ದೆಹಲಿ:ಭಾರತದ ಕ್ರಿಕೆಟಿಗ ರಿಷಬ್ ಪಂತ್ (Rishabh Pant) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗೊಂಡ ರಿಷಬ್​ ಪಂತ್​ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು(ಶುಕ್ರವಾರ) ಬೆಳಗ್ಗೆ BMW ಕಾರಿನಲ್ಲಿ ಭಾರತದ ಸ್ಟಾರ್​ ವಿಕೆಟ್​ಕೀಪರ್(wicketkeeper)​ ಮನೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ರಿಷಬ್​ ಪಂತ್​ ಅವರು ಉತ್ತರಾಖಂಡದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ಮಾರ್ಗದಲ್ಲಿ ಉತ್ತರಾಖಂಡ್‌ನ ರೂರ್ಕಿ ಬಳಿ ಡಿವೈಡರ್‌ಗೆ ಕಾರು ಡಿಕ್ಕಿ(accident) ಹೊಡೆದಿದ್ದು, ಕ್ಷಣಾರ್ಧದಲ್ಲೇ ಕಾರು ಹೊತ್ತಿ ಉರಿದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಕಾರನ್ನು ರಿಷಬ್​ ಪಂತ್​ ಅವರೇ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಅಪಘಾದಲ್ಲಿ ರಿಷಬ್​ ಪಂತ್​ ಗಂಭೀರ ಗಾಯಗೊಂಡಿದ್ದು, ತಕ್ಷಣ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ ಮತ್ತು ಬೆನ್ನಿಗೆ ತೀವ್ರಗಾಯಗಳಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಅಪಘಾತಕ್ಕೀಡಾದ ಕಾರು, ಗಾಯಗೊಂಡು ಆಸ್ಪತ್ರೆ ಬೆಡ್​ ಮೇಲೆ ರಿಷಬ್​ ಪಂತ್​ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಹಸ್ರಾರು ಅಭಿಮಾನಿಗಳಿ ರಿಷಬ್​ರ ಚೇತರಿಕೆಗಾಗಿ ದದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್​)
ಫುಟ್ಬಾಲ್​ ದಿಗ್ಗಜ ಪೀಲೆ ಇನ್ನಿಲ್ಲ: 3 ಬಾರಿ ವಿಶ್ವಕಪ್​ ಟೂರ್ನಿ ಗೆದ್ದಿದ್ದ ಬ್ರೆಜಿಲ್​ನ ಸ್ಟಾರ್​ ಆಟಗಾರ ಇನ್ನು ನೆನಪು ಮಾತ್ರ

ತಾಯಿ ಹೀರಾಬೆನ್​ ನಿಧನ, ಭಾವುಕರಾದ ಪ್ರಧಾನಿ: ನನ್ನ ಅಮ್ಮನಲ್ಲಿ ತ್ರಿಮೂರ್ತಿಗಳನ್ನ ಕಂಡಿರುವೆ, ಶಕ್ತಿ-ಪ್ರೀತಿ-ವಾತ್ಸಲ್ಯ ಅನುಭಸಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + four =
Remember me
