ಮುಂಬೈ/ದೆಹಲಿ:ಇದ್ದಕ್ಕಿದ್ದಂತೆ ಹೆದ್ದಾರಿ ಕುಸಿದ ಪರಿಣಾಮವಾಗಿ ವಾಹನಗಳು ದೊಡ್ಡ ಗುಂಡಿಯೊಳಕ್ಕೆ ಸೇರಿದ ಅತ್ಯಪರೂಪದ ಪ್ರಕರಣವೊಂದು ನಡೆದಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಕುಸಿದ ರಸ್ತೆಯೊಳಗೆ ವಾಹನಗಳು ಸಿಲುಕಿ ಆತಂಕದ ವಾತಾವರಣ ಉಂಟಾಗಿತ್ತು.
ಮುಂಬೈನ ಚುನಂಭಟ್ಟಿ ಪ್ರದೇಶದ ರಾಹುಲ್​ನಗರದ ಈಸ್ಟರ್ನ್​ ಎಕ್ಸ್​ಪ್ರೆಸ್​​ ಹೈವೇಯಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಖಾಸಗಿ ನಿರ್ಮಾಣ ಸಂಸ್ಥೆಯೊಂದು ಕಟ್ಟಡ ನಿರ್ಮಾಣಕ್ಕಾಗಿ ಪಕ್ಕದಲ್ಲೇ ಬೃಹತ್ ಪ್ರಮಾಣದಲ್ಲಿ ಅಗೆತ ನಡೆಸಿದ್ದು, ಅದಕ್ಕೆ ತಾಗಿದಂತೆ ಈ ಹೆದ್ದಾರಿ ಸುಮಾರು 25 ಅಡಿಗಳಷ್ಟು ಆಳಕ್ಕೆ ಕುಸಿದಿದೆ.
ಇದನ್ನೂ ಓದಿ:ಪರಸ್ತ್ರೀ ಜತೆ ಅಪ್ಪನ ದೈಹಿಕ ಸಂಪರ್ಕದ ವಿಡಿಯೋ ವೈರಲ್; ಮನನೊಂದ ಮಗ ಪ್ರಾಣ ಕಳ್ಕೊಂಡ!
ಹೀಗೆ ಕುಸಿದ ರಸ್ತೆಯಿಂದ ಉಂಟಾದ ದೊಡ್ಡ ಗುಂಡಿಯೊಳಕ್ಕೆ ಕಾರುಗಳು ಹಾಗೂ ದ್ವಿಚಕ್ರವಾಹನಗಳು ಬಿದ್ದಿವೆ. ಅದರಲ್ಲೂ ಕಾರೊಂದು ಕುಸಿದ ಹೆದ್ದಾರಿಯ ಅಂಚಿಂದ ಗುಂಡಿಯೊಳಕ್ಕೆ ಬೀಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆ ವಿಡಿಯೋ ತುಣುಕು ವೈರಲ್ ಆಗಿದೆ. ಬಿದ್ದ ವಾಹನಗಳಲ್ಲಿ ಬಹುತೇಕವು ಪಾರ್ಕ್ ಮಾಡಿದ್ದ ವಾಹನಗಳಾದ್ದರಿಂದ ಅಂಥ ಯಾವುದೇ ಸಾವು-ನೋವು ವರದಿಯಾಗಿಲ್ಲ.
#WATCH| Mumbai, Maharashtra: Part of a road collapsed at an under-construction site in Rahul Nagar, Eastern express highway, Chunabhatti at around 9 am. Around 8-10 two-wheelers and 4-5 four-wheelers are damaged during the incident. The area has been evacuated. No injuries were…pic.twitter.com/I1ET6kqDx5
— ANI (@ANI)July 5, 2023

ದೆಹಲಿಯಲ್ಲೂ ರಸ್ತೆ ಕುಸಿತ:ಭಾರಿ ಮಳೆಯ ಕಾರಣ ದೆಹಲಿಯ ಜನಕಪುರಿ ಪ್ರದೇಶದಲ್ಲಿ ರಸ್ತೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಆದರೆ ಈ ಸಂದರ್ಭದಲ್ಲಿ ವಾಹನದ ಓಡಾಟ ಇರದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಉತ್ತರಪ್ರದೇಶದ ಲಕ್ನೋದ ಬಲರಾಂಪುರ ಆಸ್ಪತ್ರೆ ಬಳಿಯ ನಿನ್ನೆ ರಸ್ತೆ ಕುಸಿದು ಕಾರೊಂದು ಸಿಲುಕಿತ್ತು.
ಇದು ಸಿಂಗಲ್​ ಆಗಿರುವವರಿಂದ ಮಿಂಗಲ್ ಆಗಲು ಗ್ರೀನ್​ ಸಿಗ್ನಲ್; ಪೇರಿಂಗ್ ಆಗಲೆಂದೇ ಪಿಯರ್ ರಿಂಗ್, ಏನಿದು ಹೊಸ ಟ್ರೆಂಡ್?

ನನ್ನ ಸಾವಿಗೆ ಶಾಸಕರೇ ಕಾರಣ, ಸಾಯಲು ಅನುಮತಿ ಕೊಡಿ: ಬಸ್​ ಕಂಡಕ್ಟರ್ ಮನವಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + 5 =
Remember me
