ನವದೆಹಲಿ :ಮೊದಲನೇ ಡೋಸ್​ ಕೋವಿಶೀಲ್ಡ್​ ಕರೊನಾ ಲಸಿಕೆ ಪಡೆದವರು ಎರಡನೇ ಡೋಸೂ ಕೋವಿಶೀಲ್ಡೇ ಪಡೆಯಬೇಕು; ಕೋವಾಕ್ಸಿನ್ ಪಡೆದವರು ಕೋವಾಕ್ಸಿನ್ನೇ ಪಡೆಯಬೇಕು ಎಂಬುದು ಈವರೆಗೆ ಭಾರತದಲ್ಲಿ ಪಾಲಿಸಿಕೊಂಡು ಬರುತ್ತಿರುವ ನಿಯಮವಾಗಿದೆ. ಇನ್ನು ಮುಂದೆಯೂ ಇದೇ ರೀತಿ ನಡೆಯಬೇಕಾ ? ಅಥವಾ ಜನರು ಬೇರೆ ಬೇರೆ ಲಸಿಕೆಗಳ ಡೋಸ್​ಗಳನ್ನು ಪಡೆಯಬಹುದಾ ? ಅದರ ಉಪಯೋಗ ಅಥವಾ ಅಪಾಯ ಏನು ? ಎಂಬುದನ್ನು ಇದೀಗ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಸಿದ್ಧತೆ ನಡೆದಿದೆ.
ಒಬ್ಬ ವ್ಯಕ್ತಿಗೆ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್ ಡೋಸ್​ಗಳನ್ನು ಮಿಕ್ಸ್​ ಮಾಡಬಹುದೇ ಎಂಬ ಈ ಅಧ್ಯಯನ ಮತ್ತು ಸಂಬಂಧಿತ ಕ್ಲಿನಿಕಲ್​ ಟ್ರಯಲ್​ಗಳನ್ನು ವೆಲ್ಲೋರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ನಡೆಸಲಿದೆ. ಈ ಪ್ರಕ್ರಿಯೆಗೆ ಡ್ರಗ್ಸ್​ ಕಂಟ್ರೋಲರ್ ಜನರಲ್ ಆಫ್​ ಇಂಡಿಯ ಅವರ ಅನುಮತಿ ದೊರಕಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್​ ತಿಳಿಸಿದ್ದಾರೆ.
ಇದನ್ನೂ ಓದಿ:ಐಸಿಸ್ ನಂಟು ಉಳ್ಳಾಲ ಮಾಜಿ ಶಾಸಕರ ಪುತ್ರನ ಮನೆಗೆ ಬಜರಂಗದಳ ಮುತ್ತಿಗೆ
ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಆರೋಗ್ಯ ಸಿಬ್ಬಂದಿ ಅಚಾತುರ್ಯದಿಂದಾಗಿ, ಮೊದಲನೇ ಡೋಸ್​ ಕೋವಿಶೀಲ್ಡ್​ ಕೊಟ್ಟಿದ್ದ 18 ಜನರಿಗೆ ಎರಡನೇ ಡೋಸ್​​ನಲ್ಲಿ ಕೋವಾಕ್ಸಿನ್ ಲಸಿಕೆ ನೀಡಿದ ಪ್ರಸಂಗ ನಡೆದಿತ್ತು. ಅವರ ಮೇಲೆ ಐಸಿಎಂಆರ್​ ನಡೆಸಿದ ಅಧ್ಯಯನದಲ್ಲಿ ಡೋಸ್​ಗಳನ್ನು ಮಿಕ್ಸ್​ ಮಾಡಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಬದಲಿಗೆ ಸುರಕ್ಷೆ ಮತ್ತು ರೋಗನಿರೋಧಕತೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ಮೂಡಿತ್ತು. ತದನಂತರ ಈ ವಿಚಾರದಲ್ಲಿ ಸಮಗ್ರವಾದ ಅಧ್ಯಯನ ನಡೆಸಬೇಕೆಂದು ಸೆಂಟ್ರಲ್ ಡ್ರಗ್ಸ್​ ಸ್ಟ್ಯಾಂಡರ್ಡ್​ ಕಂಟ್ರೋಲ್​ ಆರ್ಗನೈಸೇಷನ್ ಶಿಫಾರಸ್ಸು ಮಾಡಿತ್ತು.(ಏಜೆನ್ಸೀಸ್)
CODE RED! ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ವರದಿ ನೀಡಿದೆ, ಮಾನವರಿಗೆ ಎಚ್ಚರಿಕೆಯ ಕರೆ!

ಹೃದಯದ ಆರೋಗ್ಯಕ್ಕೆ, ರಕ್ತದ ಪ್ರಕೃತಿ ಸುಧಾರಿಸಲು ಮಾರ್ಜಾಲಾಸನ ಮಾಡಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 + nine =
Remember me
