ಭೋಪಾಲ್:ಮದುವೆ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುತ್ತಿದ್ದವರು ರಸ್ತೆ ಮಧ್ಯೆಯೇ ಅಪಘಾತಕ್ಕೀಡಾಗಿ, ಹೆಣವಾಗಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರದ ರಾಮ್​ಕೋನಾ ಬಳಿ ನಡೆದಿದೆ. ಕಾಲುವೆ​ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಎರಡು ಪೀಸ್​ ಆಗಿದೆ ಎನ್ನಲಾಗಿದೆ.
ಸೌನ್ಸಾರ್ ನಿವಾಸಿ ಸಚಿನ್ ಜೈಸ್ವಾಲ್ ತಮ್ಮ ಕುಟುಂಬದೊಂದಿಗೆ ರಾಮ್​ಕೋನಾಕ್ಕೆ ಮದುವೆಗೆಂದು ತೆರಳಿದ್ದರು. ಮದುವೆ ಮುಗಿಸಿದ ಕುಟುಂಬ ಶುಕ್ರವಾರ ತಮ್ಮ ಊರಿಗೆ ವಾಪಾಸು ಬರಲು ಹೊರಟಿದೆ. ರಸ್ತೆ ಮೇಲೆ ಬರುತ್ತಿರುವಾಗ ಬೈಕ್​ ಸವಾರನೊಬ್ಬ ಅಡ್ಡ ಬಂದ ಎನ್ನುವ ಕಾರಣಕ್ಕೆ ಆತನನ್ನು ರಕ್ಷಿಸುವ ಸಲುವಾಗಿ ಸಚಿನ್​ ಕಾರನ್ನು ಸೈಡ್​ಗೆ ಎಳೆದಿದ್ದಾರೆ. ಆಗ ಬ್ಯಾಲೆನ್ಸ್​ ತಪ್ಪಿದ ಕಾರು ಸೀದಾ ಕಾಲುವೆಗೆ ಹೋಗಿ ಡಿಕ್ಕಿ ಹೊಡೆದಿದೆ. ಕಾರು ಎರಡು ಭಾಗವಾಗಿ ಹೋಗಿದೆ.
ಕಾರಿನ ಹಿಂಬದಿಯಲ್ಲಿ ಮೂವರು ಮಹಿಳೆಯರು ಕುಳಿತಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಚಾಲಕನ ಸೀಟ್​ನಲ್ಲಿದ್ದ ಸಚಿನ್​ ಮತ್ತು ಆತನ ಪಕ್ಕದ ಸೀಟಿನಲ್ಲಿದ್ದ ಇನ್ನೋರ್ವ ಗಂಡಸು ಗಂಭೀರ ಗಾಯಾಳುಗಳಾಗಿದ್ದಾರೆ. ಅವರಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್)
ಜೋರಾಯ್ತು ಮುಂಗಾರು: ಜೂನ್​ 14ರಿಂದ ಮತ್ತಷ್ಟು ಹೆಚ್ಚಲಿದೆ ಮಳೆ, ಹಲವು ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

ಮಗ ಮದುವೆಯಾಗಿಲ್ಲವೆಂದು ತುಂಡು ತುಂಡಾಗಿ ಕತ್ತರಿಸಿ ಎಸೆದ ಅಪ್ಪ ಅಮ್ಮ! ಮಗಳು, ಅಳಿಯನನ್ನೂ ಹಾಗೇ ಕೊಂದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
