ನವದೆಹಲಿ:ರಾಷ್ಟ್ರದಲ್ಲಿ ಕರೊನಾ ವೈರಸ್​ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 19 ಮತ್ತು 31ರ ನಡುವೆ ನಡೆಯಬೇಕಿದ್ದ 10 ಮತ್ತು 12ನೇ ತರಗತಿಯ ಎಲ್ಲ ಪರೀಕ್ಷೆಗಳನ್ನು ಐಸಿಎಸ್​ಇ ಮತ್ತು ಐಎಸ್​ಸಿ ಮುಂದಕ್ಕೆ ಹಾಕಿವೆ.
ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಬೋಧಕ ಸಮುದಾಯದ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನು ಮುಂದೂಡಲಾಯಿತೆಂದು ಐಸಿಎಸ್​ಇ ಮುಖ್ಯಸ್ಥ ಗ್ಯಾರಿ ಅರಾಥೂನ್ ಹೇಳಿದ್ದಾರೆ. ಎಲ್ಲ ಪರೀಕ್ಷೆಗಳನ್ನು ಮುಂದೂಡುವಂತೆ ಶಾಲೆ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತಿತರ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ.
ರೈಲು ಪ್ರಯಾಣಿಕರಸಂಖ್ಯೆ ಇಳಿಮುಖ
ಪಶ್ಚಿಮ ರೈಲ್ವೆಯ ಉಪನಗರ ರೈಲುಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಒಂದೇ ದಿನ ಎಂಟು ಲಕ್ಷ ಇಳಿಕೆಯಾಗಿದೆ ಎಂದು ಪಶ್ಚಿಮ ರೈಲ್ವೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಉಪನಗರ ರೈಲು ಸೇವೆ ಮುಂಬೈ ಜನಜೀವನದ ಜೀವನಾಡಿಯಾಗಿದ್ದು ಪ್ರತಿದಿನ ಸುಮಾರು 80 ಲಕ್ಷ ಜನರು ಅವುಗಳಲ್ಲಿ ಸಂಚರಿಸುತ್ತಾರೆ. ಭಾರತೀಯ ರೈಲ್ವೆ 84 ರೈಲುಗಳ ಕಾರ್ಯಾಚರಣೆ ರದ್ದುಗೊಳಿಸಿತು. ಇದರಿಂದಾಗಿ ಕರೊನಾ ಭೀತಿಯಿಂದ ರದ್ದಾದ ರೈಲುಗಳ ಒಟ್ಟು ಸಂಖ್ಯೆ 155ಕ್ಕೆ ಏರಿದೆ. ಟಿಕೆಟ್ ರದ್ದು ಪಡಿಸಿದ್ದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಪೂರ್ಣ ಹಣ ವಾಪಸ್ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಪತಿ ಬಂದ್
ತಿರುಪತಿಯ ಪ್ರಖ್ಯಾತ ವೆಂಕಟೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ನಿರ್ಧರಿಸಿದೆ. ಜನರಿಗೆ ಇಲ್ಲಿಗೆ ಬರದಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮುನ್ನೆಚ್ಚರಿಕೆಯಾಗಿ ನಾವೇ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಮಂಡಳಿಯ ತುರ್ತು ಸಭೆ ನಂತರ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹೇಳಿದರು. ದೇವಸ್ಥಾನದಲ್ಲಿ ಅರ್ಚಕರು ದೈನಂದಿನ ಪೂಜಾವಿಧಿಗಳನ್ನು ನೆರವೇರಿಸುತ್ತಾರೆ.
