ಚಂಡೀಗಡ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬಿನಲ್ಲಿ ಭಾರೀ ರಾಜಕೀಯ ಬದಲಾವಣೆಗಳು ನಡೆಯುತ್ತಿವೆ. ಅಂತಃಕಲಹಗಳ ನಡುವೆ ಕಾಂಗ್ರೆಸ್​, ದಲಿತ ಮುಖಂಡ ಚನ್ನಿ ಅವರನ್ನು ಹೊಸ ಮುಖ್ಯಮಂತ್ರಿಯಾಗಿ ನೇಮಿಸಿದೆ. ಮತ್ತೊಂದೆಡೆ, ಅಸಮಾಧಾನದಿಂದ ಕಾಂಗ್ರೆಸ್​ ತೊರೆದಿರುವ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್​ ಸಿಂಗ್​ ತಮ್ಮದೇ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ.
ಇಂದು ಚಂಡೀಗಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಂಗ್​, ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಜೊತೆಗೆ, ಚುನಾವಣೆಯಲ್ಲಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳಲು ಸಿದ್ಧವಿದೆ. ಆದರೆ, ಅಕಾಲಿ ದಳದೊಂದಿಗೆ ಯಾವುದೇ ಹೊಂದಾಣಿಕೆಗೆ ಸಿದ್ಧವಿಲ್ಲ ಎಂದು ಘೋಷಿಸಿದರು.
ಇದನ್ನೂ ಓದಿ:ನನ್ನ ಜತೆಗೇ ಓದಿರೋರು ಲಕ್ಷ ಸಂಪಾದನೆ ಮಾಡ್ತಿರುವಾಗ ನಾನ್ಯಾಕೆ ಹೀಗೆ ಮೇಡಂ? ಲೈಫೇ ಬೇಡ ಅನ್ನಿಸ್ತಿದೆ…
ಹೆಚ್ಚಿನ ಸಂಖ್ಯೆಯಲ್ಲಿ ಸಮರ್ಥಕರನ್ನು ಹೊಂದಿರುವ ಕ್ಯಾಪ್ಟನ್​ ಸಿಂಗ್​ ಬಿಜೆಪಿ ಕಡೆಗೆ ಒಲವು ತೋರಿರುವುದು ಕಾಂಗ್ರೆಸ್​ನ ಚುನಾವಣಾ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅವರ ಹೊಸ ಪಕ್ಷವು ಪಂಜಾಬ್​ ರಾಜಕೀಯದ ನಕ್ಷೆ ಬದಲಿಸಬಹುದು ಎಂಬ ನಿರೀಕ್ಷೆ ಇದೆ.
ಡ್ರೋನ್​ ಡೇಂಜರ್​:ರಾಜ್ಯದಲ್ಲಿ ಶಸ್ತ್ರಾಸ್ತ್ರಗಳನ್ನು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಈ ಹಿಂದೆ ಡ್ರೋನ್​ಗಳನ್ನು ಬಳಸಿದ್ದಾರೆ. ಇದೀಗ ಸ್ಫೋಟಕ ವಸ್ತುಗಳನ್ನು ಕಳುಹಿಸಲು ಕೂಡ ಡ್ರೋನ್​ ಬಳಕೆ ನಡೆಯುತ್ತಿದೆ. ರಾಜ್ಯದ ಭದ್ರತೆಗೆ ಸವಾಲು ಎದುರಾಗಿದ್ದು, ನಾವು, ರಾಜಕಾರಣಿಗಳು ಪಂಜಾಬನ್ನು ರಕ್ಷಿಸಬೇಕಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು.(ಏಜೆನ್ಸೀಸ್)
ಬಹುತೇಕ ತುಂಬಿರುವ ಕೆಆರ್​ಎಸ್​ ಡ್ಯಾಂ… ತಡವಾಗಿ ಹೆಚ್ಚಿದ ನೀರಿನ ಮಟ್ಟ

ಶಿಕ್ಷಕರು ಮತ್ತು ಪೊಲೀಸರ ನಡುವೆ ಘರ್ಷಣೆ: 23 ಜನರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + six =
Remember me
