ನವದೆಹಲಿ:ಆಯ್ಕೆಯಾದ ಅಭ್ಯರ್ಥಿಗಳ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ರಾಜಕೀಯ ಪಕ್ಷಗಳು ವೆಬ್​ಸೈಟ್​ಗಳಲ್ಲಿ ಪ್ರಕಟಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪಂಚರಾಜ್ಯ ಚುನಾವಣೆಗೆ ದಿನಾಂಕಗಳು ನಿಗದಿಯಾಗಿರುವುದರಿಂದ ಈ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಎಂದು ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಕೋರಿದ್ದರು. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸುಪ್ರೀಂಕೋರ್ಟ್​ನ ಎರಡು ತೀರ್ಪಗಳನ್ನು ಯಾವುದೇ ಆತಂಕವಿಲ್ಲದೆ ಉಲ್ಲಂಘಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ರಾಜಕೀಯ ಪಕ್ಷಗಳ ವೆಬ್​ಸೈಟ್​ಗಳಲ್ಲಿ ಅಭ್ಯರ್ಥಿಗಳ ಕ್ರಿಮಿನಲ್ ಇತಿಹಾಸ ಬಹಿರಂಗಪಡಿಸಬೇಕು. ಪ್ರತಿಯೊಬ್ಬ ರಾಜಕಾರಣಿಯೂ ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿವರಗಳನ್ನು ಹಂಚಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿಯ 25 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ:ಉತ್ತರ ಪ್ರದೇಶ ಚುನಾವಣೆಗೆ ಕಳೆದ ವಾರ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ತನ್ನ 25 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಬಿಜೆಪಿ ಘೊಷಿಸಿದೆ. ಆದರೆ ಅವರೆಲ್ಲರಿಗೂ ಟಿಕೆಟ್ ನೀಡಿರುವುದನ್ನು ಪಕ್ಷ ಸಮರ್ಥಿಸಿಕೊಂಡಿದೆ. ಸಿರಾಥು ಕ್ಷೇತ್ರದ ಅಭ್ಯರ್ಥಿ, ಡಿಸಿಎಂ ಕೇಶವ್ ಪ್ರಸಾದ್ ಮೌರ್ಯರ ಮೇಲೆಯೇ ನಾಲ್ಕು ಕ್ರಿಮಿನಲ್ ಮೊಕದ್ದಮೆಗಳಿವೆ. ‘‘ಮೌರ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಜನಪ್ರಿಯರು. ಅವರ ಹೆಸರನ್ನು ಪಕ್ಷದ ಜಿಲ್ಲಾ ಘಟಕವು ಅರ್ಹತೆ, ಸಾಮಾಜಿಕ ಕಾರ್ಯ ಮತ್ತು ರಾಜ್ಯದ ಜನರ ಉನ್ನತಿಗಾಗಿ ಮಾಡಿರುವ ಕೆಲಸಗಳನ್ನು ಆಧರಿಸಿ ಶಿಫಾರಸು ಮಾಡಿದೆ ಎಂದು ಬಿಜೆಪಿ ಹೇಳಿದೆ. ಥಾಣಾ ಭವನದ ಅಭ್ಯರ್ಥಿ, ಸಚಿವ ಸುರೇಶ್ ರಾಣಾ ವಿರುದ್ಧ ಮೂರು ಪ್ರಕರಣಗಳಿವೆ. ಪ್ರಸ್ತುತ ಸರ್ಕಾರದಲ್ಲಿ ಕಬ್ಬು ಅಭಿವೃದ್ಧಿ ಸಚಿವರಾಗಿದ್ದಾರೆ ಮತ್ತು ರೈತರಿಗೆ ಕಬ್ಬಿನ ಬಾಕಿ ಬಿಡುಗಡೆಗಾಗಿ ಅತ್ಯುತ್ತಮ ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ ಎಂದು ಬಿಜೆಪಿ ಹೇಳಿದೆ. ಫತೇಪುರ್ ಸಿರಿಯ ಬಿಜೆಪಿ ಅಭ್ಯರ್ಥಿ ಬಾಬು ಲಾಲ್ ವಿರುದ್ಧ ಏಳು ಪ್ರಕರಣಗಳಿವೆ. ರಾಜಕೀಯ ದ್ವೇಷದಿಂದಾಗಿ ಅವರ ಮೇಲೆ ಕೇಸುಗಳನ್ನು ದಾಖಲು ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪರ ಅಲೆಯಿದೆ. ಈಗಾಗಲೆ ಕೆಲ ಮಾಧ್ಯಮಗಳು ಸಮೀಕ್ಷೆ ಮಾಡಿವೆ. ಪಕ್ಷದಿಂದ ಆಂತರಿಕ ಸರ್ವೆ ಸಹ ಮಾಡಲಾಗಿದೆ. ಇದರ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಅತ್ಯಂತ ಹೆಚ್ಚು ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಯಾವುದೇ ರಾಜ್ಯ ಇರಲಿ, ಅಲ್ಲಿಯ ಕೆಲವರು ಪಕ್ಷ ಬಿಟ್ಟು ಹೋದರೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ.
