ಮೈಸೂರು: ಚೀನಾದ ನಿಂಗ್ಬೊ ವಿಶ್ವವಿದ್ಯಾಲಯದೊಂದಿಗೆ ಕ್ಯಾನ್ಸರ್‌ಗೆ ಔಷಧ ಕಂಡು ಹಿಡಿಯುವ ಸಂಶೋಧನಾ ಕಾರ್ಯವು ಕರೊನಾ ವೈರಸ್ ಹಾವಳಿ ಹಾಗೂ ಗಡಿ ವಿವಾದದಿಂದ ಸ್ಥಗಿತಗೊಂಡಿದೆ.
ವಿಜ್ಞಾನಿ, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ಕ್ಯಾನ್ಸರ್ ಔಷಧ ಸಂಶೋಧನೆ ಕುರಿತು ಚೀನಾ ಜತೆ ಒಡಂಬಡಿಕೆ ಸಾಕಷ್ಟು ಹಿಂದೆಯೇ ಆಗಿದೆ. ಒಂದೊಮ್ಮೆ, ಚೀನಾದೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದರೆ ಚೀನಾದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಿಂದ ಹಿಂದೆ ಸರಿಯುತ್ತೇವೆ. ಸಂಶೋಧನೆಗಿಂತ ದೇಶ ಮುಖ್ಯ. ದೇಶದ ನಿಲುವಿಗೆ ವಿರುದ್ಧವಾಗಿ ಎಂದಿಗೂ ಹೋಗುವುದಿಲ್ಲ. ಆದರೆ ಸರ್ಕಾರ ಈ ವಿಚಾರವಾಗಿ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ’’ ಎಂದು ತಿಳಿಸಿದರು.
ಕರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ವಿಶ್ವದ ಹಲವು ರಾಷ್ಟ್ರಗಳು ಶ್ರಮಿಸುತ್ತಿವೆ. ಕೆಲ ಪ್ರತಿಷ್ಠಿತ ಸಂಸ್ಥೆಗಳು ಲಸಿಕೆಯ ಟ್ರಯಲ್‌ನ ಮೂರನೇ ಹಂತದಲ್ಲಿವೆ. ಎರಡು ತಿಂಗಳ ಒಳಗೆ ಲಸಿಕೆ ದೊರೆಯುವುದು ನಿಶ್ಚಿತ. ಯಾವುದೇ ವೈರಸ್‌ಗೆ 2 ವರ್ಷಗಳ ಒಳಗೆ ಲಸಿಕೆ ಕಂಡು ಹಿಡಿದಿರುವ ಉದಾಹರಣೆ ಇಲ್ಲ. ಕರೊನಾಗೆ ಒಂದು ವರ್ಷದೊಳಗೆಯೇ ಲಸಿಕೆ ಬರುವ ವಿಶ್ವಾಸ ಇದೆ. ಪ್ರತಿಯೊಬ್ಬರಿಗೂ ಇದು ತಲಾ 2,000 ರೂ. ಒಳಗೆ ದೊರೆಯುವ ಸಾಧ್ಯತೆ ಹೆಚ್ಚಿದೆ ಎಂದು ರಂಗಪ್ಪ ಹೇಳಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − twelve =
Remember me
