ನವದೆಹಲಿ:ಅಮೇಜಾನ್​ನಲ್ಲಿ ನಾವು ಹೋಮ್​ ಡಿಲಿವರಿ ಬಗ್ಗೆ ಕೇಳಿದ್ದೇವೆ ಆದರೆ ಈಗ ಹೋಮೇ ಡಿಲಿವರಿ ಆಗುತ್ತಿದೆ. ಅಚ್ಚರಿಯಾದರೂ ಇದು ಸತ್ಯ. ಮಡಚಬಹುದಾದ ಹಾಗೂ ಸುಲಭವಾಗಿ ಸಾಗಿಸಬಹುದಾದ ಮನೆಯನ್ನು ಅಮೇಜಾನ್​ ಮಾರಾಟ ಮಾಡುತ್ತಿದೆ. ಈ ಮನೆಯ ವಿಶೇಷತೆ ಏನು? ಬೆಲೆ ಎಷ್ಟು? ಎಂಬುದರ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಕಳೆದ ಮಂಗಳವಾರ ಅಮೆರಿಕದ ಟಿಕ್​ಟಾಕ್​ ಬಳಕೆದಾರರೊಬ್ಬರು ಅಮೇಜಾನ್​ನಲ್ಲಿ ಫೋಲ್ಡೇಬಲ್​ ಮನೆಯನ್ನು ಖರೀದಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಈ ಫೋಲ್ಡೆಬಲ್​ ಮನೆ ಭಾರಿ ಸುದ್ದಿಯಾಗಿದೆ. ಅಮೆರಿಕದಲ್ಲಿ ಬಾಡಿಗೆ ಗಗನಮುಖಿಯಾಗಿದೆ ಮತ್ತು ಆಸ್ತಿಯ ಬೆಲೆಗಳು ಸಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅನೇಕ ಜನರು ಚಿಕ್ಕ ಮನೆಗಳನ್ನು ಆಯ್ಕೆ ಮಾಡುವುದು ಅಥವಾ ಪೋರ್ಟಬಲ್ ಮನೆಗಳನ್ನು ನಿರ್ಮಿಸುತ್ತಿದ್ದಾರೆ.
Amazon sells these houses for $19,000 because no one can afford a real home anymore. They are glorified shipping containers.pic.twitter.com/4mLJF2HaJx
— Ian Miles Cheong (@stillgray)February 5, 2024

ಅಂದಹಾಗೆ ಈ ಫೋಲ್ಡೇಬಲ್​ ಮನೆಯ ಬೆಲೆ 26 ಸಾವಿರ ಡಾಲರ್​. ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 21.3 ಲಕ್ಷ ರೂಪಾಯಿ. ಇದರಲ್ಲಿ ಸಣ್ಣು ಅಡುಗೆ ಕೋಣೆ, ಲಿವಿಂಗ್​ ಏರಿಯಾ, ಬೆಡ್​ರೂಮ್​ ಮತ್ತು ಟಾಯ್ಲೆಟ್​ ಸೌಲಭ್ಯ ಇರಲಿದೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ಕೆಲ ನೆಟ್ಟಿಗರು ಮನೆಯನ್ನು ನೋಡಿ ನಂಬಲಾಗದ ಮತ್ತು ವೆರಿ ಕೂಲ್​ ಎಂದು ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಈ ಮನೆಯಿಂದ ಹೆಚ್ಚೇನೂ ಪ್ರಭಾವಿತರಾಗಿಲ್ಲ.
ಹೊಸ ತಲೆಮಾರಿನ ಮನೆ ಇದಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಕ್ಯಾಪಿಟಲ್‌ಮೈಂಡ್ ಕಂಪನಿ ಸಿಇಒ ದೀಪಕ್ ಶೆಣೈ ಕೂಡ ಚರ್ಚೆಗೆ ಧುಮುಕಿದರು ಮತ್ತು ಹೆಚ್ಚಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹೆಸರುವಾಸಿಯಾಗಿರುವ ಮುಂಬೈನಲ್ಲಿ ಈ ಮನೆಗಳನ್ನು ಮಾರಾಟ ಮಾಡಿದರೆ ಏನಾಗುತ್ತದೆ ಎಂದು ಊಹಿಸಿದರು. ಮುಂಬೈನಲ್ಲಿ ಮಾರಾಟ ಮಾಡುವುದಾದರೆ ಪ್ರತಿ ಮನೆಗೆ 5 ಕೋಟಿ ರೂ. ತಗುಲುತ್ತದೆ ಎಂದರು.(ಏಜೆನ್ಸೀಸ್​)
This would retail in Mumbai for at least 5 crores each and you still won't be allowed to cook non veg in themhttps://t.co/HXnpmA7HkJ
— Deepak Shenoy (@deepakshenoy)February 6, 2024

ಇಂಗ್ಲೆಂಡ್​ ವಿರುದ್ಧದ ಉಳಿದ 3 ಟೆಸ್ಟ್​ ಪಂದ್ಯಗಳಿಗೂ​ ಕೊಹ್ಲಿ ಅಲಭ್ಯ: ಬಿಸಿಸಿಐ ಕೊಟ್ಟ ಕಾರಣ ಹೀಗಿದೆ…

ದೇಶ ವಿಭಜನೆ ಮಾಡುವ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದಿದ್ದೇನೆ: ಕೆ.ಎಸ್​. ಈಶ್ವರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 11 =
Remember me
