ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿದ್ದಾರೆ. ಭಾರತವು ನಾಗರಿಕ ವಿಮಾನಯಾನದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಹೊಂದಿದೆ ಎಂದು ಹೇಳಿದರು. ಇದೀಗ ಈ ಬಗ್ಗೆ ಕ್ಯಾಪ್ಟನ್ ಜೋಯಾ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಯಾಪ್ಟನ್ ಜೋಯಾ ಅಗರ್ವಾಲ್ ಹೇಳಿದ್ದೇನು?ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು ವಿಡಿಯೋದಲ್ಲಿ “ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ವಾಣಿಜ್ಯ ಪೈಲಟ್‌ಗಳನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಅವರು ಉಲ್ಲೇಖಿಸಿದ್ದಾರೆ. ಈ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ವಿಮಾನಯಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಇತರ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುನ್ನಡೆ ಸಾಧಿಸಿರುವುದು ಸ್ಪೂರ್ತಿದಾಯಕವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Capt. Zoya Agrawal, Pilot, Capt of all women crew of one of the longest flight from San Francisco to Bengaluru on PM@narendramodi's#IndependenceDay2023 speech@MinistryWCDpic.twitter.com/ATvd5r96kc
— PIB WCD (@PIBWCD)August 15, 2023

ಜೋಯಾ ಅಗರ್ವಾಲ್ ಯಾರು?ಕ್ಯಾಪ್ಟನ್ ಜೋಯಾ ಅಗರ್ವಾಲ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವಿನ ಉತ್ತರ ಧ್ರುವದ ಮೂಲಕ ಎಲ್ಲಾ ಮಹಿಳಾ ವಿಮಾನ ಸಿಬ್ಬಂದಿಯೊಂದಿಗೆ ವಿಶ್ವದ ಅತಿ ಉದ್ದದ ವಾಯು ಮಾರ್ಗಗಳಲ್ಲಿ ಒಂದನ್ನು ಹಾರಿಸಿದ ಮೊದಲ ಮಹಿಳಾ ಕಮಾಂಡರ್ ಆಗಿದ್ದು, ಮೋದಿಯವರ ಭಾಷಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?ಕೆಂಪು ಕೋಟೆಯ ಮೇಲೆ 10 ನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ನನ್ನ ತಾಯಿ ಮತ್ತು ಸಹೋದರಿಯರ ಶಕ್ತಿಯಿಂದ ದೇಶವು ಮುನ್ನಡೆದಿದೆ ಎಂದು ಹೇಳಲು ಬಯಸುತ್ತೇನೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ಮಹತ್ವವನ್ನು ಜಿ-20 ರಾಷ್ಟ್ರಗಳು ಸಹ ಗುರುತಿಸುತ್ತಿವೆ ಎಂದರು. ಮಹಿಳಾ ನೇತೃತ್ವದ ಅಭಿವೃದ್ಧಿಯು ದೇಶವನ್ನು ಮುನ್ನಡೆಸುವ ಒಂದು ಅಂಶವಾಗಿದೆ. ಭಾರತವು ನಾಗರಿಕ ವಿಮಾನಯಾನದಲ್ಲಿ ಅತಿ ಹೆಚ್ಚು ಪೈಲಟ್‌ಗಳನ್ನು ಹೊಂದಿದೆ ಎಂದು ಇಂದು ನಾವು ಹೆಮ್ಮೆಯಿಂದ ಹೇಳಬಹುದು. ಮಹಿಳಾ ವಿಜ್ಞಾನಿಗಳು ಚಂದ್ರಯಾನ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಭಾರತದ ಬಗ್ಗೆ ವಿಶ್ವದಲ್ಲಿ ಹೊಸ ನಂಬಿಕೆಭಾರತದ ಸಾಮರ್ಥ್ಯದ ಬಗ್ಗೆ ವಿಶ್ವದಲ್ಲಿ ಹೊಸ ನಂಬಿಕೆ ಮೂಡಿದೆ ಎಂದು ಹೇಳಿದ ಮೋದಿ ಅವರು ಇಂದು ವಿಶ್ವವೇ ಭಾರತದ ವೈವಿಧ್ಯತೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದು, ಇದರಿಂದ ಭಾರತದ ಆಕರ್ಷಣೆ ಹೆಚ್ಚಿದೆ ಎಂದು ಕೊಂಡಾಡಿದರು.
‘ತ್ರಿವರ್ಣ’ ಬಣ್ಣದ ಬೂಟು ಧರಿಸಿದ ಜನಪ್ರಿಯ ಗಾಯಕ ಎಪಿ ಧಿಲ್ಲೋನ್; ಚಳಿ ಬಿಡಿಸಿದ ನೆಟ್ಟಿಗರು

Sign in to your account
Please enter an answer in digits:4 + five =
Remember me
