ಜಿ-20 ಶೃಂಗಸಭೆಗೆ ಭಾರತಕ್ಕೆ ಆಗಮಿಸಿದ್ದ ಕೆನಾಡ ಪ್ರಧಾನಿ ಜಸ್ಟಿನ್ ಟ್ರುಡೊ ಸಭೆ ಮುಗಿಸಿ ಅವರು ಭಾನುವಾರ ಸಂಜೆ ಕೆನಾಡಕ್ಕೆ ಹೋಗಬೇಕಿತ್ತು. ಆದರೆ ತಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಭಾರತದಲ್ಲಿ ಉಳಿಯುವಂತಾಗಿತ್ತು.
ಜಸ್ಟಿನ್ ಟ್ರುಡೊ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ CC-150 ಪೋಲಾರಿಸ್ ವಿಮಾನ ಲಂಡನ್​​​ನಲ್ಲಿ ಇಳಿದಿದೆ. ಹಅಗಾಗಿ ಜಸ್ಟಿನ್ ಟ್ರುಡೊ ಮತ್ತೆ ಭಾರತದಲ್ಲಿ ಉಳಿದಿದ್ದು, ಭಾರತದಿಂದ ತೆರಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎರಡು ದಿನಗಳು ಶೃಂಗಸಭೆಯನ್ನು ಮುಗಿಸಿ ಅವರು ಭಾನುವಾರ ಸಂಜೆ ಕೆನಡಾಕ್ಕೆ ಹೋಗಬೇಕಿತ್ತು. ಜಸ್ಟಿನ್​​ ಅವರನ್ನು ಕರೆದುಕೊಂಡು ಹೋಗಲು ಬಂದ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಕೆನಡಾಕ್ಕೆ ಹೋಗಲು ಸಾಧ್ಯವಾಗದೇ ಭಾರತದಲ್ಲಿಯೇ ಉಳಿದಿದ್ದರು. ತದನಂತರ ಇದೀಗ ಸೋಮವಾರ ರಾತ್ರಿ 10 ಗಂಟೆಗೆ ಕೆನಾಡದಿಂದ ಎರಡನೇ ವಿಮಾನ ಭಾರತವನ್ನು ತಲುಪುವ ನಿರೀಕ್ಷೆಯಿತ್ತು. ಆದರೆ ಅದನ್ನು ಕೂಡ ಲಂಡನ್​​ನಲ್ಲಿ ಇಳಿಸಲಾಗಿದೆ.
2016ರಲ್ಲಿ, ಈ ವಿಮಾನವು ಬೆಲ್ಜಿಯಂಗೆ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಒಟ್ಟಾವಾಗೆ ಮರಳಿತು. ಆ ವಿಮಾನವು 16 ತಿಂಗಳುಗಳ ಕಾಲವರೆಗೆ ಯಾವುದೇ ಪ್ರಯಾಣವನ್ನು ಮಾಡಿಲ್ಲ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಕೆನಾಡ ವಿರೋಧ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಅವರು ಟೀಕಿಸಿದ್ದು, ಇದು ಅವರು ಅನುಭವಿಸಬೇಕಾದ ಸಂಕಷ್ಟ, ಇನ್ನು ಈ ಒತ್ತಡವನ್ನು ದೇಶದ ಜನರ ಮೇಲೆ ಹಾಕುತ್ತಾರೆ ಎಂದು ಹೇಳಿದ್ದಾರೆ.
ವಿಮಾನದ ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆಯಿಂದ ಮತ್ತೆ ಭಾರತದಲ್ಲಿ ಉಳಿಯಬೇಕಾಗಿದೆ. ಅಲ್ಲಿಯವರೆಗೆ ನವದೆಹಲಿಯ ಲಲಿತ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.
ಈ ವಿಮಾನ ಲಂಡನ್​​ನಲ್ಲಿ​​ ತುರ್ತು ಲ್ಯಾಂಡ್​​ ಆಗಿದೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. ಆದರೆ ಈ ವಿಮಾನವನ್ನು ಲಂಡನ್​​ನಲ್ಲಿ ಇಳಿಸಲು ಕಾರಣ ಏನು? ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 2 =
Remember me
