ನವದೆಹಲಿ :ಇಂದಿರಾ ಗಾಂಧಿ ಸರ್ಕಾರವು 1975 ರ ಜೂನ್​ 25 ಕ್ಕೆ ಭಾರತದಲ್ಲಿ 21 ತಿಂಗಳ ಅವಧಿಯ ತುರ್ತು ಪರಿಸ್ಥಿತಿ ವಿಧಿಸಿದ ಕುರಿತಾಗಿ ಇಂದು ಟ್ವೀಟ್​ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, “ಇದು ಕಾಂಗ್ರೆಸ್​ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸಕಿಹಾಕಿದ ರೀತಿ” ಎಂದಿದ್ದಾರೆ.
“ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಯಾವಾಗಲೂ ಮರೆಯಲಾಗುವುದಿಲ್ಲ. 1975 ರಿಂದ 1977 ರವರೆಗಿನ ಅವಧಿಯು ಹಲವು ಸಂಸ್ಥೆಗಳ ವ್ಯವಸ್ಥಿತ ವಿನಾಶವನ್ನು ಕಂಡಿತು. ಭಾರತದ ಪ್ರಜಾಪ್ರಭುತ್ವದ ಚೇತನವನ್ನು ಬಲಪಡಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಹೇಳಿರುವ ಮೌಲ್ಯಗಳಿಗೆ ತಕ್ಕಂತೆ ಬದುಕಲು ಸಾಧ್ಯವಾದದ್ದನ್ನೆಲ್ಲ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಬನ್ನಿ” ಎಂದು ಮೋದಿ ತಮ್ಮ ವೈಯಕ್ತಿಕ ಟ್ವಿಟರ್​ ಖಾತೆಯಲ್ಲಿ ಬರೆದಿದ್ದಾರೆ.
ಇದನ್ನೂ ಓದಿ:ಜುಲೈ 1 ರಿಂದ ಬಸ್ ಸಂಚಾರ, ಟಿಕೆಟ್ ದರ ಶೇ.25 ಏರಿಕೆ
ಜೊತೆಗೆ, “ಇದು ಕಾಂಗ್ರೆಸ್​ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸಕಿಹಾಕಿದ ರೀತಿ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲಾ ಮಹಾತ್ಮರನ್ನು ನಾವು ಸ್ಮರಿಸುತ್ತೇವೆ” ಎಂದಿರುವ ಮೋದಿ, ಆ ಅವಧಿಯಲ್ಲಿ ಸರ್ಕಾರಿ ನಿಷೇಧಕ್ಕೊಳಗಾಗಿದ್ದ ವಿಚಾರಗಳ ಬಗ್ಗೆ ಬಿಜೆಪಿ ನಿರ್ಮಿಸಿರುವ ಇನ್ಸ್​​ಟಾಗ್ರಾಂ ಪೋಸ್ಟ್​ನ ಲಿಂಕ್​ಅನ್ನು ಶೇರ್ ಮಾಡಿದ್ದಾರೆ.


A post shared by BJP – Bharatiya Janata Party (@bjp4india)

ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಠಾಗೂರರ ಸ್ವತಂತ್ರ ವಿಚಾರಗಳು, ಕಿಶೋರ್​ ಕುಮಾರ್​ರ ಗೀತೆಗಳು, ಚಂದ್ರಶೇಖರ ಆಜಾದ್ ಮತ್ತು ಭಗತ್​ ಸಿಂಗ್​ರ ಮೇಲಿನ ಚಲನಚಿತ್ರಗಳು ಮತ್ತು ಪ್ರತಿಭಟನೆಗಳು ತುರ್ತುಪರಿಸ್ಥಿತಿಯಲ್ಲಿ ನಿಷೇಧಗೊಂಡಿದ್ದವು ಎಂದು ಬಿಜೆಪಿ ಪಟ್ಟಿ ಮಾಡಿದೆ. ಭಾರತಕ್ಕೆ ಇಂಥ ಸ್ಥಿತಿಯನ್ನು ಹೇರಿದವರಿಗೆ(ಕಾಂಗ್ರೆಸ್​) ಮತ್ತೆ ಹಾಗೆ ಮಾಡುವ ಅಧಿಕಾರ ಸಿಗದಂತೆ ಮಾಡೋಣವೆಂದು ಜೊತೆಯಾಗಿ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದೆ.(ಏಜೆನ್ಸೀಸ್)
ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣ: ಸತ್ಯಾಂಶ‌ ಶೀಘ್ರ ಬಯಲು

ಆಕ್ಸಿಜನ್ ಅಗತ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಿ ಹೇಳಿತ್ತು ದೆಹಲಿ ಸರ್ಕಾರ! ಸುಪ್ರೀಂ ಕೋರ್ಟ್​ ತಂಡ ಬಯಲು ಮಾಡಿದೆ ಸತ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
