ಹೈದರಾಬಾದ್ :ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂ ಗ್ರಾಮದಲ್ಲಿ ವಿಶೇಷಚೇತನರಿಗಾಗಿ ಕಟ್ಟಲಾಗಿರುವ ವಸತಿ ಶಾಲೆಯಲ್ಲಿ ಇದೀಗ ಕರೊನಾದಿಂದ ತಂದೆತಾಯಿಯಿಂದ ದೂರವಾಗಿರುವ ಮಕ್ಕಳಿಗೆ ಆಶ್ರಯ ಒದಗಿಸಲಾಗುತ್ತಿದೆ. ಇಲ್ಲಿ ಊಟ ತಿಂಡಿ ಮುಂತಾದ ಸೌಕರ್ಯ ನೀಡುವ ಜೊತೆಗೆ ಮಕ್ಕಳಿಗೆ ದಿಢೀರ್ ಬದಲಾವಣೆಗೆ ಹೊಂದಿಕೊಳ್ಳಲು ನಿತ್ಯ ಕೌನ್ಸಲಿಂಗ್ ಕೂಡ ನೀಡಲಾಗುತ್ತಿದೆ.
ತಂದೆತಾಯಿಗೆ ಅಥವಾ ಪೋಷಕರಿಗೆ ಕರೊನಾ ಪಾಸಿಟಿವ್ ಬಂದು ಆಸ್ಪತ್ರೆ ಅಥವಾ ಐಸೊಲೇಷನ್ ಸೆಂಟರ್​ಗಳಲ್ಲಿದ್ದರೆ ಅಥವಾ ಅವರು ಕರೊನಾದಿಂದ ಸತ್ತುಹೋಗಿದ್ದರೆ, ಅಂತಹ ಮಕ್ಕಳ ಆರೈಕೆ ಮಾಡಲು ರಾಜ್ಯದ 13 ಜಿಲ್ಲೆಗಳಲ್ಲಿ ಇದೇ ರೀತಿಯಾಗಿ ಒಟ್ಟು 32 ಹೊಸ ಶಿಶು ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ಎ.ಕೆ.ಕೃಷ್ಣ ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ:ಸೋಂಕಿತರ ಜೀವ ಕಸಿಯುತ್ತಿರುವ ಕಪ್ಪು ಶಿಲೀಂಧ್ರಕ್ಕೆ ಬೆಂಗಳೂರಿನಲ್ಲಿ ನಾಳೆ ವಿಶೇಷ ಚಿಕಿತ್ಸೆ
ಈವರೆಗೆ ಕನಿಷ್ಠ 130 ಮಕ್ಕಳು ಕರೊನಾದಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎನ್ನಲಾಗಿದೆ. ಇಂತಹ ಮಕ್ಕಳಿಗೆ ಆಶ್ರಯ ಒದಗಿಸಲು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ. 181 ಅಥವಾ 1098 ಕ್ಕೆ ಕರೆ ಮಾಡಿ ಯಾವುದೇ ಮಗು ಅಥವಾ ಸಂಬಂಧಿಕರು ಸಹಾಯ ಪಡೆಯಬಹುದಾಗಿದೆ. ಜಿಲ್ಲಾ ಮಟ್ಟದ ತಂಡಗಳು ಸಂಬಂಧಿತ ಮಗು/ಮಕ್ಕಳ ಮನೆಗೆ ತೆರಳಿ ಅವರನ್ನು ಸಮೀಪದ ಆರೈಕೆ ಕೇಂದ್ರಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಕ್ರಿತಿಕಾ ಬತ್ರ ಹೇಳಿದ್ದಾರೆ.(ಏಜೆನ್ಸೀಸ್​)
ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

‘ರಾಧೆ ಪೈರೆಸಿಯಲ್ಲಿ ತೊಡಗಬೇಡಿ, ತೊಂದರೆಗೆ ಸಿಲುಕುತ್ತೀರಿ’ ಎಂದ ಸಲ್ಮಾನ್

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:12 − nine =
Remember me
