ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋಗಳು ನೆಟ್ಟಿಗರನ್ನು ಬಹಳ ವೇಗವಾಗಿ ತಲುಪುವ ಮೂಲಕ ಕೆಲವೇ ನಿಮಿಷಗಳಲ್ಲಿ ಭಾರೀ ವೈರಲ್​ ಆಗುತ್ತದೆ. ಕೆಲವು ಘಟನೆಗಳ ದೃಶ್ಯಗಳು ನೋಡುಗರಲ್ಲಿ ಸಾಕಷ್ಟು ಗೊಂದಲ, ಅನುಮಾನ ಮತ್ತು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಆ ಸಾಲಿಗೆ ಈ ವಿಡಿಯೋ ಕೂಡ ಸೇರ್ಪಡೆಗೊಂಡಿದೆ ಎನ್ನಬಹುದು.
ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್​ ಮಾಡಿ ಪ್ರಾಣಬಿಟ್ಟ ಪತಿ..!
ದೃಶ್ಯದಲ್ಲಿ ರಸ್ತೆಯ ಬದಿ ಬಿಳಿ ಬಲೀನೋ ಕಾರು ನಿಂತಿದೆ. ಈ ಕಾರು ನೋಡ ನೋಡುತ್ತಿದ್ದಂತೆ ಮಂದಗತಿಯಲ್ಲಿ ರಸ್ತೆಯ ಬಲ ಭಾಗದಿಂದ ಎಡಭಾಗಕ್ಕೆ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ದೃಶ್ಯ ಕಂಡಾಗ ಚಾಲಕರೊಬ್ಬರು ಕಾರನ್ನು ನಿಧಾನವಾಗಿ ತಿರುಗಿಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ಆದ್ರೆ, ಅಚ್ಚರಿ ಎಂದರೆ ಕಾರು ತನ್ನಷ್ಟಕ್ಕೆ ತಾನೇ ಚಾಲನೆಯಾಗಿದೆ!
The end of the video will raise so many questions 😳pic.twitter.com/Mfx0cGN6TK
— Godman Chikna (@Madan_Chikna)August 20, 2023

ತಾನು ನಿಲ್ಲಿಸಿದ ಕಾರು ರಸ್ತೆಯ ಮಧ್ಯೆ ಚಲಿಸುತ್ತಿರುವುದನ್ನು ಕಂಡ ಚಾಲಕ, ಗಾಬರಿಯಿಂದ ಓಡಿಬಂದು ಕಾರಿನೊಳಗೆ ಕುಳಿತು, ತಕ್ಷಣವೇ ಕಾರನ್ನು ನಿಲ್ಲಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದು, ಕಾರನ್ನು ಚಾಲಕನೇ ಒಳಗೆ ಕುಳಿತು ಚಲಾಯಿಸಿದಂತೆ ಕಾಣಿಸಿದೆ. ಆದ್ರೆ, ಇದು ನಿಜವಲ್ವಾ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ತಮ್ಮಲ್ಲೇ ತಾವು ಕೇಳಿಕೊಳ್ಳುವಂತೆ ಮಾಡಿದೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
