ಆಂಧ್ರಪ್ರದೇಶ:ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿರುವ ಘಟನೆ ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಲಕ್ಷ್ಮೀನಗರದಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಪೆನ್ನು, ಪುಸ್ತಕ ಹಿಡಿವ ಕೈಯಲ್ಲಿ ನೇಜಿ : ಮಳೆ ಲೆಕ್ಕಿಸದೆ ಗದ್ದೆಯಲ್ಲಿ ಕೃಷಿ ಪಾಠ ಕಲಿತ ವಿದ್ಯಾರ್ಥಿಗಳು
ಮೃತರನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನ ರಾಚಬತ್ತುನಿ ಭಾಗ್ಯಶ್ರೀ (26), ರಚನಿಬತುನಿ ನಾಗನಿತಿನ ಕುಮಾರ್ (2) ಮತ್ತು ಬೊಮ್ಮ ಕಮಲಾದೇವಿ (53) ಎಂದು ಗುರುತಿಸಲಾಗಿದೆ. ಏಲೂರು ಜಿಲ್ಲೆಯ ದ್ವಾರಕಾ ತಿರುಮಲ ಮಂಡಲದಲ್ಲಿ ನಿಂತಿದ್ದ ಲಾರಿಗೆ ಹೈದರಾಬಾದ್‌ನಿಂದ ರಜೋಲ್‌ಗೆ ತೆರೆಳುತ್ತಿದ್ದ ಕಾರು ಡಿಕ್ಕಿ ಹೊಡೆದ ಕಾರಣ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ನಾಗಷಣ್ಮುಕ್ ಹಾಗೂ ಚಾಲಕ ವಂಶಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಭೀಮಡೋಳು ಸರ್ಕಲ್ ಇನ್ಸ್​ಪೆಕ್ಟರ್ ರವಿಕುಮಾರ್ ಮತ್ತು ಸಬ್ ಇನ್ಸ್​ಪೆಕ್ಟರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).
ಅಭಿಷೇಕ್​ ಶರ್ಮ ಶತಕಕ್ಕೆ ಗಿಲ್ ಕೊಟ್ಟ ಈ ಗಿಫ್ಟ್​​ ಕಾರಣ! ಇದರಿಂದಲೇ ಒಲಿಯಿತು ‘ಅಭಿ’ಗೆ ಅದೃಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
