ಕೊಲ್ಕತ :ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚೆ ಬಿಜೆಪಿ ಸೇರಿದ್ದ ಟಿಎಂಸಿಯ ಮಾಜಿ ಶಾಸಕಿ ಸೋನಾಲಿ ಗುಹ ಅವರು ಇದೀಗ ಮತ್ತೆ ಆಡಳಿತಾರೂಢ ಟಿಎಂಸಿ ಸೇರಬಯಸಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕ್ಷಮೆ ಕೋರಿ, ಪಕ್ಷಕ್ಕೆ ವಾಪಸ್​ ಪಡೆಯುವಂತೆ ಪತ್ರ ಬರೆದಿದ್ದಾರೆ.
ಟಿಎಂಸಿಯಿಂದ ನಾಲ್ಕು ಬಾರಿ ಶಾಸಕಿಯಾಗಿದ್ದ ಸೋನಾಲಿ ಗುಹ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಅವರ ನೆರಳೆಂದೇ ಹೇಳಲಾಗುತ್ತಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ತಮಗೆ ಸೀಟು ಕೊಡದ ಬಗ್ಗೆ ಕೋಪಗೊಂಡು ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಟಿಎಂಸಿಗೆ ವಾಪಸಾಗಲು ಬಯಸಿದ್ದು, ‘ಬೇರೆ ಪಕ್ಷ ಸೇರುವ ತಪ್ಪು ನಿರ್ಧಾರ ಕೈಗೊಂಡೆ’ ಎಂದಿದ್ದಾರೆ. ಬಂಗಾಳಿಯಲ್ಲಿ ದೀದಿಗೆ ಬರೆದಿರುವ ತಮ್ಮ ಪತ್ರವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿರುವ ಆಕೆ, ‘ಟಿಎಂಸಿ ತೊರೆದಿದ್ದು ತಾವು ಭಾವುಕರಾಗಿ ಮಾಡಿದ ನಿರ್ಧಾರ’ ಎಂದಿದ್ದಾರೆ.
ಇದನ್ನೂ ಓದಿ:ಭವಾನಿಪುರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಮಮತಾ ಬ್ಯಾನರ್ಜಿ
“ಯಾವ ರೀತಿಯಲ್ಲಿ ಮೀನು ನೀರಿನ ಹೊರಗೆ ಜೀವಿಸಲು ಸಾಧ್ಯವಿಲ್ಲವೋ, ಹಾಗೇ ನಾನು ನೀವಿಲ್ಲದೆ ಬದುಕಲಾರೆ, ದೀದಿ. ನನ್ನನ್ನು ಕ್ಷಮಿಸಿ ಬಿಡಿ, ಇಲ್ಲದಿದ್ದರೆ ನಾನು ಬದುಕಲಾರೆ. ದಯವಿಟ್ಟು ನನಗೆ ವಾಪಸ್​ ಬರಲು ಅವಕಾಶ ಕೊಟ್ಟು ಉಳಿದ ಜೀವನವನ್ನು ನಿಮ್ಮ ಮಮತೆಯಲ್ಲಿ ಕಳೆಯಲು ಅವಕಾಶ ಮಾಡಿಕೊಡಿ” ಎಂದು ಭಾವುಕವಾದ ಪತ್ರ ಬರೆದಿದ್ದಾರೆ. ಒಂದು ಕಾಲದಲ್ಲಿ ಬಂಗಾಳ ವಿಧಾನಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಕೂಡ ಆಗಿದ್ದ ಗುಹ, ತಮಗೆ ‘ಬಿಜೆಪಿಯಲ್ಲಿ ಬೇಡದವರಂತೆ ಅನುಭವವಾಯಿತು’ ಎಂದಿದ್ದಾರೆ.(ಏಜೆನ್ಸೀಸ್)
ಬ್ಲ್ಯಾಕ್​​ ಫಂಗಸ್​ ಔಷಧಿ : ಉತ್ಪಾದನೆ, ಆಮದು ಹೆಚ್ಚಳ ; ಹೊಸದಾಗಿ 5 ಕಂಪೆನಿಗೆ ಲೈಸೆನ್ಸ್​

ತಿಂಗಳಿಗೆ 1 ಕೋಟಿ ಕೋವಾಕ್ಸಿನ್ ಡೋಸ್​ ತಯಾರಿಸಲಿದೆ ಬಿಬ್ಕಾಲ್

17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − one =
Remember me
