ಮುಂಬೈ:ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರ ಜೊತೆ ನೀರಿನ ಅಭಾವವು ಜನರನ್ನು ಪ್ರಮುಖವಾಗಿ ಕಾಡುತ್ತಿದೆ. ಕಳೆದ ವರ್ಷ ಸರಿಯಾದ ಮಳೆಯಾಗದ ಕಾರಣ ದೇಶದ ಹಲವೆಡೆ ಡ್ಯಾಂ ಹಾಗೂ ಕೆರೆಗಳು ಬತ್ತಿ ಹೋಗಿದ್ದವು. ಇನ್ನು ವಾಣಿಜ್ಯ ನಗರಿ ಮುಂಬೈ ಕೂಡ ಬಿಸಿಲಿನ ಹೊಡೆತ ಹಾಗಗೂ ನೀರಿನ ಅಭಾವಕ್ಕೆ ತುತ್ತಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಇಟಾಲಿಯನ್​ ಡಿಜೆ ಓಲಿ ಎಸ್ಸೆ ಬಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಟಲಿ ಮೂಲದ ಡಿಜೆ ಓಲಿ ಎಸ್ಸೆ ಕಳೆದ ಕೆಲ ವರ್ಷಗಳಿಂದ ಮುಂಬೈನ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ. ಅವರು ವಾಸಿಸುತ್ತಿರುವ ಪ್ರದೇಶದಲ್ಲಿ ನೀರಿನ ಪೈಪ್​ ಹೊಡೆದಿದ್ದು, ಈ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಓಲಿ ಬಿಎಂಸಿ ಅಧಿಕಾರಿಗಳ ನಡೆಗೆ ಕಿಡಿಕಾರಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
To whomever it might concern in@mybmcafter 2 weeks we STILL don't have water in the house. I see water on the streets from the pipes that are damaged, but not in our houses. The situation is horrible.pic.twitter.com/KDzMyZTk9m
ಇದನ್ನೂ ಓದಿ:VIDEO| ಮಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ತಾಯಿ; ವಿಡಿಯೋ ಮಾಡುತ್ತ ಕುಳಿತ ತಂದೆ
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಎರಡು ವಾರಗಳ ಹಿಂದೆ ಲಕ್ಕಿ ಜಂಕ್ಷನ್​ ಬಳಿ ಕಾಮಗಾರಿ ಹೆಸರಿನಲ್ಲಿ ಯಾರೋ ಪೈಪನ್ನು ಹೊಡೆದು ಹಾಕಿದ್ದಾರೆ. ಅಂದಿನಿಂದ ಪ್ರತಿದಿನ ನೀರು ಪೋಲಾಗುತ್ತಿದ್ದು, ಈ ಬಗ್ಗೆ ಪ್ರತಿನಿತ್ಯ ಬಿಎಂಸಿ ಅಧಿಕಾರಿಗಳಿಗೆ ಕರೆ ಮಾಡಿ ಸರಿ ಪಡಿಸುವಂತೆ ಕೇಳಿಕೊಳ್ಳುತ್ತಿದ್ದೇವೆ. ಪ್ರತಿಬಾರಿಯೂ ಕರೆ ಮಾಡಿದಾಗ ಬಂದು ಸರಿಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ ಹೊರತು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ನಾನು ವಾಸಿಸುವ ಅಪಾರ್ಟ್​ಮೆಂಟ್​ನಲ್ಲಿ ಪರಿಸ್ಥಿತಿ ಭಯಾನಕವಾಗಿದ್ದು, ಎರಡು ವಾರಗಳಿಂದ ಟಾಯ್ಲೆಟ್​ಗೆ ಹೋದರು ಫ್ಲಶ್​ ಮಾಡಲು ನೀರಿಲ್ಲದಂತಾಗಿದೆ. ನಾನು ಸರ್ಕಾರಕ್ಕೆ ಲಕ್ಷಗಟ್ಟಲೇ ತೆರಿಗೆ ಪಾವತಿಸುತ್ತಿರುವುದರಿಂದ ಆದ್ದರಿಂದ ದಯವಿಟ್ಟು ಸುಮ್ಮನೆ ನಮಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಮೊದಲು ಬಂದು ಹೊಡೆದಿರುವ ಪೈಪ್​ ರಿಪೇರಿ ಮಾಡಿ ಎಂದು ಇಟಾಲಿಯನ್​ ಡಿಜೆ ಓಲಿ ಎಸ್ಸೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 18 =
Remember me
