ರಾಯಪುರ:ದಸರಾ ಕೊನೆಯ ದಿನವಾಗಿದ್ದ ಶುಕ್ರವಾರದಂದು ದುರ್ಗಾ ಮಾತೆಯ ಪ್ರತಿಮೆಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋಗುತ್ತಿದ್ದ ಭಕ್ತರ ಮೇಲೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಹರಿಹಾಯ್ದಿರುವ ಪ್ರಕರಣ ನಡೆದಿದೆ. ಛತ್ತೀಸಗಡದ ಜಶ್​ಪುರದಲ್ಲಿ ಸಂಭವಿಸಿರುವ ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ; 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅತಿವೇಗವಾಗಿ ಕಾರನ್ನು ಚಲಿಸಿ ಸಾವುನೋವಿಗೆ ಕಾರಣರಾದ ಬಬ್ಲು ವಿಶ್ವಕರ್ಮ ಮತ್ತು ಶಿಶುಪಾಲ್ ಸಾಹು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈರ್ವರೂ ಆರೋಪಿಗಳು ಮಧ್ಯಪ್ರದೇಶದ ನಿವಾಸಿಗಳಾಗಿದ್ದು, ಛತ್ತೀಸಗಡದ ಮೂಲಕ ಹಾದುಹೋಗುತ್ತಿದ್ದರು. ಆಗ ಪಾಥಲ್​ಗಾವ್​ ಗ್ರಾಮದ ಮುಖ್ಯರಸ್ತೆಯಲ್ಲಿ ಈ ದುರಂತ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಹೆರಿಗೆ ಆದಾಗ ಹೆಣ್ಣು ಮಗು, ಕೊನೆಗೆ ಕೊಟ್ಟದ್ದು ಗಂಡು ಮಗು! ಆಸ್ಪತ್ರೆ ಎಡವಟ್ಟಿಗೆ ಪಾಲಕರು ಆಕ್ರೋಶ
ಆರೋಪಿಗಳ ವಿರುದ್ಧ ಐಪಿಸಿ ಕಲಂ 302 ಮತ್ತು 304 ರಡಿ ಕೊಲೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಶ್​ಪುರ್​ ಎಸ್ಪಿ ವಿಜಯ್​ ಅಗರ್ವಾಲ್ ಹೇಳಿದ್ದಾರೆ. ದುರ್ಘಟನೆಯ ಹಿನ್ನೆಲೆಯಲ್ಲಿ ಪಾಥಲ್​ಗಾವ್​ ಪೊಲೀಸ್​​ ಠಾಣಾಧಿಕಾರಿ ಮತ್ತು ಸಹಾಯಕ ಸಬ್​ಇನ್ಸ್​ಪೆಕ್ಟರನ್ನು ಅಮಾನತ್ತುಗೊಳಿಸಲಾಗಿದೆ ಎಂದಿದ್ದಾರೆ.(ಏಜೆನ್ಸೀಸ್)
ನಡುರಸ್ತೆಯಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ ಕಾರ್ಯಕರ್ತರು!

ಕಾಂಗ್ರೆಸ್​ ವರ್ಕಿಂಗ್ ಕಮಿಟಿ ಸಭೆ: ಹೊಸ ಅಧ್ಯಕ್ಷರ ಆಯ್ಕೆಗೆ ನಿರ್ಣಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
