ನವದೆಹಲಿ:ಭಾರತದಲ್ಲಿ ಬ್ಯಾಂಕ್​ಗಳಿಂದ ಸಾಲ ಪಡೆದು ವಂಚಿಸಿ ಬ್ರಿಟನ್​ಗೆ ಪರಾರಿಯಾಗಿ ಲಂಡನ್​ನಲ್ಲಿ ನೆಲೆಸಿರುವ ವಾಣಿಜ್ಯೋದ್ಯಮಿ ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನಿರ್ದಿಷ್ಟ ಸಮಯದ ಚೌಕಟ್ಟನ್ನು ಹಾಕಿಕೊಳ್ಳಲು ಬ್ರಿಟನ್​ ಸರ್ಕಾರಕ್ಕೆ ಆಸ್ಪದ ಇಲ್ಲ ಎಂದು ಭಾರತದಲ್ಲಿನ ಬ್ರಿಟಿಷ್​ ರಾಯಭಾರಿ ಫಿಲಿಪ್​ ಬಾರ್ಟನ್​ ಹೇಳಿದ್ದಾರೆ.
ಆನ್​ಲೈನ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಯ ಅವರು ಬ್ರಿಟನ್​ನಲ್ಲಿ ಆಶ್ರಯ ಕೇಳಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.ಬ್ರಿಟನ್​ ಸರ್ಕಾರ ಮತ್ತು ಕೋರ್ಟ್​ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನಮ್ಮಲ್ಲಿಗೆ ಜನರು ಓಡಿಬರುವುದನ್ನು ತಡೆಯಲು ತಾವು ನಿರ್ವಹಿಸಬೇಕಾದ ಪಾತ್ರಗಳ ಬಗ್ಗೆ ಎರಡೂ ಸಂಸ್ಥೆಗಳಿಗೆ ಅರಿವಿದೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇಂಥ ಸ್ಥಿತಿಗಳಿಗೆ ಹೇಗೆ ಸ್ಪಂದಿಸಬೇಕು ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅದನ್ನು ಆ ಸಂಸ್ಥೆಗಳು ಮಾಡುತ್ತವೆ. ಜತೆಗೆ, ಕ್ರಿಮಿನಲ್​ಗಳು ನ್ಯಾಯಾಂಗ ತನಿಖೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಮನ್ವಯತೆಯಿಂದ ಕೆಲಸ ಮಾಡುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಸಚಿನ್ ಪೈಲಟ್​ ಅನರ್ಹತೆ ಪ್ರಕರಣ: ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ
ಭಾರತಕ್ಕೆ ಮಲ್ಯ ಅವರ ಹಸ್ತಾಂತರ ಪ್ರಕರಣ ಇನ್ನೂ ವಿಚಾರಣೆಯ ಪ್ರಕ್ರಿಯೆಯಲ್ಲಿದೆ. ಆದ್ದರಿಂದ ಆ ವಿಷಯವಾಗಿ ಯಾವುದೇ ಪ್ರತಿಕ್ರಿಯೆ ಕೊಡಲು ಸಾಧ್ಯವಿಲ್ಲ. ಅದರಲ್ಲವೂ ವಿಶೇಷವಾಗಿ ಅವರನ್ನು ಯಾವಾಗ ಹಸ್ತಾಂತರಿಸಲಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತಕ್ಕೆ ತಮ್ಮನ್ನು ಹಸ್ತಾಂತರಿಸದಂತೆ ಕೋರಿ ವಿಜಯ್​ ಮಲ್ಯ ಬ್ರಿಟನ್​ನ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಮೇಲ್ಮನವಿ ಮೇನಲ್ಲಿ ತಿರಸ್ಕೃತಗೊಂಡಿತ್ತು. ಆನಂತರದಲ್ಲಿ ಯಾವುದೋ ಕಾನೂನು ತೊಡಕಿನ ನೆಪ ಒಡ್ಡಿ ಬ್ರಿಟನ್​ ಸರ್ಕಾರ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿದೆ. ಜತೆಗೆ, ಆಶ್ರಯ ಕೋರಿ ಅವರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸದಂತೆ ಭಾರತ ಮನವಿ ಮಾಡಿಕೊಂಡಿದೆ.
ಫೇಸ್​ಬುಕ್​ಗೆ ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದ ರೌಡಿಶೀಟರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
