ನವದೆಹಲಿ:ದೇಶದಲ್ಲಿ ನಿನ್ನೆಯಿಂದ ಅನ್​ಲಾಕ್​-5 ಪ್ರಾರಂಭವಾಗಿದೆ. ಆದರೆ ಕರೊನಾ ಸೋಂಕಿತರ ಸಂಖ್ಯೆಯಲ್ಲೂ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕೊವಿಡ್​-19 ನಿಯಂತ್ರಣಾ ಸಲಹೆಗಳನ್ನು, ಮಾರ್ಗದರ್ಶಿಯನ್ನು ಪಾಲನೆ ಮಾಡುವಲ್ಲಿ ನಿಷ್ಕಾಳಜಿ, ನಿರ್ಲಕ್ಷ್ಯ ವಹಿಸಿದರೆ ಕರೊನಾ ವೈರಸ್​ ಪ್ರಸರಣ ತಡೆಯುವುದು ಇನ್ನಷ್ಟು ಕಷ್ಟವಾಗಲಿದೆ ಎಂದಿದ್ದಾರೆ. ಹಾಗೇ, ಸೋಂಕು ತಡೆಯಲು ಮಾಸ್ಕ್​ ಅತ್ಯಗತ್ಯ ಮತ್ತು ಅತ್ಯುತ್ತಮ ಸಾಧನವಾಗಿದ್ದು, ತಪ್ಪದೆ ಧರಿಸಿ ಎಂದು ಸಲಹೆಯನ್ನೂ ನೀಡಿದ್ದಾರೆ.ಇದನ್ನೂ ಓದಿ:ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!
ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುವುದು, ಕೈ ತೊಳೆಯುವುದು, ಸ್ಯಾನಿಟೈಸರ್​ ಬಳಕೆ ಮಾಡುವುದು ಸೇರಿ ಸ್ವಚ್ಛತೆ ಕಾಪಾಡಿಕೊಳ್ಳುವುದು ತೀರ ಅಗತ್ಯ. ಕೊವಿಡ್​-19 ಪ್ರಸರಣಾ ಸರಪಳಿಯನ್ನು ಕಡಿತಗೊಳಿಸಲು ನಿಯಮಗಳ ಪಾಲನೆ ಮಾಡುವುದು ತೀರ ಮುಖ್ಯ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈಗ ದೇಶದಲ್ಲಿ ಅನ್​ಲಾಕ್​ ಹಂತಗಳು ನಡೆಯುತ್ತಿವೆ. ಆದರೆ ಕೆಲವು ಜನರು ಕೊವಿಡ್​-19 ನಿಯಂತ್ರಣ ನಿಯಮಪಾಲನೆ ಬಗ್ಗೆ ತೀರ ಅಸಡ್ಡೆ ತೋರುತ್ತಿದ್ದಾರೆ ಇದು ಒಳ್ಳೆಯದಲ್ಲ. ಹೀಗಾದರೆ ಕರೊನಾ ಸೋಂಕು ತಡೆಗಟ್ಟಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)
ಮಹಿಳೆಯರನ್ನು ಅಗೌರವಿಸಿದವರ ಸರ್ವನಾಶ; ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − thirteen =
Remember me
