್ನೂ ಓದಿ:VIDEO: ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಆಗ ಅಮಾನತು ಶಿಕ್ಷೆ; ಈಗ ಕಟ್ಟಿ, ಥಳಿಸಿ, ಎಳೆದಾಡಿದ ಪೊಲೀಸರು- ವೀಡಿಯೋ ವೈರಲ್​
ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ ದಾಖಲೆಗಳ ಪ್ರಕಾರ, ದೇಶದಲ್ಲಿ 6.37 ಲಕ್ಷಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತರಿದ್ದು, ಪ್ರತಿದಿನ ಐದು ಲಕ್ಷಕ್ಕೂ ಹೆಚ್ಚು ಗ್ರಾಹಕರು ರೆಡ್​ಲೈಟ್​ ಏರಿಯಾಗಳಿಗೆ ಭೇಟಿ ನೀಡುತ್ತಿದ್ದಾರೆ.
ಲೈಂಗಿಕ ಕ್ರಿಯೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿರುವ ಕಾರಣ ಸೋಂಕು ಕ್ಷಿಪ್ರವಾಗಿ ಹರಡಲಿದೆ.ಅದರಿಂದ ಸಮುದಾಯಕ್ಕೂ ಕ್ಷಿಪ್ರವಾಗಿ ಹರಡುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.ಲಾಕ್​ಡೌನ್​ ಅವಧಿ ಮುಗಿದ ಮೇಲೆಯೂ ಈ ಸ್ಥಳದ ಮೇಲಿನ ನಿರ್ಬಂಧವನ್ನು ಮುಂದುವರೆಸಬೇಕು. ಇಲ್ಲದಿದ್ದರೆ ಸಾವಿನ ಪ್ರಮಾಣ ಹೆಚ್ಚುತ್ತಲೇ ಸಾಗುತ್ತದೆ ಎನ್ನುವುದು ತಜ್ಱರ ಅಭಿಮತ.
ಇದನ್ನೂ ಓದಿ:ಅಮ್ಮನ ಬಳಿ ಹೋಗುವಂತಿಲ್ಲ, ಅಪ್ಪ ಯಾರು ಗೊತ್ತೇ ಇಲ್ಲ- ತಾಯಿಯ ಸ್ಪರ್ಶಕ್ಕೆ ಕಾದಿವೆ ಸಾವಿರಾರು ಕಂದಮ್ಮಗಳು…
ಭಾರತದ ‘ಕೆಂಪು ದೀಪ’ ಪ್ರದೇಶಗಳಿರುವ ಐದು ನಗರಗಳು ಕೆಂಪು ವಲಯದಲ್ಲಿ ಇರುವುದನ್ನು ಉದಾಹರಿಸಿರುವ ಸಂಶೋಧಕರು, ಆ ನಗರಗಳಲ್ಲಿ ಸೋಂಕು ಕ್ಷಿಪ್ರವಾಗಿ ಹರಡಲು ಈ ಪ್ರದೇಶಗಳ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಲೈಂಗಿಕ ಚಟುವಟಿಕೆಗಳ ತಾಣದ ಮೇಲಿನ ನಿರ್ಬಂಧ ಮುಂದುವರಿದರೆ ಸೋಂಕಿನ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟಲು ನಾಗ್ಪುರದಲ್ಲಿ 30 ದಿನ, ಪುಣೆಯಲ್ಲಿ 29 ದಿನ, ನವದೆಹಲಿಯಲ್ಲಿ 17 ದಿನ, ಮುಂಬೈನಲ್ಲಿ 12 ದಿನ ಹಾಗೂ ಕೋಲ್ಕತ್ತದಲ್ಲಿ 36 ದಿನಗಳಷ್ಟು ವಿಳಂಬವಾಗಲಿದೆ ಎಂದು ವಿವರಿಸಿದ್ದಾರೆ(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