|ಪ್ರಲ್ಹಾದ ಜೋಶಿಕೇಂದ್ರ ಸಚಿವ
ಪಂಜಾಬ್ ವಿಧಾನಸಭೆ ಚುನಾವಣೆಗೆ ಸಂಸದ ಭಗವಂತ್ ಸಿಂಗ್ ಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಆಮ್ ಆದ್ಮಿ ಪಕ್ಷ ಘೊಷಿಸಿದೆ. ಸಿಎಂ ಯಾರಾಗಬೇಕು ಎಂದು ಜನರೇ ತೀರ್ವನಿಸಲಿ ಎಂದು ಪಕ್ಷದ ನಾಯಕ ಅರವಿಂದ ಕೇಜ್ರಿಬಾಲ್ ಟೆಲಿ ವೋಟಿಂಗ್ ಮಾಡುವಂತೆ ವಿನಂತಿಸಿಕೊಂಡಿದ್ದರು. ಶೇ.93ಕ್ಕಿಂತಲೂ ಹೆಚ್ಚು ಮತಗಳು ಮಾನ್ ಅವರ ಪರ ಬಂದಿವೆ. ಸುಮಾರು 21 ಲಕ್ಷ ಮಂದಿ ಈ ವೋಟಿಂಗ್ ಪ್ರಕ್ರಿಯೆಲ್ಲಿ ಭಾಗಿಯಾಗಿದ್ದರು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಶೇ.3ರಷ್ಟು ಮಂದಿ ಕಾಂಗ್ರೆಸ್​ನ ನವಜೋತ್ ಸಿಂಗ್ ಸಿಧು ಅವರನ್ನು ಆಪ್​ನ ಸಿಎಂ ಅಭ್ಯರ್ಥಿ ಮಾಡಬೇಕು ಎಂದೂ ವೋಟ್ ಮಾಡಿದ್ದರು! ಗೋವಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ, ಈಗ ಕಾಂಗ್ರೆಸ್ ಸೇರಿರುವ ಮೈಕಲ್ ಲೋಬೋ ಕಲಂಗೂಟ್ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಉತ್ತರ ಗೋವಾದಲ್ಲಿ ಮೈಕಲ್ ಭಾರೀ ಪ್ರಭಾವ ಹೊಂದಿರುವುದು ಕಾಂಗ್ರೆಸ್​ಗೆ ನೆರವಾಗುವ ನಿರೀಕ್ಷೆಯಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಚನ್ನಿ ಸಂಬಂಧಿ ಭೂಪಿಂದರ್ ಸಿಂಗ್ ಸಹಿತ ಅನೇಕ ಉದ್ಯಮಿಗಳ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, 6 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಲೂಧಿಯಾನ, ಮೊಹಾಲಿ ಮತ್ತು ಪಠಾಣಕೋಟ್​ಗಳಲ್ಲಿ ಸುಮಾರು 10 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ. ಮೊಹಾಲಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಪಂಜಾಬ್ ಪೊಲೀಸರು 2018ರಲ್ಲಿ ದಾಖಲಿಸಿದ್ದ ಕೇಸ್ ಸಂಬಂಧ ಈ ದಾಳಿಗಳು ನಡೆದಿವೆ. ಅಸೆಂಬ್ಲಿ ಚುನಾವಣೆ ಘೋಷಿತವಾಗಿರುವ ಹಿನ್ನೆಲೆಯಲ್ಲಿ ನಡೆದ ಈ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಸಿಎಂ ಚನ್ನಿ ಮತ್ತು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟೀಕಿಸಿದ್ದಾರೆ.
ವೆಚ್ಚ ನಮೂದಿಸಲು ಹೊಸ ಕಾಲಂ:ಡಿಜಿಟಲ್ ಮೂಲಕ ನಡೆಸುವ ಪ್ರಚಾರ ಕಾರ್ಯದ ಖರ್ಚುವೆಚ್ಚ ವನ್ನು ಅಭ್ಯರ್ಥಿಗಳು ನಮೂದಿಸಲು ಅನುಕೂಲ ವಾಗುವಂತೆ ಚುನಾವಣಾ ವೆಚ್ಚದ ರಿಟರ್ನ್ಸ್ ನಮೂನೆಯಲ್ಲಿ ಹೆಚ್ಚುವರಿ ಕಾಲಂ ಅನ್ನು ಆಯೋಗ ಅಡಕ ಮಾಡಿದೆ.
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

ಅಮ್ಮ ಕೋವಿಡ್​​ನಿಂದ ಮೃತಪಟ್ಟರೂ ನೋಡಲು ಬರದ ಮಗಳು-ಅಳಿಯ; ಕೊನೆಗೆ ಅಂತ್ಯಸಂಸ್ಕಾರದ್ದೇ ದೊಡ್ಡ ಕಥೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