ಸಿಎಎ ಹೋರಾಟಗಾರನಿಗೆ ಸೋಂಕು ದೃಢ
ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರುದ್ಧ ದೆಹಲಿಯ ಜಹಾಂಗಿಪುರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಒಬ್ಬನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಈತನ ಸೋದರಿ ಮಾರ್ಚ್ 11ರಂದು ಸೌದಿ ಅರೇಬಿಯಾದಿಂದ ಮರಳಿದ್ದು ಆಕೆಗೆ ಸೋಂಕು ಇರುವುದು ದೃಢಪಡುವುದಕ್ಕೂ ಮುನ್ನವೇ ಮಾರ್ಚ 13ರಂದು ಆತ ಸೋದರಿಯನ್ನು ಭೇಟಿಯಾಗಿದ್ದ. ನಂತರ ಪ್ರತಿಭಟನೆ ಸ್ಥಳಕ್ಕೆ ತೆರಳಿದ್ದ. ಆತನನ್ನು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ಸೇರಿಸಲಾಗಿದೆ. ಸೋದರಿ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ವುಹಾನ್ ದಾಖಲೆ
ಚೀನಾದಲ್ಲಿ ಗುರುವಾರ ಯಾವುದೇ ಕರೊನಾ ವೈರಸ್ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಇದು ಸಾಂಕ್ರಾಮಿಕ ರೋಗದ ವಿರುದ್ಧ ಚೀನಾ ನಡೆಸಿರುವ ಸಮರಕ್ಕೆ ಮಹತ್ವದ ವಿಜಯವೆಂದು ಪರಿಗಣಿಸಲಾಗಿದೆ. ವುಹಾನ್​ನಲ್ಲಿ ಗುರುವಾರ ಯಾವುದೇ ದೃಢಪಟ್ಟ ಪ್ರಕರಣ ವರದಿಯಾಗಿಲ್ಲ. ವುಹಾನ್ ಅತ್ಯಂತ ಹೆಚ್ಚು ಸೋಂಕಿತ ಪ್ರದೇಶವಾಗಿದೆ. ಚೀನಾದಲ್ಲಿ ಸೋಂಕಿತರ ಸಂಖ್ಯೆ 81,000. ಮಾರ್ಚ್ 10ರಂದು ವುಹಾನ್​ಗೆ ಭೇಟಿ ನೀಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ರೋಗವನ್ನು ‘ಮೂಲಭೂತವಾಗಿ ನಿಯಂತ್ರಿಸಲಾಗಿದೆ’ ಎಂದು ಆಗ ಘೋಷಿಸಿದ್ದರು. ವುಹಾನ್ ಹೊರತು ಪಡಿಸಿ ಪ್ರಾಂತ್ಯದ ಯಾವುದೇ ಭಾಗಕ್ಕೆ ಪ್ರಯಾಣಿಸಬಹುದು ಎಂದು ಹುಬೇ ಪ್ರಾಂತ್ಯದ ಸರ್ಕಾರ ಅದೇ ದಿನ ಪ್ರಕಟಿಸಿತ್ತು.
ಸಹಜತೆಗೆ ಮರಳುತ್ತಿರುವ ಚೀನಾ ಜನಜೀವನ
ಕರೊನಾದಿಂದಾಗಿ ಚೀನಾದಲ್ಲಿ ಉಂಟಾಗಿದ್ದ ಪರಿಸ್ಥಿತಿ ದೂರವಾಗಿ ಕ್ರಮೇಣ ಸಹಜ ಸ್ಥಿತಿ ಮರಳುತ್ತಿದೆ. ಜನರು ಕೆಲಸಗಳಿಗೆ ಹೋಗುತ್ತಿದ್ದಾರೆ, ಫ್ಯಾಕ್ಟರಿಗಳೂ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಪುನಾರಂಭ ಮಾಡಿವೆ. ಆದರೆ, ವಿದೇಶಗಳಿಂದ ಚೀನಾಕ್ಕೆ ಬರುವವರ ವಿದೇಶಿಗರ ಸಂಖ್ಯೆ ಜಾಸ್ತಿಯಾಗಿರುವುದರಿಂದ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ.
ಗಲ್ಲಿಗೇರಲು ಸುಲಭಕ್ಕೆ ಸಿದ್ಧರಾಗುತ್ತಿಲ್ಲ ನಿರ್ಭಯಾ ಅತ್ಯಾಚಾರ ಅಪರಾಧಿಗಳು; ಈಗ ದೆಹಲಿ ಹೈಕೋರ್ಟ್​ಗೆ ಮತ್ತೊಂದು ಅರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
