ಗುವಾಹಟಿ:ಈ ಬಾರಿಯ ಶೌರ್ಯ ಪ್ರಶಸ್ತಿ ಪುರಸ್ಕೃತ 11 ವರ್ಷದ ಬಾಲಕಿ, ಮಿಜೋರಾಂನ ಕ್ಯಾರೋಲಿನ್​ ಮಲ್ಸಾವ್ಮುಟ್ಲ್ವಾಂಗಿ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಕಳೆದ ವರ್ಷ ಜೂನ್​ನಲ್ಲಿ ಕ್ಯಾರೋಲಿನ್​ ಅಕ್ಕಪಕ್ಕದ ಮನೆಯ ಮಕ್ಕಳ ಜತೆ ಆಟವಾಡುತ್ತಿದ್ದಳು. ಅದೇ ಸಮಯದಲ್ಲಿ ಅಲ್ಲೊಂದು ಪರಿಚಯವೇ ಇಲ್ಲದ ಏಳುವರ್ಷದ ಮಗು ಆಟವಾಡಲು ಬಂತು. ಆದರೆ ಆ ಬಗ್ಗೆ ಕ್ಯಾರೋಲಿನ್​ ಜಾಸ್ತಿ ಗಮನ ಕೊಟ್ಟಿರಲಿಲ್ಲ. ಆದರೆ ಮರುದಿನ ಪೊಲೀಸರು ಕ್ಯಾರೋಲಿನ್​ ಮನೆಯಿದ್ದ ಏರಿಯಾಕ್ಕೆ ಬಂದು, ಲುಂಗ್ಲೆ ಜಿಲ್ಲೆಯ ಹೆಣ್ಣು ಮಗುವೊಂದು ಕಾಣೆಯಾಗಿರುವ ಬಗ್ಗೆ ಸ್ಥಳೀಯರಿಗೂ ಮಾಹಿತಿ ನೀಡುತ್ತಿದ್ದರು. ಅಲ್ಲದೆ ಬಾಲಕಿಯ ಫೋಟೋ ತೋರಿಸಿ, ಈಕೆ ಕಂಡು ಬಂದರೆ ನಮಗೆ ತಿಳಿಸಿ ಎಂದು ಹೇಳಿದರು.
ಕೂಡಲೇ ಕಾರ್ಯಪ್ರವೃತ್ತಳಾದ ಕ್ಯಾರೋಲಿನ್​ ಬಾಲಕಿಯನ್ನು ಹುಡುಕಲು ಪ್ರಾರಂಭಿಸಿದರು. ಅತಿ ಶೀಘ್ರದಲ್ಲೇ ಆ ಬಾಲಕಿ ಪಕ್ಕದ ಮನೆಯಲ್ಲಿ ಇದ್ದುದನ್ನು ಪತ್ತೆಹಚ್ಚಿದಳು. ಆದರೆ ಬಾಲಕಿಯನ್ನು ಅಪಹರಿಸಿಕೊಂಡು ಬಂದಿದ್ದವ ಕ್ಯಾರೋಲಿನ್​ಳನ್ನು ನೋಡಿ, ಆಕೆಗೆ ಅನುಮಾನ ಬರಬಾರದು ಎಂದು ಆಕೆಯನ್ನು ಕಳುಹಿಸಲು ಪ್ರಯತ್ನಿಸಿದನು. ಆದರೂ ಕಾದ ಕ್ಯಾರೋಲಿನ್​, ಸಮಯ ನೋಡಿಕೊಂಡು ಆ ಬಾಲಕಿಯನ್ನು ಎತ್ತಿಕೊಂಡು ಓಡಲು ತೊಡಗಿದಳು. ಅಪಹರಣಕಾರ ಕ್ಯಾರೋಲಿನ್​ಳತ್ತ ಕಲ್ಲು ಎಸೆದು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಕ್ಯಾರೆ ಎನ್ನದ ಧೈರ್ಯಶಾಲಿ ಬಾಲಕಿ, ತನಗಿಂತ ಪುಟ್ಟ ಹುಡುಗಿಯನ್ನು ಬೆನ್ನ ಮೇಲೆ ಹಾಕಿಕೊಂಡು ಒಂದೇ ಉಸಿರಲ್ಲಿ ಮನೆಗೆ ಬಂದು ತಲುಪಿದಳು. ನಂತರ ತನ್ನ ತಂದೆ-ತಾಯಿಗೆ ಎಲ್ಲವನ್ನೂ ತಿಳಿಸಿದಳು.
ಕ್ಯಾರೋಲಿನ್​ಳ ಸಾಹಸ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೂ ಆಕೆ ಭಾಜನಳಾದಳು.  ತನ್ನ ಶೌರ್ಯವನ್ನು ಈಗಾಗಲೇ ತೋರಿದ್ದ ಕ್ಯಾರೋಲಿನ್​ ಇದೀಗ ತನ್ನ ಮನಸು ನಿಷ್ಕಲ್ಮಶ ಎಂಬುದನ್ನು ಸಾಬೀತುಮಾಡಿದ್ದಾರೆ. ತನಗೆ ಬಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯಲ್ಲಿ ಅರ್ಧದಷ್ಟನ್ನು (ಶೇ.50-10,000ರೂ) ತಾನು ರಕ್ಷಿಸಿದ ಬಾಲಕಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ದೆಹಲಿಯಿಂದ ತೆಗೆದುಕೊಂಡು ಹೋದ ಬೆಳ್ಳಿಯ ನೆಕ್ಲೇಸ್​, ಬಟ್ಟೆಗಳನ್ನು ಉಡುಗೊರೆ ನೀಡಿದ್ದಾಳೆ.
ಈ ಬಗ್ಗೆ ಮಾತನಾಡಿದ ಕ್ಯಾರೋಲಿನ್​ ತಾಯಿ, ನನ್ನ ಮಗಳಿಗೆ ಆಕೆ ರಕ್ಷಿಸಿದ ಬಾಲಕಿಯೊಂದಿಗೆ ಭಾವನಾತ್ಮಕವಾಗಿ ಸ್ನೇಹ ಬೆಳೆದಿದೆ. ಅದರಲ್ಲೂ ಆಕೆ ಬಡ ಕುಟುಂಬದವಳು ಎಂದು ಗೊತ್ತಾದಾಗಿನಿಂದ ಸಹಾಯ ಮಾಡಲು ಇಚ್ಛಿಸುತ್ತಿದ್ದಳು. ಹಾಗಾಗಿ ತಾನು ಗೆದ್ದ ಪ್ರಶಸ್ತಿಯಲ್ಲಿಯೇ ಅರ್ಧಭಾಗ ನೀಡಿದ್ದಾಳೆ. ಆ ಬಾಲಕಿಯ ಮನೆಗೇ ಹೋಗಿ ಕೊಟ್ಟು ಬಂದಿದ್ದಾಳೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
